Mumbai Indians Rohit Sharma : ಐಪಿಎಲ್ 2022 ರಲ್ಲಿ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಸ್ಥಿತಿ ತುಂಬಾ ಹೀನಾಯವಾಗಿದೆ. ರೋಹಿತ್ ನಾಯಕತ್ವದಲ್ಲಿ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ತಂಡ ಈ ಬಾರಿಯ ಒಂದು ಪಂದ್ಯವನ್ನೂ ಗೆದ್ದಿಲ್ಲ. ಹೀಗಾಗಿ, ಮುಂಬೈ ಪ್ಲೇಆಫ್‌ನಿಂದ ಎರಡನೇ ಭಾರಿಗೆ ಹೊರಗುಳಿದಿದೆ. ಹೀಗಾಗಿ ಟೀಂ ಕ್ಯಾಪ್ಟನ್ ರೋಹಿತ್ ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ನಾಯಕತ್ವ ಬದಲಾವಣೆ ಆದರೆ ಭವಿಷ್ಯದಲ್ಲಿ ಈ ಸ್ಥಾನವನ್ನು ತುಂಬಲು ಈ 3 ಆಟಗಾರರಲ್ಲಿ ಒಬ್ಬರಿಗೆ ನಾಯಕತ್ವ ಪಟ್ಟ ಒಲಿಯಲಿದೆ.
1. ಕೀರಾನ್ ಪೊಲಾರ್ಡ್
ರೋಹಿತ್ ಶರ್ಮಾ ಬದಲಿಗೆ ಕೀರಾನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್‌ನ ಹೊಸ ನಾಯಕನನ್ನಾಗಿ ಮಾಡಬಹುದು. ಪೊಲಾರ್ಡ್ ಐಪಿಎಲ್ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ನಾಯಕತ್ವದ ಅನುಭವ ಹೊಂದಿದ್ದಾರೆ. ಪೊಲಾರ್ಡ್ ಕಳೆದ ಹಲವು ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ನಾಯಕರೂ ಆಗಿದ್ದಾರೆ. ರೋಹಿತ್ ಶರ್ಮಾಗಿಂತ ಮೊದಲು ಪೊಲಾರ್ಡ್ ಮುಂಬೈ ತಂಡದ ಭಾಗವಾಗಿದ್ದರು. ಅವರು ಉತ್ತಮ ಆಟಗಾರ ಮತ್ತು ಉತ್ತಮ ನಾಯಕ ಕೂಡ ಆಗಬಹುದು.
ಇದನ್ನೂ ಓದಿ : MI vs CSK, IPL 2022: ಧೋನಿ ಬ್ಯಾಟಿಂಗ್ ಅಬ್ಬರ, ಸತತ ಸೋಲಿನಲ್ಲಿ ಹೊಸ ದಾಖಲೆ ನಿರ್ಮಿಸಿದ ಮುಂಬೈ
2. ಜಸ್ಪ್ರೀತ್ ಬುಮ್ರಾ
ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಮುಂಬೈ ಇಂಡಿಯನ್ಸ್‌ನ ಹೊಸ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಬುಮ್ರಾ ಸಾರ್ವಕಾಲಿಕ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. ಬುಮ್ರಾ ಮುಂಬೈ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆಲ್ಲಿಸಿದ್ದಾರೆ. ಇದಲ್ಲದೇ ಟೀಂ ಇಂಡಿಯಾದ ಉಪನಾಯಕನಾದ ಅನುಭವವೂ ಇದೆ. ಬುಮ್ರಾ ಮುಂಬೈ ಪರ ಹಲವು ವರ್ಷಗಳಿಂದ ಕಾಲ ಆಡಿದ್ದಾರೆ, ಹೀಗಾಗಿ ಬುಮ್ರಾ ಈ ತಂಡದ ನಾಯಕನೂ ಆಗಬಹುದು.
3. ಸೂರ್ಯಕುಮಾರ್ ಯಾದವ್
ಮುಂಬೈ ಇಂಡಿಯನ್ಸ್‌ನ ಹೊಸ ನಾಯಕನಾಗಲು ಸೂರ್ಯಕುಮಾರ್ ಯಾದವ್ ಕೂಡ ಆಯ್ಕೆಯಾಗಬಹುದು. ಯಾದವ್ ಕೂಡ ಮುಂಬೈ ಪರ ಅನೇಕ ಪಂದ್ಯಗಳನ್ನು ಸ್ವಂತ ಬಲದಿಂದ ಗೆಲ್ಲಿಸಿದ್ದಾರೆ. ಅಲ್ಲದೆ, ಮೆಗಾ ಹರಾಜಿನ ಮೊದಲು ಅವರನ್ನು ಈ ತಂಡವು ಉಳಿಸಿಕೊಂಡಿದೆ. ಸೂರ್ಯಕುಮಾರ್ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದು, ಅಗತ್ಯವಿದ್ದರೆ ತಂಡದ ನಾಯಕತ್ವವನ್ನೂ ವಹಿಸಿಕೊಳ್ಳಬಹುದು.
ಇದನ್ನೂ ಓದಿ : Viral Video: ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಡ್ಯಾನ್ಸ್ ಗೆ ಜೋಸ್ ಬಟ್ಲರ್ ಫಿದಾ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.