ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಯಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಹಕಾರಿ ವ್ಯವಸ್ಥೆಗೆ ಜಿಎಸ್ಟಿ ಒಂದು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತ ದೇಶದ ಆರ್ಥಿಕತೆಯಲ್ಲಿ ಜಿಎಸ್ಟಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ದೇಶದ ಜನತೆಗೆ ಶುಭ ಹಾರಿಸಿರುವ ಮೋದಿ, ಇದು 'ಟೀಂ ಇಂಡಿಯಾ'ದ ಉತ್ಸಾಹವಾಗಿದೆ ಎಂದಿದ್ದಾರೆ.
I congratulate the people of India on the special occasion of GST completing 1 year.
A vibrant example of cooperative federalism and a ‘Team India’ spirit, GST has brought a positive change in the Indian economy. #GSTForNewIndia https://t.co/PvZKtl2YIE
— Narendra Modi (@narendramodi) July 1, 2018
ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯು ಭಾರತದ ಆರ್ಥಿಕತೆಯಲ್ಲಿ ಪ್ರಗತಿ, ಸರಳತೆ ಮತ್ತು ಪಾರದರ್ಶಕತೆಯನ್ನು ತಂದಿದೆ. ಅಲ್ಲದೆ ಔಪಚಾರಿಕತೆ, ಉತ್ಪಾದಕತೆಗೆ ಶಕ್ತಿ ತುಂಬಿದೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟು, ವ್ಯಾಪಾರವನ್ನು ಸರಾಗವಾಗಿಸಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
GST has brought growth, simplicity and transparency. It is:
Boosting formalisation.
Enhancing productivity.
Furthering ‘Ease of Doing Business.’
Benefitting small and medium enterprises. #GSTForNewIndia pic.twitter.com/IGGwUm59rB
— Narendra Modi (@narendramodi) July 1, 2018
ಇದೇ ವೇಳೆ, ಕೇಂದ್ರ ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರೂ ಸಹ ಟ್ವೀಟ್ ಮಾಡಿದ್ದಾರೆ. ಜಿಎಸ್ಟಿ ವರ್ಷಾಚರಣೆಗೆ ದೇಶದ ಜನತೆಗೆ ಶುಭ ಕೋರಿದ್ದು, ಭಾರತದಲ್ಲಿ ಜಿಎಸ್ಟಿ ರೂಪಾಂತರಿತ ತೆರಿಗೆ ಸುಧಾರಣೆಯಾಗಿದೆ. ಜಿಎಸ್ಟಿಯಿಂದಾಗಿ ಒಂದು ರಾಷ್ಟ್ರ, ಒಂದು ತೆರಿಗೆ ಮತ್ತು ಒಂದು ಮಾರುಕಟ್ಟೆ ನಿರ್ಮಾಣವಾಗಿದ್ದು, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Congratulate the Nation on completion of one year of GST - the most transformative tax reform in India ever. One Nation, One Tax and One Market due to GST has led to economic growth, simplicity for people and transparency in the economy #GSTforNewIndia
— Piyush Goyal (@PiyushGoyal) July 1, 2018
2017ರ ಜೂನ್ 30 ರಂದು ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಜಾರಿಗೊಳಿಸಿದರು. ಒಂದೇ ರಾಷ್ಟ್ರ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ಗುರಿಯೊಂದಿಗೆ ಎಲ್ಲಾ ತೆರಿಗೆಯನ್ನು ಒಂದೇ ವಾಹಿನಿ ಮೂಲಕ ಜಾರಿಗೊಳಿಸುವ ಈ ಯೋಜನೆ ಜಾರಿಗೆ ಹಲವು ವಾದ-ವಿವಾದಗಳು, ಟೀಕೆಗಳು ಕೇಳಿಬಂದಿತಾದರೂ ಈ ನಡುವೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾಗಿ ಯಶಸ್ವಿ ಒಂದು ವರ್ಷ ಪೂರ್ಣಗೊಂಡಿದೆ.