ನವದೆಹಲಿ: ನೈಸರ್ಗಿಕ ಅನಿಲದ (ಸಿಎನ್ಜಿ) ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ದೆಹಲಿ-ಎನ್ಸಿಆರ್ನಲ್ಲಿ ಪ್ರತಿ ಕೆಜಿಗೆ 2 ರೂ.ಗಳಷ್ಟು ಹೆಚ್ಚಳವಾಗಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ದೇಶದ ಇತರ ಭಾಗಗಳಲ್ಲಿಯೂ CNG ಬೆಲೆಯನ್ನು ಹೆಚ್ಚಿಸಿದೆ. ಸಿಎನ್ಜಿಯ ಹೊಸ ದರಗಳು ಇಂದು ಅಂದರೆ ಭಾನುವಾರ ಬೆಳಗ್ಗೆಯಿಂದಲೇ ಜಾರಿಗೆ ಬಂದಿದೆ.
ದೆಹಲಿ-ಎನ್ಸಿಆರ್ನಲ್ಲಿ ಈಗ ಸಿಎನ್ಜಿ ಬೆಲೆ ಎಷ್ಟು?
ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ನ ದರ ಹೆಚ್ಚಳದ ನಂತರ, ಸಿಎನ್ಜಿ ಬೆಲೆ ಈಗ ದೆಹಲಿಯಲ್ಲಿ ಕೆಜಿಗೆ 73.61 ರೂ., ನೋಯ್ಡಾದಲ್ಲಿ ಕೆಜಿಗೆ 76.17 ರೂ. ಮತ್ತು ಗುರುಗ್ರಾಮ್ನಲ್ಲಿ ಕೆಜಿಗೆ 81.94 ರೂ. ಆಗಿದೆ.
ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ನಿಂದ ದರ ಪರಿಷ್ಕರಣೆ
Indraprastha Gas Limited (IGL) has hiked the price of Compressed Natural Gas (CNG) in Delhi by Rs 2 per kg to Rs 73.61 per kg.
The new price will come into effect from tomorrow, May 15 pic.twitter.com/yIdAl4jXY3
— ANI (@ANI) May 14, 2022
ಏತನ್ಮಧ್ಯೆ, ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ದೇಶದ ಇತರ ಭಾಗಗಳಲ್ಲಿಯೂ ಸಿಎನ್ಜಿ ಬೆಲೆಯನ್ನು ಹೆಚ್ಚಿಸಿದೆ. ಹರಿಯಾಣದ ರೇವಾರಿಯಲ್ಲಿ ಸಿಎನ್ಜಿ ಪ್ರತಿ ಕೆಜಿಗೆ 84.07 ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ ಕರ್ನಾಲ್ ಮತ್ತು ಕೈತಾಲ್ನಲ್ಲಿ ಕೆಜಿಗೆ 82.27 ರೂ. ಇದೆ. ಕಾನ್ಪುರ್, ಹಮೀರ್ಪುರ ಮತ್ತು ಫತೇಪುರ್ನಲ್ಲಿ ಕೆಜಿಗೆ 85.40 ರೂ.ಗೆ ಏರಿಕೆಯಾಗಿದೆ ಮತ್ತು ಅಜ್ಮೀರ್, ಪಾಲಿ ಮತ್ತು ರಾಜ್ಸಮಂದ್ನಲ್ಲಿ ಕೆಜಿಗೆ 83.88 ರೂ.ನಂತೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: Money Earning: ಕೇವಲ ಮೂರು ತಿಂಗಳಲ್ಲಿ ಈ ಕೆಲಸ ಮಾಡಿ ಮೂರು ಲಕ್ಷ ಸಂಪಾದಿಸಿ
ಸಿಟಿ ಗ್ಯಾಸ್ ವಿತರಕರಿಂದ ಬೆಲೆ ಹೆಚ್ಚಳ
ಕಳೆದ ವರ್ಷ ಅಕ್ಟೋಬರ್ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಅನಿಲ ಬೆಲೆಗಳು ಏರಲು ಪ್ರಾರಂಭಿಸಿದಾಗ ನಗರ ಪ್ರದೇಶದ ಗ್ಯಾಸ್ ವಿತರಕರು ಕಾಲಕಾಲಕ್ಕೆ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ.
ಈ ಮೊದಲು ಯಾವಾಗ ಬೆಲೆ ಹೆಚ್ಚಳವಾಗಿತ್ತು?
ಇದಕ್ಕೂ ಮೊದಲು ದೆಹಲಿ-ಎನ್ಸಿಆರ್ನಲ್ಲಿ ಸಿಎನ್ಜಿ ಬೆಲೆಯನ್ನು ಏಪ್ರಿಲ್ 14ರಂದು ಹೆಚ್ಚಿಸಲಾಗಿತ್ತು. ಅಂದು ಸಿಎನ್ಜಿ ದರವನ್ನು ಕೆಜಿಗೆ 2.50 ರೂ. ಹೆಚ್ಚಳ ಮಾಡಲಾಗಿತ್ತು. ಏಪ್ರಿಲ್ 14ರಂದು ದೆಹಲಿಯಲ್ಲಿ ಸಿಎನ್ಜಿ ಬೆಲೆ ಕೆಜಿಗೆ 69.11 ರಿಂದ 71.61 ಕ್ಕೆ ಏರಿಕೆಯಾಗಿದೆ. ನೈಸರ್ಗಿಕ ಅನಿಲವನ್ನು ‘ಸಂಕುಚಿತಗೊಳಿಸಿದಾಗ’ ಅದು CNG ಆಗುತ್ತದೆ, ಇದನ್ನು ವಾಹನಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ.
ಇದನ್ನೂ ಓದಿ: Bank-Post Office ವಹಿವಾಟಿನ ನಿಯಮಗಳಲ್ಲಿ ಬದಲಾವಣೆ, ನಿಮಗೂ ತಿಳಿದಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.