Happy mother's day: ಅಮ್ಮ ಎಂದರೆ ಅಷ್ಟೇ ಸಾಕೇ?

Happy mother's day: ಇಂದು ವಿಶ್ವ ಅಮ್ಮಂದಿರ ದಿನ. ಅಮ್ಮನ ತ್ಯಾಗ, ಪ್ರೀತಿಗೆ ಗೌರವ ಸಲ್ಲಿಸುವ ಈ ದಿನ ಪ್ರತಿ ತಾಯಿಗೆ ಸಮರ್ಪಿತ. ಈ ದಿನ ಕೇವಲ ಇಂದಿಗೆ ಮಾತ್ರ ಮೀಸಲಾಗುವ ಬದಲು ಪ್ರತಿ ದಿನ ಅಮ್ಮನ ಆರಾಧನೆ ಆಗಬೇಕು. 

Written by - Chetana Devarmani | Last Updated : May 8, 2022, 11:53 AM IST
  • ಅಮ್ಮ ಎಂದರೆ ಕಣ್ಣಿಗೆ ಕಾಣುವ ದೇವತೆ
  • ಜೀವನದುದ್ದಕ್ಕೂ ಜೊತೆಯಾಗಿ ನಿಲ್ಲುವ ತಾಯಿ
  • ಅಮ್ಮ ಎಂದರೆ ಅಷ್ಟೇ ಸಾಕೇ?
Happy mother's day: ಅಮ್ಮ ಎಂದರೆ ಅಷ್ಟೇ ಸಾಕೇ?  title=
ಅಮ್ಮ

ಅಮ್ಮ ಎಂದರೆ ಕಣ್ಣಿಗೆ ಕಾಣುವ ದೇವತೆ. ಜೀವನದುದ್ದಕ್ಕೂ ಜೊತೆಯಾಗಿ ನಿಲ್ಲುವ ತಾಯಿ, ಸದಾ ಮಕ್ಕಳ ಯೋಗ ಕ್ಷೇಮವನ್ನೇ ಬಯಸುತ್ತಾಳೆ. ಹುಟ್ಟುವ ಮೊದಲೆ ನಮ್ಮನ್ನು ಪ್ರೀತಿಸುವ ಯಾವುದಾದರೂ ಜೀವ ಇದ್ದರೆ ಅದು ಅಮ್ಮ ಮಾತ್ರ. ಪ್ರತಿವರ್ಷ ಮೇ ಎರಡನೇ ಭಾನುವಾರ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ನಮಗಾಗಿ ಮಿಡಿಯುವ ಜೀವಕ್ಕಾಗಿ ಈ ದಿನವನ್ನು ಮೀಸಲಿಡಲಾಗಿದೆ. 

ಇದನ್ನೂ ಓದಿ: 

ಯಾವುದೇ ಫಲಾಪೇಕ್ಷೆ ಇಲ್ಲದೆ ಮಕ್ಕಳಿಗಾಗಿ, ಕುಟುಂಬಕ್ಕಾಗಿ ಸದಾ ದುಡಿಯುವ ನಿಸ್ವಾರ್ಥ ಜೀವ  ಅಮ್ಮ. ಮಕ್ಕಳು ಏನೇ ಮಾಡಿದರೂ ಸದಾ ಬೆನ್ನೆಲುಬಾಗಿ ನಿಲ್ಲುವ ಮಮತಾಮಯಿ ಅಮ್ಮ. ಅಮ್ಮನ ಈ ತ್ಯಾಗ, ಪ್ರೀತಿಗೆ ಯಾವುದೂ ಸರಿಸಾಟಿಯಿಲ್ಲ. ಆಕೆಯ ಈ ಅಕ್ಕರೆಗೆ ಸರಿಯಾದ ಮನ್ನಣೆ, ಗೌರವ ನೀಡುವುದು ಪ್ರತಿ ಮಗುವಿನ ಕರ್ತವ್ಯ ಕೂಡಾ ಹೌದು. 

ಇಂದು ವಿಶ್ವ ಅಮ್ಮಂದಿರ ದಿನ. ಅಮ್ಮನ ತ್ಯಾಗ, ಪ್ರೀತಿಗೆ ಗೌರವ ಸಲ್ಲಿಸುವ ಈ ದಿನ ಪ್ರತಿ ತಾಯಿಗೆ ಸಮರ್ಪಿತ. ಈ ದಿನ ಕೇವಲ ಇಂದಿಗೆ ಮಾತ್ರ ಮೀಸಲಾಗುವ ಬದಲು ಪ್ರತಿ ದಿನ ಅಮ್ಮನ ಆರಾಧನೆ ಆಗಬೇಕು. ಗರ್ಭದಲ್ಲಿರುವ ಮಗು ಭೂಮಿಗೆ ಬರುವ ವರೆಗೂ ಹೊತ್ತು, ಕಂದಮ್ಮನಿಗೆ ಜನ್ಮ ನೀಡಿ ಪುಟ್ಟ ಪಿಳಿ ಪಿಳಿ ಕಣ್ಣು ಗಳಲ್ಲೇ ತನ್ನ ಜಗವನ್ನು ಕಾಣುವ ಜೀವವೇ ತಾಯಿ. ಮಗುವಿಗೆ ಬುದ್ಧಿ ಬರುವವರೆಗೆ ಸಾಕಿ ಸಲುಹಿ ಆತ ತನ್ನ ಜೀವನ ರೂಪಿಸಿ ಕೊಳ್ಳುವವರೆಗೆ ಕಾಯುವ ಕರುಣಾಮಯಿ. ಅದೇ ಕಾರಣಕ್ಕೆ ಎಲ್ಲರಿಗೂ ಪ್ರತಿದಿನವೂ ಅಮ್ಮಂದಿರ ದಿನವೇ. 

ಮಗು ಶಾಲೆಗೆ ಹೋಗುವಾಗ ತನ್ನ ಕಂದ ವಿದ್ಯಾವಂತನಾಗಲಿ ಎಂದು ಹಾರೈಸಿ, ಆತನ ಉನ್ನತ ವ್ಯಾಸಂಗದ ವೇಳೆ ತನ್ನ ಕರುಳ ಕುಡಿಯ ಶ್ರೇಯೋಭಿವೃದ್ಧಿ ಬಯಸಿ, ತಾನು ಹೆತ್ತ ಮಗು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳಲಿ ಎಂದು ಹರಸುವ ಹೃದಯವೇ ಅಮ್ಮ. ಹೀಗೆ ಒಬ್ಬ ಮನುಷ್ಯನ ಜೀವನದುದ್ದಕ್ಕೂ ಆಸರೆ ಆಗುವ, ಸಂತೈಸುವ ಅಮ್ಮನನ್ನು ಕೊನೆಯವರೆಗೂ ಕಾಪಾಡುವುದು ಕಾಳಜಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. 

ಇದನ್ನೂ ಓದಿ: 

ಎಷ್ಟೇ ದಣಿವಾಗುದ್ದರೂ ಅಮ್ಮನ ಮಡಿಲಲ್ಲಿ ಮಲಗಿದಾಗ ಸಿಗುವ ನೆಮ್ಮದಿ ಇದೆಯಲ್ಲ ಅದು ಸ್ವರ್ಗಕ್ಕೆ ಸಮ. ಜೀವನ ಜಂಜಾಟಗಳ ಮಧ್ಯೆ ಸಿಲುಕಿ ನಲಗುವಾಗ ಅಮ್ಮ ನೀಡುವ ಧೈರ್ಯ ನಮಗೆ ಆನೆ ಬಲದಂತೆ ಎನಿಸುತ್ತದೆ. ಜೀವನದಲ್ಲಿ ಸೋತು ಕುಳಿತಾಗ ತಾಯಿ ಸ್ಫೂರ್ತಿಯ ಹೇಳುವ ಮಾತು ನಮ್ಮ ಮನಸ್ಸನ್ನು ಸದೃಢಗೊಳಿಸಿ ಗೆಲುವಿನೆಡೆಗೆ ಕೊಂಡೊಯ್ಯುತ್ತದೆ. ಸದಾ ಕಾಲ ಮಗುವಿನ ಬೆನ್ನೆಲುಬಾಗಿ ನಿಲ್ಲು ತಾಯಿ, ಸೋತಾಗ ಕೈ ಹಿಡಿದು ಎತ್ತುವ, ಗೆದ್ದಾಗ ನಿಶ್ಕಲ್ಮಶವಾಗಿ ಸಂಭ್ರಮಿಸುವ ಏಕೈಕ ಜೀವ. 

ಭುವಿಯ ಮೇಲಿನ ಪ್ರತಿ ತಾಯಿ ಹೃದಯಕ್ಕೂ ಜೀ ಕನ್ನಡ ನ್ಯೂಸ್‌ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು. ಎಲ್ಲರಿಗೂ HAPPY MOTHERʼS DAY. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News