ನವದೆಹಲಿ: ಜುಲೈ 22 ಮತ್ತು ಆಗಸ್ಟ್ 7ರ ನಡುವೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ಗೆ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಮತ್ತು 5 ಟಿ-20 ಪಂದ್ಯಗಳನ್ನು ಆಡಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಮತ್ತು BCCI ಜಂಟಿ ಪ್ರಕಟಣೆಯಲ್ಲಿ ಮಾಹಿತಿ ನೀಡಿವೆ. ಭಾರತವು ಜುಲೈ 17ರಂದು ಇಂಗ್ಲೆಂಡ್ ಪ್ರವಾಸ ಪೂರ್ಣಗೊಳಿಸಲಿದ್ದು, ಆಯ್ಕೆಯಾದವರು ನೇರವಾಗಿ ಇಂಗ್ಲೆಂಡ್ನಿಂದ ವೆಸ್ಟ್ ಇಂಡೀಸ್ಗೆ ತೆರಳಲಿದ್ದಾರೆ.
ಏಕದಿನ ಸರಣಿ ಮತ್ತು 3 ಟಿ-20 ಪಂದ್ಯಗಳನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಸೇಂಟ್ ಕಿಟ್ಸ್ & ನೆವಿಸ್ನಲ್ಲಿ ಆಯೋಜಿಸಲಾಗುವುದು. ಅಂತಿಮ ಎಡರು ಟಿ-20 ಪಂದ್ಯಗಳು ಅಮೆರಿಕದ ಫ್ಲೋರಿಡಾದ ಫೋರ್ಟ್ ಲಾಡರ್ಹಿಲ್ನಲ್ಲಿ ನಡೆಯಲಿದೆ. 3 ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 22, 24 ಮತ್ತು 27ರಂದು ಪೋರ್ಟ್ ಆಫ್ ಸ್ಪೇನ್ನ (ಟ್ರಿನಿಡಾಡ್ ಮತ್ತು ಟೊಬಾಗೊ) ಐಕಾನಿಕ್ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯಲಿವೆ. ನಂತರ 5 ಟಿ-20 ಪಂದ್ಯ ಗಳು ನಡೆಯಲಿವೆ.
ಇದನ್ನೂ ಓದಿ: ಗರ್ಲ್ ಫ್ರೆಂಡ್ ಜೊತೆ ನಾಳೆ ಸಪ್ತಪದಿ ತುಳಿಯಲಿರುವ ದೀಪಕ್ ಚಹಾರ್..!
ಮೊದಲ T20 ಜುಲೈ 29ರಂದು ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ (ಪೋರ್ಟ್ ಆಫ್ ಸ್ಪೇನ್) ನಡೆಯಲಿದೆ. ನಂತರ ಕ್ರಮವಾಗಿ ಆಗಸ್ಟ್ 1 ಮತ್ತು 2ರಂದು ಸೇಂಟ್ ಕಿಟ್ಸ್ ವಾರ್ನರ್ ಪಾರ್ಕ್ನಲ್ಲಿ 2 ಪಂದ್ಯಗಳು ನಡೆಯಲಿವೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಆಸೆಯನ್ನು ಪೂರೈಸುವ ಸಲುವಾಗಿ ಅಂತಿಮ 2 ಪಂದ್ಯಗಳು ಆಗಸ್ಟ್ 6 ಮತ್ತು 7ರಂದು ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಸಂಪೂರ್ಣ ಸರಣಿಯನ್ನು ಫ್ಯಾನ್ಕೋಡ್ನಲ್ಲಿ ಪ್ರತ್ಯೇಕವಾಗಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಮುಂಬರುವ ಸರಣಿಯ ಬಗ್ಗೆ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಮಾತನಾಡಿದ್ದು, ‘ವೆಸ್ಟ್ ಇಂಡೀಸ್ ತಂಡವು ಕ್ರಿಕೆಟ್ ಬ್ರ್ಯಾಂಡ್ ಅನ್ನು ಪುನಃಸ್ಥಾಪಿಸಲು ಉತ್ಸುಕವಾಗಿದೆ. ಈ ಬಾರಿ ನಾವು ಯುವ ತಂಡವನ್ನು ಹೊಂದಿದ್ದೇವೆ. ಟೀಂ ಇಂಡಿಯಾ ವಿರುದ್ಧ ಕಠಿಣ ಪೈಪೋಟಿ ನೀಡುವ ನಿಟ್ಟಿನಲ್ಲಿ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.
‘ನಾನು ಈ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಂತೆ, ನಮ್ಮ ಮಹತ್ವಾಕಾಂಕ್ಷೆಯು ಯಾವಾಗಲೂ ಸ್ಪರ್ಧಾತ್ಮಕವಾಗಿರಬೇಕು. ಮುಂಬರುವ T20 ಮತ್ತು 50 ಓವರ್ಗಳ ವಿಶ್ವಕಪ್ಗಾಗಿ ನಮ್ಮ ಸಿದ್ಧತೆಗಳನ್ನು ಉತ್ತಮಗೊಳಿಸಲು ಈ ಸರಣಿ ನಮಗೆ ಸಹಕಾರಿಯಾಗಲಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗರ್ಲ್ ಫ್ರೆಂಡ್ ಜೊತೆ ನಾಳೆ ಸಪ್ತಪದಿ ತುಳಿಯಲಿರುವ ದೀಪಕ್ ಚಹಾರ್..!
ಭಾರತ vs ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ
ಏಕದಿನ ಪಂದ್ಯಗಳು:-
1ನೇ ಏಕದಿನ ಪಂದ್ಯ: ಜುಲೈ 22 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)
2ನೇ ಏಕದಿನ ಪಂದ್ಯ: ಜುಲೈ 24 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)
3ನೇ ಏಕದಿನ ಪಂದ್ಯ: ಜುಲೈ 27 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)
ಟಿ-20 ಪಂದ್ಯಗಳು:-
1ನೇ ಟಿ-20: ಜುಲೈ 29: (ಬ್ರಿಯಾನ್ ಲಾರಾ ಸ್ಟೇಡಿಯಂ, ಪೋರ್ಟ್ ಆಫ್ ಸ್ಪೇನ್)
2ನೇ ಟಿ-20: ಆಗಸ್ಟ್ 1 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)
3ನೇ ಟಿ-20: ಆಗಸ್ಟ್ 2 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)
4ನೇ ಟಿ-20: ಆಗಸ್ಟ್ 6 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)
5ನೇ ಟಿ-20: ಆಗಸ್ಟ್ 7 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.