ಬೆಂಗಳೂರು: ರಾಜಕಾರಣಿಗಳು ಹಣ ನೀಡಿದರೆ ಸ್ವೀಕರಿಸಿ ಆದರೆ ನಿಮಗೆ ಇಷ್ಟ ಬಂದವರಿಗೆ ಮಾತ್ರ ಮತ ಹಾಕಿ ಎಂದು ರಿಯಲ್ ಸ್ಟಾರ್ ಉಪೇಂದ್ರ ಕೆಪಿಜೆಪಿ ಪಕ್ಷ ಘೋಷಣೆ ವೇಳೆ ಅಭಿಮಾನಿಗಳನ್ನು ಪ್ರಚೋದಿಸುವ ಭರದಲ್ಲಿ ಹೇಳಿದ್ದರು. ಈ ಹೇಳಿಕೆ ಈಗ ಉಪೇಂದ್ರ ವಿರುದ್ಧದ ದೂರು ದಾಖಲೆಗೆ ಕಾರಣವಾಗಿದೆ.
ಅ. 31ರಂದು 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'(ಕೆಪಿಜೆಪಿ) ಘೋಷಿಸಿದ ಉಪೇಂದ್ರ ನಂತರ ಭಾಷಣ ಮಾಡುವ ಸಮಯದಲ್ಲಿ ಪ್ರಜಾಪ್ರಭುತ್ವದ ವಿರೋಧಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಅವರು ಬೆಂಗಳೂರಿನ ಶೇಷಾದ್ರಿಪುರಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಪೇಂದ್ರ ಅವರು ಮತದಾರರಿಗೆ ಪ್ರಚೋದನೆ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಪ್ರೆರೆಪಿಸಿದ್ದಾರೆ ಎಂದು ನಾಗೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.