NRI: ನೆದರ್ಲ್ಯಾಂಡ್ ನಲ್ಲಿ US ಅಧ್ಯಕ್ಷ ಜೋ ಬಿಡೆನ್ ರಾಯಭಾರಿಯಾಗಿ ಶೇಫಾಲಿ ದುಗ್ಗಲ್ ಆಯ್ಕೆ

NRI Update - ಭಾರತೀಯ ಮೂಲದ ಅಮೇರಿಕನ್ ರಾಜಕೀಯ ಕಾರ್ಯಕರ್ತೆ ಶೆಫಾಲಿ ದುಗ್ಗಲ್ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರ ನೆದರ್ಲ್ಯಾಂಡ್ ರಾಯಭಾರಿಯಾಗಿ ಆಯ್ಕೆಗೊಂಡಿದ್ದಾರೆ. ಇದು ಏಷ್ಯಾದವರಿಗೆ ಅದರಲ್ಲೂ ವಿಶೇಷವಾಗಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ಒಂದು ಸ್ಫೂರ್ತಿ ನೀಡುವ ಸಂಗತಿಯಾಗಿದೆ ಎಂದು ಅಮೇರಿಕನ್-ಭಾರತೀಯ ಸಮುದಾಯದ ಮುಖಂಡರೊಬ್ಬರು ಹೇಳಿದ್ದಾರೆ.   

Written by - Nitin Tabib | Last Updated : Apr 21, 2022, 05:18 PM IST
  • ನೆದರ್ಲ್ಯಾಂಡ್ ನಲ್ಲಿ ಅಮೆರಿಕಾದ ರಾಯಭಾರಿಯಾಗಿ ಶೆಫಾಲಿ ದುಗ್ಗಲ್ ನೇಮಕ.
  • ಏಷ್ಯಾ ಅದರಲ್ಲಿಯೂ ಭಾರತೀಯ ಮಹಿಳೆಯರಿಗೆ ಸ್ಫೂರ್ತಿಯ ವಿಷಯ
  • ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಶೆಫಾಲಿಯ ಕುರಿತು ಶ್ಲಾಘನೆಯ ಮಾತುಗಳನ್ನು ಹೇಳಿದ್ದರು
NRI: ನೆದರ್ಲ್ಯಾಂಡ್ ನಲ್ಲಿ US ಅಧ್ಯಕ್ಷ ಜೋ ಬಿಡೆನ್ ರಾಯಭಾರಿಯಾಗಿ ಶೇಫಾಲಿ ದುಗ್ಗಲ್ ಆಯ್ಕೆ title=
shefali razdan duggal (Courtesy: Shefali Rajdan Duggal site)

ವಾಷಿಂಗ್ಟನ್: ಭಾರತೀಯ ಮೂಲದ ಅಮೇರಿಕನ್ ರಾಜಕೀಯ ಕಾರ್ಯಕರ್ತೆ ಶೆಫಾಲಿ ದುಗ್ಗಲ್ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರ ನೆದರ್ಲ್ಯಾಂಡ್ ರಾಯಭಾರಿಯಾಗಿ ಆಯ್ಕೆಗೊಂಡಿದ್ದಾರೆ. ಇದು ಏಷ್ಯಾದವರಿಗೆ ಅದರಲ್ಲೂ ವಿಶೇಷವಾಗಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ಒಂದು ಸ್ಫೂರ್ತಿ ನೀಡುವ ಸಂಗತಿಯಾಗಿದೆ ಎಂದು ಅಮೇರಿಕನ್-ಭಾರತೀಯ ಸಮುದಾಯದ ಮುಖಂಡರೊಬ್ಬರು ಹೇಳಿದ್ದಾರೆ. 

ಮಾರ್ಚ್ 11ರಂದು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್, ದುಗ್ಗಲ್ ಅವರನ್ನು ನೆದರ್ಲ್ಯಾಂಡ್ ನಲ್ಲಿರುವ ತಮ್ಮ ಅಮೆರಿಕಾದ ರಾಯಭಾರಿ ಕಚೇರಿಯ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ.ಇದಕ್ಕೂ ಮೊದಲು ಅವರ ಈ ನೇಮಕಾತಿ ಸೆನೆಟ್ ಫಾರಿನ್ ರಿಲೇಶನ್ಸ್ ಕಮಿಟಿಯ ಬಳಿ ಪರಾಮರ್ಶೆಯಲ್ಲಿತ್ತು. 

ಶೆಫಾಲಿ ಹಿನ್ನೆಲೆ
ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ಸೇರಿರುವ 50 ವರ್ಷದ ಶೆಫಾಲಿ, ಹರಿದ್ವಾರ್ ನಲ್ಲಿ ಜನಿಸಿದ್ದಾರೆ ಮತ್ತು ತಮ್ಮ ವಯಸ್ಸಿನ ಎರಡನೇ ವರ್ಷದಲ್ಲಿ ಕುಟುಂಬ ಸದಸ್ಯರ ಜೊತೆಗೆ ಪೀಟರ್ಸ್ಬರ್ಗ್, ಪೆನ್ಸಿಲ್ವೇನಿಯಗೆ ಸ್ಥಳಾಂತರಗೊಂಡಿದ್ದಾರೆ.

ನಂತರ ಸಿನ್ಸಿನಾಟಿ, ಒಹಿಯೋಗೆ ತೆರಳಿದ ಶೆಫಾಲಿ ಅಲ್ಲಿನ ಸಿಕಾಮೊರ್ ಹೈಸ್ಕೂಲ್ ನಲ್ಲಿ ತನ್ನ ಪದವಿ ಪೂರೈಸಿದ್ದಾರೆ. ಮಿಯಾಮಿ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯೂನಿಕೆಶನ್ನಲ್ಲಿ ಸೈನ್ಸ್ ಡಿಗ್ರಿ ಪಡೆದಿರುವ ಶೆಫಾಲಿ ನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಮೂಲಕ ಮೀಡಿಯಾ ಎಕಾಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ಶೆಫಾಲಿಯ ಈ ಆಯ್ಕೆಯ ಕುರಿತು ಮಾಹಿತಿ ನೀಡಿರುವ ಅಲ್ಲಿನ ಭಾರತೀಯ ಸಮುದಾಯದ  ಮುಖಂಡರಾಗಿರುವ ಅಜಯ್ ಜೈನ್ ಭೌತೊರಿಯಾ, "ಶೆಫಾಲಿ ಅವರು ಡೆಮಾಕ್ರಟ್ ರಾಜಕೀಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮುದಾಯವನ್ನು ಮುನ್ನಡೆಸುತ್ತಿದ್ದಾರೆ ಮತ್ತು ದೇಶಾದ್ಯಂತ ಅನೇಕ ದಕ್ಷಿಣ ಏಷ್ಯಾದ ಅಮೆರಿಕನ್ನರು ಮತ್ತು ಅಮೆರಿಕನ್ನರಿಗೆ ಸ್ಥಾನವನ್ನು ಅಲಂಕರಿಸಲು ಹಾಗೂ ಪ್ರಮುಖ ಪಾತ್ರಗಳನ್ನು ವಹಿಸಿಕೊಂಡು, ಡೆಮಾಕ್ರಟಿಕ್ ಪಕ್ಷದ ಬೆಳವಣಿಗೆಗೆ ಕೊಡುಗೆ ನೀಡಲು ಪ್ರೇರಣೆ ನೀಡಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ-NRI: ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿಯಾಗಿ ಭಾರತೀಯ ಮೂಲದ ಅಮೇರಿಕನ್ ನೌಕಾಪಡೆಯ ಅನುಭವಿ ಶಾಂತಿ ಸೇಠಿ ನೇಮಕ

"ನೆದರ್ಲ್ಯಾಂಡ್ ನ ಮುಂದಿನ ರಾಯಭಾರಿಯಾಗಿ ಶೆಫಾಲಿ ರಜ್ದಾನ್ ದುಗ್ಗಲ್ ಅವರ ಅಧ್ಯಕ್ಷರಿಂದ ನಾಮನಿರ್ದೇಶನವು ದಕ್ಷಿಣ ಏಷ್ಯಾದವರಿಗೆ ಮತ್ತು ಇಡೀ ಭಾರತೀಯ-ಅಮೆರಿಕನ್ ಸಮುದಾಯದ ಜನರಿಗೆ ಸಂತಸದ ಮತ್ತು ಹೆಮ್ಮೆಯ ಕ್ಷಣವಾಗಿದೆ. ನೆದರ್ಲೆಂಡ್ಸ್‌ಗೆ ಮುಂದಿನ ರಾಯಭಾರಿಯಾಗಿ ಶೆಫಾಲಿ ನಾಮನಿರ್ದೇಶನಗೊಂಡಿರುವುದನ್ನು ನೋಡಿ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗಿದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-NRI: ಭಾರತದ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಹೆಚ್ಚಿಸಲು ಈ ಬಾರಿ ಭಾರತೀಯರಿಗೆ ಹೆಚ್ಚು ವಿಸಾ ನೀಡಲಾಗುವುದು: ಜಾನ್ಸನ್

ಭೌತೊರಿಯಾ ಅವರು ಸಮುದಾಯದ ರಾಷ್ಟೀಯ ಮುಖಂಡರಾಗಿದ್ದು, ಏಶಿಯನ್ ಅಮೇರಿಕನ್ ಪೆಸಿಫಿಕ್ ಐಲ್ಯಾಂಡರ್ ಹಾಗೂ ನೇಟಿವ್ ಹವಾಯಿಯನ್ ಕಮಿಷನ್ ಗಾಗಿ ಅಧ್ಯಕ್ಷ ಜೋ ಬಿಡೆನ್ ಅವರ ಸಲಹೆಗಾರರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News