ವಿಶಾಖಪಟ್ಟಣಂ: ಅಸಾನಿ ಚಂಡಮಾರುತ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಅಲೆಗಳು ಹೆಚ್ಚಾಗುತ್ತಿವೆ. ಹೀಗಿರುವಾಗ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಚಿನ್ನದ ಬಣ್ಣ ಹೊಂದಿರುವ ರಥವೊಂದು ಅಲೆಯಲ್ಲಿ ತೇಲಿಬಂದಿದ್ದು, ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥಾಯ್ಲೆಂಡ್ ದೇಶದಿಂದ ಬಂದಿರಬಹುದು ಎನ್ನಲಾಗಿದೆ.
ಇದನ್ನು ಓದಿ: Asani Cyclone Alert: 'ಅಸಾನಿ' ಚಂಡಮಾರುತದ ಬಗ್ಗೆ ಐಎಂಡಿ ಎಚ್ಚರಿಕೆ- ಪರಿಸ್ಥಿತಿ ಎದುರಿಸಲು 50 ತಂಡಗಳ ನಿಯೋಜನೆ
ಮಂಗಳವಾರ ಸಂಜೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಈ ರಥ ಪತ್ತೆಯಾಗಿದೆ. ಗ್ರಾಮಸ್ಥರು ಹಗ್ಗಗಳನ್ನು ಕಟ್ಟಿ ದಡಕ್ಕೆ ಆ ರಥವನ್ನು ಎಳೆದು ತಂದಿದ್ದಾರೆ. ಈ ರಥದ ಶೈಲಿಯು ಆಗ್ನೇಯ ಏಷ್ಯಾ ರಾಷ್ಟ್ರಗಳ ಪ್ರಕಾರವನ್ನು ಹೋಲುತ್ತಿದೆ. ಈ ಹಿನ್ನೆಲೆಯಲ್ಲಿಯೇ ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥಾಯ್ಲೆಂಡ್ ದೇಶದಿಂದ ಬಂದಿರಬಹುದು ಎಂದು ಊಹಿಸಲಾಗಿದೆ.
ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಜೊತೆ ಈ ಬಗ್ಗೆ ಮಾಹಿತಿ ಪಡೆದಾಗ, "ಸಮುದ್ರ ತೀರದಲ್ಲಿ ಯಾವುದೋ ಚಲನಚಿತ್ರದ ಚಿತ್ರೀಕರಣಕ್ಕೆ ಈ ರಥವನ್ನು ಬಳಸಲಾಗಿದೆ ಎಂದು ನಾವು ಅಂದಾಜಿಸಿದ್ದೇವೆ. ಇನ್ನು ಸಮುದ್ರದಲ್ಲಿ ಚಂಡಮಾರುತದ ಅಬ್ಬರ ಹೆಚ್ಚಾದ ಕಾರಣ ಇದು ತೇಲಿಕೊಂಡು ಶ್ರೀಕಾಕುಳಂ ತೀರಕ್ಕೆ ಬಂದಿದೆ" ಎಂದು ಹೇಳಿದರು.
ಅಸಾನಿ ಚಂಡಮಾರುತ ಅಬ್ಬರವು ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದೀಗ ಅಸಾನಿ ಚಂಡಮಾರುತ ತನ್ನ ದಿಕ್ಕನ್ನು ಬದಲಿಸಿದ್ದು, ಸಮೀಪದ ಕಾಕಿನಾಡ ಕರಾವಳಿಯನ್ನು ಮುಟ್ಟಲಿದೆ. ಕಾಕಿನಾಡ ಕರಾವಳಿಯನ್ನು ಮುಟ್ಟಿದ ನಂತರ ಮತ್ತೆ ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಸಮುದ್ರಕ್ಕೆ ಬರಲಿದೆ ಎಂದು ವಿಶಾಖಪಟ್ಟಣ ಚಂಡಮಾರುತ ಎಚ್ಚರಿಕೆ ಕೇಂದ್ರದ ನಿರ್ದೇಶಕಿ ಸುನಂದಾ ತಿಳಿಸಿದ್ದಾರೆ. ಹವಾಮಾನ ಇಲಾಖೆಯು ಹಲವೆಡೆ ಭಾರೀ ಮಳೆ ಮತ್ತು ಪ್ರವಾಹದ ಎಚ್ಚರಿಕೆ ನೀಡಿದೆ.
ಇದನ್ನು ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಣ ಸಚಿವರ ಸೊಸೆಯ ಮೃತದೇಹ ಪತ್ತೆ!?
ಆಂಧ್ರಪ್ರದೇಶಕ್ಕೆ ಅಸಾನಿ ಚಂಡಮಾರುತದ ಎಚ್ಚರಿಕೆ ಮತ್ತು ರೆಡ್ ಅಲರ್ಟ್ ನೀಡಲಾಗಿದೆ. ನಿನ್ನೆಯವರೆಗೆ, ಟ್ರ್ಯಾಕ್ ವಾಯುವ್ಯ ದಿಕ್ಕನ್ನು ತೋರಿಸುತ್ತಿತ್ತು ಆದರೆ ಕಳೆದ 6 ಗಂಟೆಗಳಲ್ಲಿ ಅದು ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಹಾಗಾಗಿ ಇದು ನಮ್ಮ ಆಂಧ್ರಪ್ರದೇಶಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.