ನವದೆಹಲಿ : Petrol Diesel Price : ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಸತತ 28 ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ದುಬಾರಿಯಾಗುತ್ತಿದೆ. ಬ್ರೆಂಟ್ ಕಚ್ಚಾ ತೈಲವು ಈಗ ಪ್ರತಿ ಬ್ಯಾರೆಲ್ಗೆ ಸುಮಾರು 111.70 ಡಾಲರ್ ಆಗಿದೆ. ಏಪ್ರಿಲ್ 6 ರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.
4 ವಾರಗಳಿಂದ ಬೆಲೆಯಲ್ಲಿ ಬದಲಾವಣೆ ಇಲ್ಲ :
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏಪ್ರಿಲ್ 6 2022 ರಂದು ಬದಲಾವಣೆ ಮಾಡಲಾಗಿತ್ತು. ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ, ಭಾರತದಲ್ಲಿ ಬೆಲೆಗಳನ್ನು ಸ್ಥಿರವಾಗಿ ಇರಿಸಲಾಗಿದೆ. ಐದು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ಘೋಷಿಸುವ ಮೊದಲು ತೈಲ ಬೆಲೆಗಳನ್ನು ಹಲವಾರು ತಿಂಗಳುಗಳವರೆಗೆ ಸ್ಥಿರವಾಗಿ ಇರಿಸಲಾಗಿತ್ತು. ಆದರೆ ಮಾರ್ಚ್ 22 ರಿಂದ ಏಪ್ರಿಲ್ 6 ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ ಸುಮಾರು 10 ರೂ.ಯಷ್ಟು ಹೆಚ್ಚಳ ಮಾಡಲಾಗಿತ್ತು.
ಇದನ್ನೂ ಓದಿ : Cumin Prices Hike : ನಿಂಬೆ ಹಣ್ಣಿನ ನಂತರ ಈಗ ಜೀರಿಗೆ ಬೆಲೆ ಹೆಚ್ಚಳ!
ದೇಶದ ಪ್ರಮುಖ ನಗರಗಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ :
ದೆಹಲಿ - ಪೆಟ್ರೋಲ್ 105.41 ರೂ ಮತ್ತು ಡೀಸೆಲ್ ರೂ 96.67 ಪ್ರತಿ ಲೀಟರ್
ಮುಂಬೈ - ಪೆಟ್ರೋಲ್ 120.51 ರೂ ಮತ್ತು ಡೀಸೆಲ್ ರೂ 104.77 ರೂ
ಚೆನೈ - ಪೆಟ್ರೋಲ್ - 110.85 ರೂ. , ಡೀಸೆಲ್ ಲೀಟರ್ಗೆ 97.03 ರೂ
ಕೊಲ್ಕತ್ತಾ - ಪೆಟ್ರೋಲ್ - 115.12 ರೂ. , ಡೀಸೆಲ್ ಲೀಟರ್ಗೆ 99.83 ರೂ.
ಲಕ್ನೋದಲ್ಲಿ ಪೆಟ್ರೋಲ್ 105.25 ರೂ ಮತ್ತು ಡೀಸೆಲ್ ಲೀಟರ್ಗೆ 96.83 ರೂ
ಪೋರ್ಟ್ ಬ್ಲೇರ್ನಲ್ಲಿ ಪೆಟ್ರೋಲ್ 91.45 ರೂ ಮತ್ತು ಡೀಸೆಲ್ ಲೀಟರ್ಗೆ ರೂ 85.83
ಪಾಟ್ನಾದಲ್ಲಿ ಪೆಟ್ರೋಲ್ 116.23 ರೂ . ಮತ್ತು ಡೀಸೆಲ್ ಲೀಟರ್ಗೆ 101 ರೂ.
SMS ಮೂಲಕ ಕೂಡಾ ದರ ಪರಿಶೀಲಿಸಬಹುದು :
ನೀವು ಎಸ್ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ : PM Kisan ಯೋಜನೆಯ 11ನೇ ಕಂತು: ತ್ವರಿತವಾಗಿ ಪರಿಶೀಲಿಸಲು ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.