ಖ್ಯಾತ ನಿರೂಪಕಿಗೆ ಸಂಕಷ್ಟ ತಂದ ʼಗಡ್ಡʼ: ಅಪಹಾಸ್ಯ ಮಾಡಿದಕ್ಕೆ ದಾಖಲಾಯ್ತು FIR!

ಸಿಖ್ಖರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿದ ಪಂಜಾಬ್‍ನ ಅಮೃತಸರದ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು ಭಾರತಿ ಸಿಂಗ್‌ ವಿರುದ್ಧ ದೂರು ನೀಡಿದೆ. ಈ ಆಧಾರದ ಮೇರೆಗೆ ಪ್ರಕರಣ ದಾಖಲಾಗಿದೆ. 

Written by - Bhavishya Shetty | Last Updated : May 17, 2022, 12:45 PM IST
  • ನಟಿ, ನಿರೂಪಕಿ ಭಾರತಿ ಸಿಂಗ್‌ಗೆ ಸಂಕಷ್ಟ
  • ಗಡ್ಡಧಾರಿಗಳ ಬಗ್ಗೆ ಅಪಹಾಸ್ಯ ಮಾಡಿರುವ ಆರೋಪ
  • ಖ್ಯಾತ ಹಾಸ್ಯ ನಟಿ ವಿರುದ್ಧ ಎಫ್‌ಐಆರ್‌ ದಾಖಲು
ಖ್ಯಾತ ನಿರೂಪಕಿಗೆ ಸಂಕಷ್ಟ ತಂದ ʼಗಡ್ಡʼ: ಅಪಹಾಸ್ಯ ಮಾಡಿದಕ್ಕೆ ದಾಖಲಾಯ್ತು FIR! title=
Bharti Singh Controversy

ಬಾಲಿವುಡ್‌ನ ಖ್ಯಾತ ಹಾಸ್ಯ ನಟಿ, ನಿರೂಪಕಿ ಭಾರತಿ ಸಿಂಗ್‌ಗೆ ಸಂಕಷ್ಟ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಗಡ್ಡಧಾರಿಗಳ ಕುರಿತು ಅವರು ಅಪಹಾಸ್ಯ ಮಾಡಿದ್ದಾರೆ ಎಂಬ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಕುರಿತು ಭಾರತಿ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ಇದನ್ನು ಓದಿ: ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!

ಸಿಖ್ಖರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿದ ಪಂಜಾಬ್‍ನ ಅಮೃತಸರದ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು ಭಾರತಿ ಸಿಂಗ್‌ ವಿರುದ್ಧ ದೂರು ನೀಡಿದೆ. ಈ ಆಧಾರದ ಮೇರೆಗೆ ಪ್ರಕರಣ ದಾಖಲಾಗಿದೆ. 

ವೈರಲ್‌ ವಿಡಿಯೋದಲ್ಲಿ ಏನಿದೆ?:
ಶೋವೊಂದರಲ್ಲಿ ಭಾರತಿ ಸಿಂಗ್‌ ಹೇಳಿದ್ದು ಹೀಗೆ; "ಗಡ್ಡ ಮೀಸೆಯಿಂದ ಅನೇಕ ಪ್ರಯೋಜನಗಳಿವೆ. ಇದೀಗ ನೀವು ಹಾಲು ಕುಡಿಯುತ್ತೀರಿ. ಆಗ ನಿಮ್ಮ ಗಡ್ಡವನ್ನು ಬಾಯಿಯೊಳಗೆ ಹಾಕಿಕೊಳ್ಳಿ. ಅದು ನಿಮಗೆ ಶ್ಯಾವಿಗೆ ಪಾಯಸದಷ್ಟೇ ರುಚಿಯನ್ನು ನೀಡುತ್ತದೆ" ಎಂದು ಅಪಹಾಸ್ಯ ಮಾಡಿದ್ದರು. ಈ ವಿಚಾರ ತಿಳಿದ ಸಿಖ್‌ ಮುಖಂಡರು, ನಮ್ಮ ಧಾರ್ಮಿಕ ನಂಬಿಕೆಯ ಭಾಗವಾದ ಗಡ್ಡಕ್ಕೆ ಭಾರತಿ ಸಿಂಗ್‌ ಅಗೌರವ ತೋರಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದೆ. 

 

 

ಇದನ್ನು ಓದಿ: ‘ವಿಕ್ರಾಂತ್ ರೋಣ’ಗೆ ಸಲ್ಮಾನ್ ಸಾಥ್ : ಬಾಲಿವುಡ್ ಅಂಗಳದಲ್ಲಿ ಕಿಚ್ಚನ ಹವಾ!

ಕ್ಷಮೆಯಾಚಿಸಿದ ಭಾರತಿ ಸಿಂಗ್‌:
 ಎಫ್‌ಆರ್‌ ದಾಖಲಾಗುತ್ತಿದ್ದಂತೆ ಎಚ್ಚೆತ್ತ ನಟಿ ಸೋಶಿಯಲ್‌ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋವೊಂದನ್ನು ಶೇರ್‌ ಮಾಡಿರುವ ಅವರು, "ನಾನು ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ. ದಯವಿಟ್ಟು ಆ ವಿಡಿಯೋವನ್ನು ಪೂರ್ಣವಾಗಿ ನೋಡಿ. ಅದರಲ್ಲಿ ನಾನು ಏನು ಹೇಳಿಲ್ಲ. ಅಲ್ಲದೆ ಯಾವುದೇ ಧರ್ಮ, ಜಾತಿಯ ಕುರಿತು ಅಪಹಾಸದಯ ಮಾಡಿಲ್ಲ" ಎಂದು ಹೇಳಿದ್ದಾರೆ. 

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News