ನಮ್ಮ ಸರ್ಕಾರದ ಬಹುತೇಕ ಕಾರ್ಯಕ್ರಮಗಳಿಗೆ 'ಇಂದಿರಾಗಾಂಧಿ' ಸ್ಫೂರ್ತಿ- ಸಿದ್ದರಾಮಯ್ಯ

ತನ್ನ ದಿಟ್ಟ ನಿರ್ಧಾರಗಳ ಮೂಲಕ ರಾಷ್ಟ್ರದ ಪ್ರಗತಿಗೆ ಶ್ರಮಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನಾಡು ಸ್ಮರಿಸುತ್ತದೆ- ಮುಖ್ಯಮಂತ್ರಿ.

Last Updated : Oct 31, 2017, 11:03 AM IST
ನಮ್ಮ ಸರ್ಕಾರದ ಬಹುತೇಕ ಕಾರ್ಯಕ್ರಮಗಳಿಗೆ 'ಇಂದಿರಾಗಾಂಧಿ' ಸ್ಫೂರ್ತಿ- ಸಿದ್ದರಾಮಯ್ಯ title=

ಬೆಂಗಳೂರು: ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ನೆನಪಿಸಿಕೊಳ್ಳುತ್ತಾ, ಇಂದಿರಾ ಗಾಂಧಿಯವರ 33ನೇ ಹುತಾತ್ಮ ದಿನವನ್ನು ಇಂದು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ-  ನಮ್ಮ ಸರ್ಕಾರದ ಬಹುತೇಕ ಕಾರ್ಯಕ್ರಮಗಳಿಗೆ 'ಇಂದಿರಾಗಾಂಧಿ' ಸ್ಫೂರ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಮ್ಮ ಸರ್ಕಾರದ ಬಹುತೇಕ ಕಾರ್ಯಕ್ರಮಗಳಿಗೆ ಇಂದಿರಾಗಾಂಧಿಯವರ ಪ್ರೇರಣೆಯೇ ಕಾರಣ. ತನ್ನ ದಿಟ್ಟ ನಿರ್ಧಾರಗಳ ಮೂಲಕ ರಾಷ್ಟ್ರದ ಪ್ರಗತಿಗೆ ಶ್ರಮಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನಾಡು ಸ್ಮರಿಸುತ್ತದೆ.

 

ಅಲ್ಲದೆ, ಭಾರತಕ್ಕೆ ಇಂದು ಬೇಕಾಗಿರುವುದು ಬಡತನ, ಕಣ್ಣೀರು, ಕಷ್ಟಗಳನ್ನು ಕಂಡಾಗ ಇಂದಿರಾಗಾಂಧಿ ಯವರಂತೆ ಮರುಗುವ, ಸ್ಪಂದಿಸುವ ಹೃದಯವಂತ ನಾಯಕರು. ಶ್ರೀಮತಿಇಂದಿರಾ ಗಾಂಧಿಯವರಿಗೆ ' ಗರೀಬಿ ಹಟಾವೊ, ದೇಶ್ ಬಚಾವೋ' ಎನ್ನುವುದು ಕೇವಲ ಘೋಷಣೆಯಾಗಿರಲಿಲ್ಲ. ಅದು ಬಡವರ ಸುಧಾರಣೆಯ ಬದ್ಧತೆಯಾಗಿತ್ತು. ಶ್ರೀಮತಿ ಇಂದಿರಾಗಾಂಧಿಯವರು ಬಡವರನ್ನು ಬ್ಯಾಂಕಿನೊಳಗೆ ಕರೆದುಕೊಂಡು ಬಂದರು. ಈಗ ಬಡವರು ಬ್ಯಾಂಕ್ ಕಂಡರೆ ಓಡಿಹೋಗುತ್ತಿದ್ದಾರೆ ಎಂದು ಇಂದಿನ ಪರಿಸ್ಥಿತಿಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ.

ಇಂದಿರಾ ಗಾಂಧಿಯವರ ಪರಿಶ್ರಮ ಮತ್ತು ಧೈರ್ಯವನ್ನು ನೆನಪಿಸಿಕೊಳ್ಳುತ್ತಾ, ಅವರ ಕ್ರಾಂತಿಕಾರಕ ಉಪಕ್ರಮಗಳು ನಮ್ಮ ಮಾರ್ಗದರ್ಶನ ನಮ್ಮ ಮಾರ್ಗಗಳಲ್ಲಿ ಬೆಳಕು ಚೆಲ್ಲುತ್ತವೆ ಎಂದು ತಿಳಿಸಿದ್ದಾರೆ.

Trending News