ನವದೆಹಲಿ: ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತವು ಮಹಿಳೆಯರಿಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ ಎಂದು ಅದು ತಿಳಿಸಿದೆ ಈ ವರದಿಯಲ್ಲಿ . ಅಫ್ಘಾನಿಸ್ತಾನ ಮತ್ತು ಸಿರಿಯಾಗಿಂತಲೂ ಭಾರತವು ಮಹಿಳೆಯರಿಗೆ ಅಪಾಯಕಾರಿ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಭಾರತ ದೇಶವು ಹೆಚ್ಚು ಸುರಕ್ಷಿತವಲ್ಲದ ದೇಶವಾಗಿ ಹೊರಹೊಮ್ಮಿದೆ. ಅದರಲ್ಲಿ ಪ್ರಮುಖವಾಗಿ ಮಾನವ ಕಳ್ಳಸಾಗಣೆ, ಲೈಂಗಿಕ ಗುಲಾಮಗಿರಿ ಬಲವಂತದ ಮದುವೆ, ಹೆಣ್ಣು ಶಿಶುಹತ್ಯೆ ಮುಂತಾದ ವಿಚಾರಗಳಿಂದ ಭಾರತ ಮಹಿಳೆಯರಿಗೆ ಅಪಾಯಕಾರಿ ರಾಷ್ಟ್ರ ಎಂದು ರಾಯಿಟರ್ಸ್ ವರದಿ ಮಾಡಿದೆ.
2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರವೂ, ಭಾರತದಲ್ಲಿ ಮಹಿಳೆಯರಿಗೆ ಇರುವ ಅಪಾಯವನ್ನು ತಡೆಗಟ್ಟಲು ಆಗಲಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಈಗ ಈ ಸಮೀಕ್ಷೆಯ ಕುರಿತಾಗಿ ಮೇನೆಕಾ ಗಾಂಧಿ ನೇತೃತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ ಎಂದು ಹೇಳಲಾಗಿದೆ.
ಭಾರತ, ಲಿಬಿಯಾ ಮತ್ತು ಮ್ಯಾನ್ಮಾರ್ ರಾಷ್ಟ್ರಗಳು ವರ್ಷಕ್ಕೆ $ 150 ಶತಕೋಟಿ ಮೌಲ್ಯದ ಜಾಗತಿಕ ಮಾನವ ಕಳ್ಳಸಾಗಾಣಿಕೆದಾರರಿಂದ ಮಹಿಳೆಯರನ್ನು ದೂರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
2011 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಫ್ಘಾನಿಸ್ತಾನ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಪಾಕಿಸ್ತಾನ, ಭಾರತ ಮತ್ತು ಸೊಮಾಲಿಯಾ ದೇಶಗಳಲ್ಲಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ರಾಷ್ಟ್ರಗಳಾಗಿವೆ ಎಂದು ತಿಳಿಸಲಾಗಿತ್ತು.