ಮೇ ತಿಂಗಳಲ್ಲಿ ಒಟ್ಟು 13 ದಿನ ಬ್ಯಾಂಕ್ ರಜೆ, ಇಲ್ಲಿದೆ ಪಟ್ಟಿ

ಮೇ ತಿಂಗಳ ಬ್ಯಾಂಕ್ ರಜಾದಿನಗಳ ಲಿಸ್ಟ್: ಮುಂದಿನ ತಿಂಗಳು ನೀವು ಯಾವುದೇ ಕೆಲಸಕ್ಕಾಗಿ ಬ್ಯಾಂಕಿಗೆ ತೆರಳುವ ಮೊದಲು ಬ್ಯಾಂಕುಗಳ ರಜಾ ದಿನಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿದೆ. ಮೇ ತಿಂಗಳಲ್ಲಿ ದೇಶಾದ್ಯಂತ 13 ದಿನಗಳು ಬ್ಯಾಂಕುಗಳಿಗೆ ರಜೆ ಇರಲಿದೆ.

Written by - Yashaswini V | Last Updated : Apr 22, 2022, 11:15 AM IST
  • ಭಾರತೀಯ ರಿಸರ್ವ್ ಬ್ಯಾಂಕ್ ಮೇ 2022 ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನ ರಜೆ ಇರಲಿದೆ
  • ಮೇ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ
ಮೇ ತಿಂಗಳಲ್ಲಿ ಒಟ್ಟು 13 ದಿನ ಬ್ಯಾಂಕ್ ರಜೆ, ಇಲ್ಲಿದೆ ಪಟ್ಟಿ title=
Bank Holidays List in May

ಮೇ ತಿಂಗಳ ಬ್ಯಾಂಕ್ ರಜಾದಿನಗಳ ಲಿಸ್ಟ್:  ನೀವು ನಿಮ್ಮ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಮೇ ತಿಂಗಳಲ್ಲಿ ಪೂರ್ಣಗೊಳಿಸಲು ಯೋಚಿಸುತ್ತಿದ್ದರೆ ಅದಕ್ಕೂ ಮೊದಲು ಮೇ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ತಪ್ಪದೇ ಪರಿಶೀಲಿಸಿ. ಭಾರತೀಯ ರಿಸರ್ವ್ ಬ್ಯಾಂಕ್ ಮೇ ತಿಂಗಳ ಬ್ಯಾಂಕ್ ರಜಾದಿನಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ನೀವು ಮೇ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ ಯೋಜನೆ ರೂಪಿಸುವ ಮುನ್ನ ಈ ಲಿಸ್ಟ್ ಚೆಕ್ ಮಾಡಿ ನಂತರ ನಿಮ್ಮ ಯೋಜನೆ ರೂಪಿಸಿ. ಇದರಿಂದ ನಿಮ್ಮ ಕೆಲಸಕ್ಕೆ ಯಾವುದೇ ರೀತಿಯ ಅಡೆತಡೆ ಉಂಟಾಗುವುದನ್ನು ತಪ್ಪಿಸಬಹುದು.
 
ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ಪ್ರಕಾರ, ಮೇ ತಿಂಗಳ ಆರಂಭದಲ್ಲೇ ಬ್ಯಾಂಕ್ ಗಳು ನಾಲ್ಕು ದಿನಗಳ ಕಾಲ ಮುಚ್ಚಲ್ಪಡುತ್ತವೆ. ಈ ರಜೆಗಳಲ್ಲಿ ಕೆಲವು ದೇಶಾದ್ಯಂತ ಸಾರ್ವತ್ರಿಕ ರಜೆದಿನಗಳು ಮತ್ತು ಸ್ಥಳೀಯ ಹಬ್ಬಗಳಿಗೆ ಅನುಗುಣವಾಗಿ ಬದಲಾಗಲಿದೆ ಎಂಬುದು ಗಮನಿಸಬೇಕಾದ ಸಂಗತಿ. 

ಇದನ್ನೂ ಓದಿ- ಬ್ಯಾಂಕ್ ಲಾಕರ್ ಹೊಸ ನಿಯಮಗಳು: ಗ್ರಾಹಕರಿಗೆ ಸಿಗುವ ಪ್ರಯೋಜನಗಳಿವು!

ವಾಸ್ತವವಾಗಿ, ಆರ್‌ಬಿಐ ರಾಷ್ಟ್ರೀಯ ರಜಾದಿನಗಳಲ್ಲದೆ, ರಾಜ್ಯಗಳ ಸ್ಥಳೀಯ ಹಬ್ಬಗಳ ಪ್ರಕಾರ ಕೆಲವು ರಜಾದಿನಗಳನ್ನು ನೀಡುತ್ತದೆ. ವರದಿಯ ಪ್ರಕಾರ, ಮೇ ತಿಂಗಳಲ್ಲಿ ವಿವಿಧ ವಲಯಗಳಲ್ಲಿ ಒಟ್ಟು 31 ದಿನಗಳಲ್ಲಿ 13 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ.   ಬ್ಯಾಂಕ್‌ಗಳ ಪರವಾಗಿ, ಗ್ರಾಹಕರು ಮೇ ತಿಂಗಳಲ್ಲಿ ಬ್ಯಾಂಕ್‌ಗೆ ಹೋಗುವ ಮೊದಲು ಎಲ್ಲಾ ರಜಾದಿನಗಳ ಪಟ್ಟಿಯನ್ನು ಮೊದಲು ಪರಿಶೀಲಿಸುವಂತೆ ವಿನಂತಿಸಲಾಗಿದೆ. ನಿಮ್ಮ ನಗರ ಅಥವಾ ರಾಜ್ಯದಲ್ಲಿ ಯಾವ ಪ್ರಮುಖ ದಿನಗಳಲ್ಲಿ ಬ್ಯಾಂಕ್ ಶಾಖೆಗಳಿಗೆ ರಜೆ ಇರಲಿದೆ ಎಂದು ತಿಳಿಯಲು ಈ ಕೆಳಗಿನ ಪಟ್ಟಿಯನ್ನು ಪರಿಶೀಲಿಸಿ.

ಮೇ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ (ಮೇ 2022 ರಲ್ಲಿ ಬ್ಯಾಂಕ್ ರಜಾದಿನಗಳು) :
1 ಮೇ 2022: ಕಾರ್ಮಿಕರ ದಿನ / ಮಹಾರಾಷ್ಟ್ರ ದಿನ. ಈ ದಿನ ಭಾನುವಾರವೂ ಆಗಿರುವುದರಿಂದ ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
2 ಮೇ 2022: ಮಹರ್ಷಿ ಪರಶುರಾಮ ಜಯಂತಿ - ಹಲವು ರಾಜ್ಯಗಳಲ್ಲಿ ರಜೆ
3 ಮೇ 2022: ಈದ್-ಉಲ್-ಫಿತರ್, ಬಸವ ಜಯಂತಿ (ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ)
4 ಮೇ 2022: ಈದ್-ಉಲ್-ಫಿತರ್, (ತೆಲಂಗಾಣ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
9 ಮೇ 2022: ಗುರು ರವೀಂದ್ರನಾಥ ಜಯಂತಿ (ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ)
14 ಮೇ 2022 : 2 ನೇ ಶನಿವಾರ
16 ಮೇ 2022: ಬುದ್ಧ ಪೂರ್ಣಿಮಾ ಪ್ರಯುಕ್ತ ಬ್ಯಾಂಕ್ ರಜೆ 
24 ಮೇ 2022 : ಖಾಜಿ ನಜ್ರುಲ್ ಇಸ್ಮಾಲ್ ಜನ್ಮದಿನ - (ಸಿಕ್ಕಿಂ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
28 ಮೇ 2022 : 4 ನೇ ಶನಿವಾರದಂದು ಬ್ಯಾಂಕ್ ರಜೆ

ಇದನ್ನೂ ಓದಿ- Bank Opening Hours Changed: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ ! ಬ್ಯಾಂಕ್ ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಹೊಸ ಟೈಮಿಂಗ್

ಮೇ 2022 ರಲ್ಲಿ ವಾರಾಂತ್ಯದ ಬ್ಯಾಂಕ್ ರಜಾದಿನಗಳ ಪಟ್ಟಿ:
1 ಮೇ 2022 : ಭಾನುವಾರ
8 ಮೇ 2022 : ಭಾನುವಾರ
15 ಮೇ 2022 : ಭಾನುವಾರ
22 ಮೇ 2022 : ಭಾನುವಾರ
29 ಮೇ 2022 : ಭಾನುವಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News