PM Narendra Modi : ಪ್ರಧಾನಿ ಮೋದಿಗೆ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ'

ನಾಳೆ ಅಂದರೆ ಏಪ್ರಿಲ್ 24 ರಂದು ದಿವಂಗತ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನಾನಾಥ್ ಅವರ 80 ನೇ ಪುಣ್ಯತಿಥಿ ಇದ್ದು. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Written by - Channabasava A Kashinakunti | Last Updated : Apr 23, 2022, 07:43 PM IST
  • ಗಾನ ಕೋಗಿಲೆ ಮತ್ತು ಭಾರತ ರತ್ನ ಪ್ರಶಸ್ತಿ ವಿಜೇತೆ ಲತಾ ಮಂಗೇಶ್ಕರ್
  • ಲತಾ ಮಂಗೇಶ್ಕರ್ ಹೆಸರಿನಲ್ಲಿ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ' ಆರಂಭ
  • ಈ ವರ್ಷ ಗುರು ದೀನನಾಥ್ ಅವರ 80 ನೇ ಸ್ಮರಣಾರ್ಥ ದಿನ
PM Narendra Modi : ಪ್ರಧಾನಿ ಮೋದಿಗೆ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ' title=

Lata Deenanath Mangeshkar Award : ಗಾನ ಕೋಗಿಲೆ ಮತ್ತು ಭಾರತ ರತ್ನ ಪ್ರಶಸ್ತಿ ವಿಜೇತೆ ಲತಾ ಮಂಗೇಶ್ಕರ್ ಅವರು ಫೆಬ್ರವರಿ 6 ರಂದು ಇಹಲೋಕಕ್ಕೆ ವಿದಾಯ ಹೇಳಿದರು. ಇವರು ಈ ಪ್ರಪಂಚದಲ್ಲಿ ಇಲ್ಲದಿರಬಹುದು ಆದರೆ ಅಭಿಮಾನಿಗಳ ಹೃದಯದಲ್ಲಿ ಸದಾ ಇದ್ದಾರೆ. ಇದೀಗ ಲತಾ ಮಂಗೇಶ್ಕರ್ ಹೆಸರಿನಲ್ಲಿ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ' ಆರಂಭವಾಗಿದೆ. ನಾಳೆ ಅಂದರೆ ಏಪ್ರಿಲ್ 24 ರಂದು ದಿವಂಗತ ಲತಾ ಮಂಗೇಶ್ಕರ್ ಅವರ ತಂದೆ ಮಾಸ್ಟರ್ ದೀನಾನಾಥ್ ಅವರ 80 ನೇ ಪುಣ್ಯತಿಥಿ ಇದ್ದು. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ರತಿ ವರ್ಷ ಒಬ್ಬ ವ್ಯಕ್ತಿಗೆ ಪ್ರಶಸ್ತಿ 

ಈ ವರ್ಷ ಗುರು ದೀನನಾಥ್ ಅವರ 80 ನೇ ಸ್ಮರಣಾರ್ಥ ದಿನವಾಗಿದ್ದು, ಈ ಸಂದರ್ಭದಲ್ಲಿ ನಾವು ಮೊದಲ ಬಾರಿಗೆ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ' ಸ್ಥಾಪಿಸಿ ನೀಡುತ್ತೇವೆ ಎಂದು ಮಂಗೇಶ್ಕರ್ ಕುಟುಂಬ ತಿಳಿಸಿದೆ. ನಮ್ಮ ರಾಷ್ಟ್ರ, ಜನರು ಮತ್ತು ನಮ್ಮ ಸಮಾಜಕ್ಕೆ ಪ್ರವರ್ತಕ, ಸುಪ್ರಸಿದ್ಧ ಮತ್ತು ದೇಶಕ್ಕೆ ಕೊಡುಗೆ ನೀಡಿದ ಒಬ್ಬ ವ್ಯಕ್ತಿಗೆ ಮಾತ್ರ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : "ಕಂಡಿಡಿ ನೋಡನ"ದಲ್ಲಿದೆಯಂತೆ ವಿಭಿನ್ನ ಕ್ಲೈಮ್ಯಾಕ್ಸ್...ಏನದು..!?

ಪಿಎಂ ಮೋದಿಯವರಿಗೆ ಧನ್ಯವಾದಗಳು

ಈ ಪ್ರಶಸ್ತಿಯ ಮೊದಲ ಪ್ರಶಸ್ತಿ ವಿಜೇತರು ಬೇರೆ ಯಾರೂ ಅಲ್ಲ, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಘೋಷಿಸಿದ್ದು ನಮಗೆ ಗೌರವವಿದೆ ಎಂದು ಮಂಗೇಶ್ಕರ್ ಕುಟುಂಬದವರು ಹೇಳಿದ್ದಾರೆ. ಅವರು ನಮ್ಮ ಅತ್ಯಂತ ಗೌರವಾನ್ವಿತ ನಾಯಕರು; ಅವರು ಭಾರತವನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ಇರಿಸಿರುವ ಅಂತರರಾಷ್ಟ್ರೀಯ ರಾಜಕಾರಣಿ. ಪ್ರತಿಯೊಂದು ಅಂಶ ಮತ್ತು ಆಯಾಮಗಳಲ್ಲಿ ನಮ್ಮ ರಾಷ್ಟ್ರದಲ್ಲಿ ಆಗುತ್ತಿರುವ ಅದ್ಭುತ ಪ್ರಗತಿಯು ಅವರಿಂದ ಪ್ರೇರಿತವಾಗಿದೆ. ಅವರು ನಿಜವಾಗಿಯೂ ನಮ್ಮ ಮಹಾನ್ ರಾಷ್ಟ್ರವು ತನ್ನ ಸಾವಿರಾರು ವರ್ಷಗಳ ವೈಭವದ ಇತಿಹಾಸದಲ್ಲಿ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು, ಮತ್ತು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ನಮ್ಮ ಕುಟುಂಬ ಮತ್ತು ಟ್ರಸ್ಟ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಯೋಧರಿಗೆ ಈ ಪ್ರಶಸ್ತಿ ಗೌರವ

1. ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ- ಪ್ರಧಾನಿ ನರೇಂದ್ರ ಮೋದಿ
2. ಮಾಸ್ಟರ್ ದೀನನಾಥ್ ಪ್ರಶಸ್ತಿ- ರಾಹುಲ್ ದೇಶಪಾಂಡೆ (ಭಾರತೀಯ ಸಂಗೀತ)
3. ಮಾಸ್ಟರ್ ದೀನನಾಥ್ ಪ್ರಶಸ್ತಿ (ವಿಶೇಷ ಪ್ರಶಸ್ತಿ) - ಆಶಾ ಪರೇಖ್ (ಸಿನಿಮಾ ಕ್ಷೇತ್ರದಲ್ಲಿ ಸಮರ್ಪಿತ ಸೇವೆಗಳು)
4. ಮಾಸ್ಟರ್ ದೀನನಾಥ್ ಪ್ರಶಸ್ತಿ (ವಿಶೇಷ ಪ್ರಶಸ್ತಿ) ಶ್ರೀ ಜಾಕಿ ಶ್ರಾಫ್ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಸೇವೆಗೆ.
5. ಮಾಸ್ಟರ್ ದೀನನಾಥ್ ಪ್ರಶಸ್ತಿ (ಆನಂದಮಯಿ ಪ್ರಶಸ್ತಿ) ಮುಂಬೈ ಡಬ್ಬಾವಾಲಾ

ಇದನ್ನೂ ಓದಿ : Diamond Cross Movie : ಸಖತ್ ಸೌಂಡ್ ಮಾಡ್ತಿದೆ "ಡೈಮಂಡ್ ಕ್ರಾಸ್" ಟ್ರೇಲರ್.. ಶುಭ ಕೋರಿದ ಕಿಚ್ಚ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News