ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರು ಪ್ರಶ್ನೆ ಪತ್ರಿಕೆ ಇಟ್ಟ ತೆಲಂಗಾಣ ಸಚಿವ..!

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಸಚಿವ ಕೆ.ಟಿ. ರಾಮರಾವ್ ಅವರು ಶುಕ್ರವಾರ ತೆಲಂಗಾಣಕ್ಕೆ ಭೇಟಿ ನೀಡುವ ಮುನ್ನಾ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

Written by - Zee Kannada News Desk | Last Updated : May 14, 2022, 05:09 PM IST
  • ತೆಲಂಗಾಣಕ್ಕೆ ಭೇಟಿ ನೀಡಿರುವ ಅಮಿತ್ ಶಾ ಅವರು ಶನಿವಾರದಂದು ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
  • ತೆಲಂಗಾಣಕ್ಕೆ ಎಪಿ ಮರುಸಂಘಟನೆ ಕಾಯ್ದೆಯಡಿ ನೀಡಿದ್ದ ಭರವಸೆಗಳಲ್ಲಿ ಯಾವ ಭರವಸೆಯನ್ನು ಈಡೇರಿಸಿದ್ದಾರೆ ಎಂಬುದನ್ನು ಬಿಜೆಪಿ ಹೇಳಲಿ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರು ಪ್ರಶ್ನೆ ಪತ್ರಿಕೆ ಇಟ್ಟ ತೆಲಂಗಾಣ ಸಚಿವ..!  title=

ನವದೆಹಲಿ: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಸಚಿವ ಕೆ.ಟಿ. ರಾಮರಾವ್ ಅವರು ಶುಕ್ರವಾರ ತೆಲಂಗಾಣಕ್ಕೆ ಭೇಟಿ ನೀಡುವ ಮುನ್ನಾ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

'ಬಿಜೆಪಿಯಿಂದ ತೆಲಂಗಾಣಕ್ಕೆ ಮಾಡುತ್ತಿರುವ ಅನ್ಯಾಯದ ಕುರಿತು ತಮ್ಮ  27 ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಷಾ ಅವರಿಗೆ ಕೆಟಿಆರ್ ಮನವಿ ಮಾಡಿದ್ದಾರೆ.ಕಳೆದ ಎಂಟು ವರ್ಷಗಳಿಂದ ತೆಲಂಗಾಣದ ಮೇಲೆ ಬಿಜೆಪಿ ವಿಷ ಉಗುಳುತ್ತಿದೆ ಎಂದ ಅವರು, ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಒಮ್ಮೊಮ್ಮೆ ತೆಲಂಗಾಣ ಪ್ರವಾಸ ಮಾಡಿ ಇಲ್ಲಿನ ಜನರ ನಡುವೆ ದ್ವೇಷ ಹರಡಲು ಯತ್ನಿಸುವುದು ಮಾತ್ರ ಗೊತ್ತಿದೆ ಎಂದು ದೂರಿದರು. 

ತೆಲಂಗಾಣಕ್ಕೆ ಭೇಟಿ ನೀಡಿರುವ ಅಮಿತ್ ಶಾ ಅವರು ಶನಿವಾರದಂದು ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದೆ ವೇಳೆ ಅಮಿತ್ ಷಾ ವಿರುದ್ಧ ಕಿಡಿ ಕಾರಿರುವ ಕೆಟಿಆರ್ ತೆಲಂಗಾಣಕ್ಕೆ ನೀಡಿದ ಒಂದೇ ಒಂದು ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ, ಆದರೆ ಗುಜರಾತ್‌ನಂತಹ ರಾಜ್ಯಗಳ ಪ್ರತಿಯೊಂದು ಅಗತ್ಯವನ್ನು ಈಡೇರಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಯಾವಾಗಲೂ ತೆಲಂಗಾಣ ಚಳವಳಿಯನ್ನು ಅವಮಾನಿಸುತ್ತದೆ ಎಂದು ಅವರು ಹೇಳಿದ್ದಾರೆ."ನಾವು ತೆಲಂಗಾಣ ಜನರ ಹಕ್ಕುಗಳಿಗಾಗಿ ಹೋರಾಡುತ್ತೇವೆ ಮತ್ತು ಎಪಿ ಮರುಸಂಘಟನೆ ಕಾಯಿದೆಯಡಿ ನಮ್ಮ ಹಕ್ಕಿನ ಪಾಲನ್ನು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.

ತೆಲಂಗಾಣಕ್ಕೆ ಯಾವುದೇ ಒಳ್ಳೆಯದನ್ನು ಮಾಡದ ಅಥವಾ ಭವಿಷ್ಯದಲ್ಲಿ ತಮ್ಮ ನಿಲುವನ್ನು ಬದಲಾಯಿಸದ ಬಿಜೆಪಿಯ ನಿಜವಾದ ಬಣ್ಣ ತೆಲಂಗಾಣದ ಜನರಿಗೆ ತಿಳಿದಿದೆ ಎಂದು ಕೆಟಿಆರ್ ಹೇಳಿದರು.ತೆಲಂಗಾಣದ ಬಗ್ಗೆ ಬಿಜೆಪಿಯ ಮಲತಾಯಿ ಧೋರಣೆ ಬಗ್ಗೆ ಎಚ್ಚರಿಕೆ ನೀಡಿದ ಅವರು,ಈ ವಿಶ್ವಾಸದ್ರೋಹಿ ನಾಯಕರಿಗೆ ಇಲ್ಲಿನ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಅಮಿತ್ ಷಾ ತೆಲಂಗಾಣ ಭೇಟಿ ಹಿನ್ನಲೆಯಲ್ಲಿ ಕೆಟಿಆರ್ ಸರಣಿ ಪ್ರಶ್ನೆಗಳನ್ನು ಅವರ ಮುಂದೆ ಇಟ್ಟಿದ್ದಾರೆ.

ತೆಲಂಗಾಣಕ್ಕೆ ಎಪಿ ಮರುಸಂಘಟನೆ ಕಾಯ್ದೆಯಡಿ ನೀಡಿದ್ದ ಭರವಸೆಗಳಲ್ಲಿ ಯಾವ ಭರವಸೆಯನ್ನು ಈಡೇರಿಸಿದ್ದಾರೆ ಎಂಬುದನ್ನು ಬಿಜೆಪಿ ಹೇಳಲಿ? ಕಾಜಿಪೇಟ್‌ನಲ್ಲಿ ರೈಲ್ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಟಿಆರ್‌ಎಸ್ ನಾಯಕರು ಒತ್ತಾಯಿಸಿದಾಗ ಬಿಜೆಪಿ ಕೈ ತೊಳೆದುಕೊಂಡಿದ್ದು ನಿಜವಲ್ಲವೇ?

'ಕೇಂದ್ರದ ಬಿಜೆಪಿ ಸರಕಾರ ಗುಜರಾತ್‌ಗೆ 20 ಕೋಟಿ ರೂ.ಗೆ ರೈಲ್ ಕೋಚ್ ಫ್ಯಾಕ್ಟರಿ ಮಂಜೂರು ಮಾಡಿದೆ, ನೀವು ಗುಜರಾತ್‌ಗೆ ರೈಲು ಕೋಚ್ ಫ್ಯಾಕ್ಟರಿ ಮಂಜೂರು ಮಾಡುವಾಗ,ತೆಲಂಗಾಣಕ್ಕೆ ಏಕೆ ನೀಡಬಾರದು? ತೆಲಂಗಾಣದ ಬಗ್ಗೆ ಏಕೆ ಈ ಪಕ್ಷಪಾತ? ಎಂದು ಅವರು ಪ್ರಶ್ನಿಸಿದ್ದಾರೆ.

'ಎನ್‌ಡಿಎ ಸರ್ಕಾರವು ತೆಲಂಗಾಣಕ್ಕೆ ಮಂಜೂರು ಮಾಡಿದ ಒಂದೇ ಒಂದು ಕೇಂದ್ರೀಯ ಶಿಕ್ಷಣ ಸಂಸ್ಥೆಯನ್ನು ನೀವು ಹೆಸರಿಸಬಹುದೇ? ಎಪಿ ಮರುಸಂಘಟನೆ ಕಾಯ್ದೆಯಲ್ಲಿ ಅದೇ ಭರವಸೆ ನೀಡಿದ್ದರೂ ಬಯ್ಯಾರಂ ಸ್ಟೀಲ್ ಪ್ಲಾಂಟ್ ಅನ್ನು ತೆಲಂಗಾಣಕ್ಕೆ ಏಕೆ ಹಂಚಿಕೆ ಮಾಡಲಿಲ್ಲ ಎಂದು ನೀವು ಉತ್ತರಿಸಬಹುದೇ?" ಎಂದು ಅವರು ಕೇಳಿದ್ದಾರೆ.

'ಜಾಗತಿಕ ಸಂಸ್ಥೆಗಳಿಗೆ ತೆಲಂಗಾಣ ಅಗ್ರ ಹೂಡಿಕೆಯ ತಾಣವಾಗಿದೆ. ಆದರೂ, ತೆಲಂಗಾಣಕ್ಕೆ ಯಾವುದೇ ಕೈಗಾರಿಕಾ ಪ್ರೋತ್ಸಾಹ ನೀಡುತ್ತಿಲ್ಲವೇಕೆ ? ಅದಕ್ಕೆ ನಿಮ್ಮ ಬಳಿ ಉತ್ತರವಿದೆಯೇ?" ಎಂದು ಕೆಟಿಆರ್ ಪ್ರಶ್ನಿಸಿದರು.

ತೆಲಂಗಾಣದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಹೂಡಿಕೆ ಪ್ರದೇಶವನ್ನು (ಐಟಿಐಆರ್ ಯೋಜನೆ) ರದ್ದುಗೊಳಿಸಿದ್ದು, ಐಟಿ ಕ್ಷೇತ್ರದಲ್ಲಿ ನಗರದ ಕ್ಷಿಪ್ರ ಅಭಿವೃದ್ಧಿಯನ್ನು ನಿರಾಕರಿಸುವುದು ತೆಲಂಗಾಣದ ವಿರುದ್ಧ ಬಿಜೆಪಿ ಹೇಗೆ ಪಿತೂರಿ ನಡೆಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ತೆಲಂಗಾಣಕ್ಕೆ ಐಟಿಐಆರ್ ಸ್ಥಾನಮಾನವನ್ನು ತಿರಸ್ಕರಿಸಿದ ನಂತರ, ಐಟಿ ಕ್ಷೇತ್ರದ ಅಭಿವೃದ್ಧಿಗೆ ಪರ್ಯಾಯ ಆಯ್ಕೆಯಾಗಿ ಬಿಜೆಪಿ ಸರ್ಕಾರ ಪರಿಚಯಿಸಿದ ಕನಿಷ್ಠ ಒಂದು ಕಾರ್ಯಕ್ರಮವನ್ನಾದರೂ ನೀವು ಹೆಸರಿಸಬಹುದೇ? ಎಂದು ಅವರು ಪ್ರಶ್ನಿಸಿದ್ದಾರೆ.

'ಐಟಿಐಆರ್ ತಿರಸ್ಕಾರದಿಂದ ಐಟಿ ಕಂಪನಿಗಳಲ್ಲಿ ಅವಕಾಶ ಕಳೆದುಕೊಂಡ ತೆಲಂಗಾಣದ ಯುವಕರಿಗೆ ನಿಮ್ಮ ಬಳಿ ಏನು ಉತ್ತರವಿದೆಯೇ?' ಎಂದು ಅವರು ಶಾ ಅವರನ್ನು ಪ್ರಶ್ನಿಸಿದ್ದಾರೆ.

'ಐಟಿ ಕ್ಷೇತ್ರವು ತ್ವರಿತ ವೇಗದಲ್ಲಿ ಪ್ರಗತಿ ಸಾಧಿಸುತ್ತಿರುವ ತೆಲಂಗಾಣಕ್ಕೆ ನೀವು ಹೊಸ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ಗಳನ್ನು ಏಕೆ ಮಂಜೂರು ಮಾಡುತ್ತಿಲ್ಲ?' ಎಂದು ಕೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News