ತೂಕ ನಷ್ಟಕ್ಕೆ ಬೆಳಗಿನ ಉಪಾಹಾರ: ಪ್ರಸ್ತುತ ಯುಗದಲ್ಲಿ, ಜನರು ಕಳಪೆ ಆಹಾರ, ಒತ್ತಡ ಮತ್ತು ಬಿಡುವಿಲ್ಲದ ಜೀವನಶೈಲಿಯಿಂದ ಬೊಜ್ಜಿನ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ತೂಕ ಹೆಚ್ಚಾದಾಗ, ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ, ಅದರಲ್ಲೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಇನ್ನೂ ಕಷ್ಟ. ನೀವು ಸಹ ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಬೆಳಗಿನ ಉಪಹಾರದ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ.
ಕೆಲವರಿಗೆ ಕೈ-ಕಾಲು ಸಣ್ಣಗೆ ಇರುತ್ತದೆ. ಆದರೆ ಹೊಟ್ಟೆ ಮಾತ್ರ ಮುಂದಕ್ಕೆ ಬಂದಿರುತ್ತದೆ. ಹೊಟ್ಟೆಯ ಕೊಬ್ಬು ಕೆಟ್ಟದಾಗಿ ಕಾಣುವುದು ಮಾತ್ರವಲ್ಲದೆ ಸ್ಥೂಳಕಾಯತೆ ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗಬಹುದು. ಸ್ಥೂಲಕಾಯತೆಯು ಹೃದ್ರೋಗ, ಅಧಿಕ ರಕ್ತದೊತ್ತಡ, ಯೂರಿಕ್ ಆಸಿಡ್ ಹೆಚ್ಚಳ ಮತ್ತು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ತೂಕ ನಿಯಂತ್ರಿಸುವುದು ಅತ್ಯಗತ್ಯ. ಆದರೆ, ತೂಕ ನಿಯಂತ್ರಿಸಲು ಯೋಗ, ವ್ಯಾಯಾಮ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಸೇವನೆಯೂ ಬಹಳ ಮುಖ್ಯ. ನೀವು ಬೆಳಗಿನ ಉಪಾಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸಿದರೆ, ನಿಮ್ಮ ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಕುಂಬಳಕಾಯಿ ಬೀಜ ಸೇವಿಸಿ 'ಹೃದಯಾಘಾತ ಸಮಸ್ಯೆ'ಯಿಂದ ದೂರವಿರಿ
ಹಾಗಿದ್ದರೆ, ಆರೋಗ್ಯಕರವಾಗಿ ತೂಕ ತಿಳಿಸಲು ಬ್ರೇಕ್ ಫಾಸ್ಟ್ ಹೇಗಿರಬೇಕು ಎಂದು ತಿಳಿಯಿರಿ.
1. ನಿಂಬೆ ಮತ್ತು ಜೇನುತುಪ್ಪ :
ಹೊಟ್ಟೆಯ ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡಲು, ಪ್ರತಿದಿನ ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆ ಹಿಂಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ. ನೀವು ಬಯಸಿದರೆ, ನೀವು ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಕೂಡ ಸೇರಿಸಬಹುದು.
2. ಮೊಸರು :
ಕ್ಯಾಲ್ಸಿಯಂ ಮತ್ತು ಪ್ರೊಟೀನ್‌ನಲ್ಲಿ ಸಮೃದ್ಧವಾಗಿರುವ ಮೊಸರು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ದೇಹದಲ್ಲಿನ ಪ್ರೋಟೀನ್ ಪ್ರಮಾಣವನ್ನು ಸಹ ನಿರ್ವಹಿಸುತ್ತದೆ. ತಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಯಸುವವರು ಈ ಫೈಬರ್ ಮತ್ತು ಪ್ರೋಟೀನ್ ಭರಿತ ಮೊಸರನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ- Adenovirus: ಮಕ್ಕಳಲ್ಲಿ ಹರಡುವ ಈ ಅಪಾಯಕಾರಿ ವೈರಸ್ ಬಗ್ಗೆ ಇರಲಿ ಎಚ್ಚರ
3. ರವೆ ಉಪ್ಪಿಟ್ಟು/ರವೆ ದೋಸೆ:
ರವೆ ಉಪ್ಪಿಟ್ಟು ಅಥವಾ ರವೆ ದೋಸೆ/ರೊಟ್ಟಿಯಲ್ಲಿರುವ ಸಿಮೋಲಿನಾ ಅಂಶವು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೊತೆಗೆ ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ. ಆದಾಗ್ಯೂ, ಯಾವಾಗಲೂ ಉಪ್ಪಿಟ್ಟು ತಯಾರಿಸುವಾಗ ಕಡಿಮೆ ಎಣ್ಣೆಯನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ.
4. ಹೆಸರು ಬೇಳೆ ದೋಸೆ:
ಮೂಂಗ್ ದಾಲ್ ಅಥವಾ ಹೆಸರು ಬೇಳೆಯಲ್ಲಿ ಜೀರ್ಣಕಾರಿ ನಾರಿನ ಹೊರತಾಗಿ, ಉತ್ತಮ ಪ್ರಮಾಣದ ಪ್ರೋಟೀನ್ ಕೂಡ ಇದೆ. ಬೆಳಗಿನ ಉಪಾಹಾರಕ್ಕಾಗಿ ಇದು ತುಂಬಾ ಆರೋಗ್ಯಕರ ಆಯ್ಕೆಯಾಗಿದೆ. ಇದರಲ್ಲಿರುವ ಫೈಬರ್ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಬೆಳಗಿನ ಉಪಾಹಾರದಲ್ಲಿ ನೀವು ಹೆಸರು ಬೇಳೆ ದೋಸೆ ಅಥವಾ ಹೆಸರು ಬೇಳೆಯಿಂದ ತಯಾರಿಸಲ್ಪಡುವ ಇತರ ಆಹಾರಗಳನ್ನು ಸೇವಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.