ಹಿಪ್ಪುನೇರಳೆ ಸೇವಿಸಿದರೆ ಮಹಿಳೆಯರ ಈ ಸಮಸ್ಯೆಗಳು ದೂರ ಆಗೋದು ಪಕ್ಕಾ!

ಹಿಪ್ಪುನೇರಳೆ ತಿನ್ನಲು ರುಚಿಕರ ಮಾತ್ರವಲ್ಲ, ಇದು ತುಂಬಾ ಪೌಷ್ಟಿಕವಾಗಿದೆ. ಇದು ದೇಹಕ್ಕೆ ಪ್ರಯೋಜನಕಾರಿಯಾದ ಆಹಾರ. ಜೊತೆಗೆ ಉತ್ತಮ ಪ್ರಮಾಣದ ಜೀವಸತ್ವಗಳು, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಇತ್ಯಾದಿಗಳನ್ನು ಒಳಗೊಂಡಿದೆ. ಈ ಹಣ್ಣು ಮಹಿಳೆಯರಿಗೆ ವರದಾನವೆಂದರೆ ತಪ್ಪಾಗಲ್ಲ. ಮಹಿಳೆಯರು ಹಿಪ್ಪುನೇರಳೆ ತಿನ್ನುವುದರಿಂದ ಏನು ಪ್ರಯೋಜನ ಎಂದು ಇಲ್ಲಿ ನಿಮಗೆ ತಿಳಿಸಲಿದ್ದೇವೆ. 

Written by - Bhavishya Shetty | Last Updated : May 29, 2022, 04:50 PM IST
  • ಹಿಪ್ಪುನೇರಳೆ ಸೇವನೆಯಿಂದ ಆರೋಗ್ಯ ವೃದ್ಧಿ
  • ಮಲ್ಬೆರಿಯಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ
  • ಹಿಪ್ಪುನೇರಳೆ ಸೇವನೆಯು ಮಹಿಳೆಯರ ಮೂಳೆಗಳಿಗೆ ಒಳ್ಳೆಯದು
ಹಿಪ್ಪುನೇರಳೆ ಸೇವಿಸಿದರೆ ಮಹಿಳೆಯರ ಈ ಸಮಸ್ಯೆಗಳು ದೂರ ಆಗೋದು ಪಕ್ಕಾ!  title=
mulberry benefits

ಮಲ್ಬೆರಿ ಅಥವಾ ಹಿಪ್ಪುನೇರಳೆ ಬೇಸಿಗೆಯಲ್ಲಿ ಬೆಳೆಯುವ ಹಣ್ಣು. ಇದು ಹುಳಿ ಮತ್ತು ಸಿಹಿಯ ಅನುಭವ ನೀಡುತ್ತದೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ನಾವು ನಿಮಗೆ ತಿಳಿಸುತ್ತಿದ್ದೇವೆ. ಮಲ್ಬೆರಿಯನ್ನು ಮೊದಲು ಚೀನಾದಲ್ಲಿ ಬೆಳೆಸಲಾಯಿತು. ಆದರೆ ಈಗ ಇದನ್ನು ಪ್ರಪಂಚದಾದ್ಯಂತ ಬೆಳೆಸಲಾಗುತ್ತದೆ. ಇದು ಕಪ್ಪು, ನೀಲಿ ಅಥವಾ ಕೆಂಪು ಮುಂತಾದ ಹಲವು ಬಣ್ಣಗಳಲ್ಲಿ ಕಂಡುಬರುತ್ತದೆ. 

ಇದನ್ನು ಓದಿ: Ajwain Water Benefits : ಅಜವಾನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ? 

ಹಿಪ್ಪುನೇರಳೆ ತಿನ್ನಲು ರುಚಿಕರ ಮಾತ್ರವಲ್ಲ, ಇದು ತುಂಬಾ ಪೌಷ್ಟಿಕವಾಗಿದೆ. ಇದು ದೇಹಕ್ಕೆ ಪ್ರಯೋಜನಕಾರಿಯಾದ ಆಹಾರ. ಜೊತೆಗೆ ಉತ್ತಮ ಪ್ರಮಾಣದ ಜೀವಸತ್ವಗಳು, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಇತ್ಯಾದಿಗಳನ್ನು ಒಳಗೊಂಡಿದೆ. ಈ ಹಣ್ಣು ಮಹಿಳೆಯರಿಗೆ ವರದಾನವೆಂದರೆ ತಪ್ಪಾಗಲ್ಲ. ಮಹಿಳೆಯರು ಹಿಪ್ಪುನೇರಳೆ ತಿನ್ನುವುದರಿಂದ ಏನು ಪ್ರಯೋಜನ ಎಂದು ಇಲ್ಲಿ ನಿಮಗೆ ತಿಳಿಸಲಿದ್ದೇವೆ. 

ಕಬ್ಬಿಣಾಂಶ ಸಮೃದ್ಧ: 
ಸಾಮಾನ್ಯವಾಗಿ ಮಹಿಳೆಯರು ದೇಹದಲ್ಲಿ ಕಬ್ಬಿಣಾಂಶದ ಕೊರತೆಯನ್ನು ಅನುಭವಿಸುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ರಕ್ತಹೀನತೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಹೆಚ್ಚಾಗಿ ಈ ಸಮಸ್ಯೆಯು ಗರ್ಭಾವಸ್ಥೆಯಲ್ಲಿ ಅಥವಾ ನಂತರ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಿಪ್ಪುನೇರಳೆ ಸೇವನೆಯು ಪ್ರಯೋಜನಕಾರಿ. ಏಕೆಂದರೆ ಅದರಲ್ಲಿ ಕಬ್ಬಿಣದ ಪ್ರಮಾಣವು ಅಧಿಕವಾಗಿರುತ್ತದೆ. ಜೊತೆಗೆ, ವಿಟಮಿನ್ಗಳು ಕಂಡುಬರುತ್ತವೆ, ಇದು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.

ಮೂಳೆಗಳಿಗೆ ಒಳ್ಳೆಯದು: 
30 ವರ್ಷ ವಯಸ್ಸಿನ ನಂತರ, ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಅನುಭವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಲ್ಬೆರಿ ಸೇವಿಸುವುದು ಉತ್ತಮ. ಇದು ಮೂಳೆಗಳು ಮತ್ತು ಕೀಲುಗಳ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳು ಮಲ್ಬೆರಿಯಲ್ಲಿ ಸಮೃದ್ಧವಾಗಿರುವ ಕಾರಣ ಮೂಳೆ ಮತ್ತು ಸ್ನಾಯು ನೋವನ್ನು ಗುಣಪಡಿಸುತ್ತದೆ. 

ಇದನ್ನು ಓದಿ: Monkeypox Virus Alert : ಕೊರೋನಾಗಿಂತ ತುಂಬಾ ಅಪಾಯಕಾರಿ ಈ ವೈರಸ್ : ICMR ನೀಡಿದೆ ಎಚ್ಚರಿಕೆ

ತೂಕ ನಷ್ಟಕ್ಕೆ ಸಹಾಯ: 
ತೂಕನಷ್ಟಕ್ಕೆಂದು ಅನೇಕ ಮಹಿಳೆಯರು ವ್ಯಾಯಾಮ, ಡಯಟ್ ಇತ್ಯಾದಿಗಳನ್ನು ಮಾಡುತ್ತಲೇ ಇರುತ್ತಾರೆ. ಇದರಿಂದ ಅವರು ತೂಕವನ್ನು ಕಳೆದುಕೊಳ್ಳಬಹುದು. ಇದರ ಜೊತೆಗೆ ಮಲ್ಬೆರಿ ಸೇವಿಸುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಇದು ತೂಕವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News