ದದ್ದು, ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆಮದ್ದು

Home Remedies: ಚರ್ಮದ ಕಾಯಿಲೆಗಳಾದ ದದ್ದು, ತುರಿಕೆ ಹಾಗೂ ರಿಂಗ್‌ ವರ್ಮ್‌ಗಳಂತಹ ಸಮಸ್ಯೆಗಳು ಒಂದೊಮ್ಮೆ ಎದುರಾದರೆ, ಅವು ನಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕೂಡ ಹರಡುವ ಅಪಾಯವಿರುತ್ತದೆ.  ಇವು ಫಂಗಲ್ ಕಾಯಿಲೆಗಳಾಗಿವೆ. ದದ್ದು, ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆಮದ್ದು..

Written by - Zee Kannada News Desk | Last Updated : May 28, 2022, 07:15 PM IST
  • ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳಂತಹ ಸಮಸ್ಯೆ
  • ಈ ಕಾಯಿಲೆಗಳಿಗೆ ಮನೆಮದ್ದಿನಲ್ಲಿದೆ ಪರಿಹಾರ
  • ದದ್ದು, ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆಮದ್ದು
ದದ್ದು, ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆಮದ್ದು title=
ಮನೆಮದ್ದು

Home Remedies: ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳಂತಹ ಸಮಸ್ಯೆಗಳು ಒಂದೊಮ್ಮೆ ಎದುರಾದರೆ, ಅವು ನಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕೂಡ ಹರಡುವ ಅಪಾಯವಿರುತ್ತದೆ. ಹಾಗೆ ನೋಡಿದರೆ, ಈ ಸಮಸ್ಯೆಗಳು ಫಂಗಲ್ ಕಾಯಿಲೆಗಳಾಗಿವೆ. ಇವು ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಸಾಧ್ಯತೆ ಇರುತ್ತದೆ. ಪದೇ ಪದೇ ತುರಿಕೆ ಮಾಡಿಕೊಳ್ಳುವುದರಿಂದ ತ್ವಚೆ ಕೆಂಪಾಗುತ್ತದೆ. ಈ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯಲ್ಲಿಯೇ ಇದೆ.  

ಇದನ್ನೂ ಓದಿ: 

ಅರಿಶಿಣ: ತ್ವಚೆಗೆ ಸಂಬಂಧಿಸಿದ ಹಲವು ಕಾಯಿಲೆಗಳಿಗೆ ಅರಿಶಿಣ ರಾಮಬಾಣ ಉಪಾಯವಾಗಿದೆ. ಅರಿಶಿಣದ ತುಣುಕುಗಳನ್ನು ನೀರಿನಲ್ಲಿ ಬೆರೆಸಿ ಅದರ ಪೇಸ್ಟ್ ತಯಾರಿಸಿಕೊಳ್ಳಿ ಹಾಗೂ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿ. ಅದು ಒಣಗಿದ ಬಳಿಕ ಮತ್ತೊಮ್ಮೆ ಪೇಸ್ಟ್ ಅನ್ವಯಿಸಿ. ಕೆಲವು ದಿನಗಳವರೆಗೆ ಈ ಉಪಾಯವನ್ನು ನಿರಂತರವಾಗಿ ಅನುಸರಿಸಿದರೆ ದದ್ದು, ತುರಿಕೆ ಮಾಯವಾಗುತ್ತವೆ. 

ಬೇವಿನ ಎಲೆ: ಬೇವಿನ ಎಲೆಯ ಔಷಧೀಯ ಗುಣಗಳ ಕುರಿತು ನಮ್ಮೆಲ್ಲರಿಗೂ ತಿಳಿದೇ ಇದೆ. ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳ ಚಿಕಿತ್ಸೆಗೆ ಬೇವಿನ ಎಲೆ ರಾಮಬಾಣ ಔಷಧಿಯಾಗಿದೆ. ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ತುರಿಕೆ ಇರುವ ಜಾಗಕ್ಕೆ ಅನ್ವಯಿಸಿ. ಈ ಎಲೆಗಳಲ್ಲಿ ಫಂಗಸ್ ಅನ್ನು ಹೊಡೆದೋಡಿಸುವ ಶಕ್ತಿ ಇದೆ. 

ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆ ಹಲವು ರೋಗಗಳಿಗೆ ರಾಮಬಾಣ ಔಷಧಿಯಾಗಿದೆ. ಕೊಬ್ಬರಿ ಎಣ್ಣೆಯನ್ನು ಲೆಮನ್ ಗ್ರಾಸ್ ಹಾಗೂ ಎಳ್ಳೆಣ್ಣೆಯೊಂದಿಗೆ ಬೆರೆಸಿ ಈ ಪೇಸ್ಟ್ ಅನ್ನು ತುರಿಕೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರು ಕೂಡ ಇದರ ಸಲಹೆ ನೀಡುತ್ತಾರೆ.

ಇದನ್ನೂ ಓದಿ: 

ಚಂಡು ಹೂವು: ಮದುವೆ ಸಮಾರಂಭ, ಔತಣಕೂಟಗಳ ಸೌಂದರ್ಯ ಹೆಚ್ಚಿಸಲು ಚೆಂಡು ಹೂವನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಆದರೆ, ಈ ಹೂವು ದದ್ದು, ತುರಿಕೆ ಇತ್ಯಾದಿಗಳ ನಿವಾರಣೆಗೆ ಬಳಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಈ ಸುಂದರ ಹೂವುಗಳಲ್ಲಿ ಆಂಟಿಅಲರ್ಜಿ, ಆಂಟಿಫಂಗಲ್ ಗುಣಗಳಿದ್ದು, ಇವು ತುರಿಕೆಯಿಂದ ಪರಿಹಾರ ಒದಗಿಸುತ್ತವೆ. 

ಸ್ವರ್ಣಪತ್ರ: ಇಂಡಿಯನ್ ಸೆನ್ನಾ ಅಥವಾ ನೆಲವರಿಕೆ ಅಥವಾ ಸ್ವರ್ಣಪತ್ರಗಳನ್ನು ಪುಡಿ ಮಾಡಿ, ಅದರಿಂದ ಆಯಿಂಟ್ಮೆಂಟ್ ತಯಾರಿಸಿ. ಅದನ್ನು ದದ್ದು, ತುರಿಕೆ ಇತ್ಯಾದಿ ಚರ್ಮ ಸಮಸ್ಯೆ ಇರುವ ಭಾಗಕ್ಕೆ ಅನ್ವಯಿಸಿ. ಇದರಿಂದ ತಕ್ಷಣ ಪರಿಹಾರ ಸಿಗಲಿದೆ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News