PSI Scam: ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿಯ ಸ್ಫೋಟಕ ಆಡಿಯೋ ಪತ್ತೆ!

ತಮ್ಮ ಕಡೆಯ ವ್ಯಕ್ತಿಯೊಬ್ಬರು ಪಿಎಸ್‌ಐ ಆಗಬೇಕೆಂದು ಬಯಸಿದ್ದು, ಎಷ್ಟು ಹಣ ಬೇಕಾದರು ಕೊಡಲು ಸಿದ್ದರಿದಾರೆಂದು ಮಾತನಾಡಿರುವುದು ಆಡಿಯೋದಲ್ಲಿದೆ.

Written by - Zee Kannada News Desk | Last Updated : Apr 23, 2022, 12:11 PM IST
  • 545 ಪಿಎಸ್‌ಐ ಹುದ್ದೆಗಳ ಅಕ್ರಮ ನೇಮಕಾತಿಯ ಸ್ಫೋಟಕ ಆಡಿಯೋ ಪತ್ತೆ
  • ನೊಂದ ಪಿಎಸ್‌ಐ ಅಭ್ಯರ್ಥಿಗಳ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಆಡಿಯೋ
  • ಪಿಎಸ್‍ಐ ಹುದ್ದೆಗೆ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧವೆಂದು ಮಾತನಾಡಿರುವ ಆಡಿಯೋ
PSI Scam: ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿಯ ಸ್ಫೋಟಕ ಆಡಿಯೋ ಪತ್ತೆ! title=
ಸ್ಫೋಟಕ ಆಡಿಯೋ ಪತ್ತೆ

ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ಅಕ್ರಮ ನೇಮಕಾತಿಯ ಸ್ಫೋಟಕ ಆಡಿಯೋ ಪತ್ತೆಯಾಗಿದೆ. ನೊಂದ ಪಿಎಸ್‌ಐ ಅಭ್ಯರ್ಥಿಗಳ ವಾಟ್ಸಪ್ ಗ್ರೂಪ್‌ಗಳಲ್ಲಿ ಈ ಆಡಿಯೋ ಸಖತ್ ವೈರಲ್ ಆಗುತ್ತಿದೆ. ಆದರೆ, ಆಡಿಯೋದಲ್ಲಿ ಯಾರು ಯಾರ ಜೊತೆ ಸಂಭಾಷಣೆ ಮಾಡಿದ್ದಾರೆನ್ನುವುದು ಸ್ಪಷ್ಟವಾಗಿಲ್ಲ.

ತಮ್ಮ ಕಡೆಯ ವ್ಯಕ್ತಿಯೊಬ್ಬರು ಪಿಎಸ್‌ಐ ಆಗಬೇಕೆಂದು ಬಯಸಿದ್ದು, ಎಷ್ಟು ಹಣ ಬೇಕಾದರು ಕೊಡಲು ಸಿದ್ದರಿದಾರೆಂದು ಮಾತನಾಡಿರುವುದು ಆಡಿಯೋದಲ್ಲಿದೆ. ಒಳ್ಳೆಯ ಶ್ರೀಮಂತರು ಎಂಬ ಮಾತುಗಳು ಸಹ ಕೇಳಿ ಬಂದಿವೆ. ಇದಕ್ಕೆ ಮತ್ತೊಬ್ಬ ವ್ಯಕ್ತಿ ಏನೂ ಆಗೋಲ್ಲ.. ಇದರಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ, ಜಾಸ್ತಿ ಅವರೇ ಶಾಮೀಲಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: PSI Recruitment Scam : PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಅರೆಸ್ಟ್!

ಆಡಿಯೋದಲ್ಲಿ ಆ ಇಬ್ಬರು ವ್ಯಕ್ತಿಗಳ ಮೊಬೈಲ್ ಸಂಭಾಷಣೆಯ ವಿವರಣೆ ಇಲ್ಲಿದೆ ನೋಡಿ

ವ್ಯಕ್ತಿ-1 ನಮಸ್ಕಾರ್ ರೀ ಸರ್...

ವ್ಯಕ್ತಿ-2 ನಮಸ್ಕಾರ್ ಪಿಎಸ್‌ಐ ಸಾಹೆಬ್ರಿಗೆ…

ವ್ಯಕ್ತಿ-1 ಹೈದ್ರಾಬಾದ್-ಕರ್ನಾಟಕದ ಪ್ರದೇಶದವರು ಕೋರ್ಟಿಗೆ ಹೋಗಿದ್ದಾರಂತೆ?

ವ್ಯಕ್ತಿ-2: ವರ್ಷ ವರ್ಷ ಇದು ಇದ್ದುದ್ದೇ.. ಅದೆನ್ ಆಗೋಲ್ಲ..

ವ್ಯಕ್ತಿ-1: 2004ರ ಕೆಎಎಸ್‌ನಲ್ಲಿ ಆದಂತೆ ಮತ್ತೆನಾದರೂ..

ವ್ಯಕ್ತಿ-2: ಏನು ಆಗೋಲ್ಲ.. ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ.. ಜಾಸ್ತಿಯಿದಾರೆ.. ದೊಡ್ಡವರೇ ಶಾಮೀಲಾಗಿದಾರೆ.. ಗೌಡ್ರೆ ನಮ್ಮವರು ಒಬ್ರಿದಾರೆ.. ದುಡ್ಡು ಸಾಕಷ್ಟಿದೆ..

ವ್ಯಕ್ತಿ-1: ಈ ಸರ್ತಿ ಆಗೋಲ್ಲ, 402ಗೆ ಹಾಕಿ.. ಬೇಗ ಆಪ್ಲಿಕೇಶನ್ ನಂಬರ್ ವಾಟ್ಸಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರ್‌ನಿಂದ ಮಾಡಲಿ.. ಸೆಂಟರ್ ಹಾಕಿಸಿಕೊಂಡು ಬರಬೇಕು..

ವ್ಯಕ್ತಿ-2: ಮುಂದಿನ ಪ್ರೋಸಿಜರ್ ಹೇಳುತ್ತೇನೆ, ಆಪ್ಲಿಕೇಶನ್ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರ್‌ನಿಂದ ಅಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ..

ವ್ಯಕ್ತಿ-1 ಆಯ್ತು..

545 ಪಿಎಸ್‌ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ. 402ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೇ ಕಳುಹಿಸಿ… ಹಿಗೇ ಹಲವು ಸಂಭಾಷಣೆಗಳನ್ನು ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: PSI Recruitment Scam: ಮುನ್ನಾಭಾಯಿ MBBS ಸ್ಟೈಲ್‍ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News