ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಚಾರ್ಟರ್ಡ್ ವಿಮಾನ ಪತನಗೊಂಡಿದ್ದು, ಈ ಅಪಘಾಂದಲ್ಲಿ ಪೈಲಟ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಈ ಘಟನೆ ಘಾಟ್ಕೋಪರ್ ಪ್ರದೇಶದಲ್ಲಿ ನಡೆಯಿತು. ವಿಮಾನ ಅಪಘಾತದ ಕುರಿತು ತನಿಖೆ ನಡೆಸಲು ಡಿ.ಜಿ.ಸಿ.ಎ ತಂಡದ ಮುಂಬೈಗೆ ತೆರಳಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶಕ ಬಿ.ಎಸ್.ಭುಲ್ಲರ್ ತಿಳಿಸಿದ್ದಾರೆ.
#WATCH: A chartered plane crashes near Jagruti building in Ghatkopar where a construction work was going on. #Mumbai pic.twitter.com/ACyGYymydX
— ANI (@ANI) June 28, 2018
ಸರ್ವೋದಯ ಆಸ್ಪತ್ರೆಯಲ್ಲಿ ಈ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶ ಸರಕಾರ ಈ ಚಾರ್ಟರ್ಡ್ ವಿಮಾನವನ್ನು ಖರೀದಿಸಿದೆ ಎಂದು ಹೇಳಲಾಗಿದೆ, ಆದರೆ 2014 ರ ಉತ್ತರಾರ್ಧದಲ್ಲಿ ಉತ್ತರಪ್ರದೇಶ ಸರ್ಕಾರ ಅದನ್ನು ಮಾರಾಟ ಮಾಡಿದೆ ಎನ್ನಲಾಗಿದೆ.
ವಿಮಾನ ಪತನದಿಂದ ಕಟ್ಟಡಕ್ಕೂ ಬೆಂಕಿ ತಲುಗಿದ್ದು ಇದರಲ್ಲಿ ವಿಮಾನದಲ್ಲಿದ್ದ ನಾಲ್ವರು ಪ್ರಯಾಣಿಕರು ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.