RCB ವಿರುದ್ಧ ಸೋಲಿನ ನಂತರ ಕೆಎಲ್ ರಾಹುಲ್ ಗೆ ಬಿತ್ತು 12 ಲಕ್ಷ ದಂಡ!

ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ರಾಹುಲ್ ತಪ್ಪಿತಸ್ಥರಾಗಿದ್ದು, ಭಾರೀ ದಂಡ ವಿಧಿಸಲಾಗಿದೆ. ಕೆಎಲ್ ರಾಹುಲ್ ಜೊತೆಗೆ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಕೂಡ ಐಪಿಎಲ್ ನೀತಿ ಸಂಹಿತೆಯಲ್ಲಿ ತಪ್ಪಿತಸ್ಥರಾಗಿದ್ದಾರೆ..

Written by - Channabasava A Kashinakunti | Last Updated : Apr 20, 2022, 03:17 PM IST
  • ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಎಲ್‌ಎಸ್‌ಜಿ 18 ರನ್‌ಗಳಿಂದ ಸೋಲು
  • ಕೆಎಲ್ ರಾಹುಲ್ ಗೆ ಭಾರಿ ದಂಡ ವಿಧಿಸಲಾಗಿದೆ
  • ಮಾರ್ಕಸ್ ಸ್ಟೊಯಿನಿಸ್ ಛೀಮಾರಿ
RCB ವಿರುದ್ಧ ಸೋಲಿನ ನಂತರ ಕೆಎಲ್ ರಾಹುಲ್ ಗೆ ಬಿತ್ತು 12 ಲಕ್ಷ ದಂಡ! title=

ಮುಂಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) 18 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ನಂತರ ತಂಡದ ನಾಯಕ ಕೆಎಲ್ ರಾಹುಲ್ ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ರಾಹುಲ್ ತಪ್ಪಿತಸ್ಥರಾಗಿದ್ದು, ಭಾರೀ ದಂಡ ವಿಧಿಸಲಾಗಿದೆ. ಕೆಎಲ್ ರಾಹುಲ್ ಜೊತೆಗೆ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಕೂಡ ಐಪಿಎಲ್ ನೀತಿ ಸಂಹಿತೆಯಲ್ಲಿ ತಪ್ಪಿತಸ್ಥರಾಗಿದ್ದಾರೆ..

ಕೆಎಲ್ ರಾಹುಲ್ ಗೆ ಭಾರಿ ದಂಡ ವಿಧಿಸಲಾಗಿದೆ

ನೀತಿ ಸಂಹಿತೆಯ ಲೆವೆಲ್-1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಕೆಎಲ್ ರಾಹುಲ್ ಗೆ ಪಂದ್ಯ ಶುಲ್ಕದ ಶೇ.20ರಷ್ಟು ಅಂದರೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. "ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಸಾಬೀತಾಗಿದ್ದು, ಅವರ ಪಂದ್ಯ ಶುಲ್ಕದ ಶೇ. 20 ರಷ್ಟು ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ಹೇಳಿಕೆ ತಿಳಿಸಿದೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1ರ ಅಪರಾಧವನ್ನು ರಾಹುಲ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : DC vs PBK: ಡೆಲ್ಲಿ ಕ್ಯಾಪಿಟಲ್ಸ್ - ಪಂಜಾಬ್ ಕಿಂಗ್ಸ್ ನಡುವೆ ಹಣಾಹಣಿ, ಪಿಚ್‌ ರಿಪೋರ್ಟ್‌ ಇಲ್ಲಿದೆ

ಮಾರ್ಕಸ್ ಸ್ಟೊಯಿನಿಸ್ ಛೀಮಾರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಔಟಾದ ನಂತರ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅಂಪೈರ್ ವಿರುದ್ಧ ವಾಗ್ದಾಳಿ ನಡೆಸಿದರು, ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಸ್ಟೊಯಿನಿಸ್ ತಪ್ಪಿತಸ್ಥರೆಂದು ಸಾಬೀತಾಗಿದೆ. ಮಾರ್ಕಸ್ ಸ್ಟೊಯಿನಿಸ್ ಕೂಡ ಲೆವೆಲ್-1ರ ಅಡಿಯಲ್ಲಿನ ಅಪರಾಧವನ್ನು ಪರಿಗಣಿಸಿ ತಮ್ಮ ಮೇಲೆ ಹೇರಲಾಗಿದ್ದ ನಿಷೇಧವನ್ನು ಒಪ್ಪಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಸ್ಟೊಯಿನಿಸ್ 15 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಪಂದ್ಯದ 19 ನೇ ಓವರ್‌ನಲ್ಲಿ ಸ್ಟೊಯಿನಿಸ್ ಔಟಾದರು, ನಂತರ ತುಂಬಾ ಕೋಪಗೊಂಡು ಅಂಪೈರ್‌ನೊಂದಿಗೆ ವಾಗ್ವಾದ ನಡೆಸಿದರು.

18 ರನ್‌ಗಳಿಂದ ಲಕ್ನೋಗೆ ಸೋಲು

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಲಕ್ನೋ 18 ರನ್‌ಗಳಿಂದ ಸೋತಿತು. ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 181 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡ 20 ಓವರ್‌ಗಳಲ್ಲಿ 163 ರನ್ ಗಳಿಸಲು ಸಾಧ್ಯವಾಯಿತು. ಈ ಸೀಸನ್ ನಲ್ಲಿ ಲಕ್ನೋಗೆ ಇದು ಮೂರನೇ ಸೋಲು. ಈ ಸೀಸನ್ ನಲ್ಲಿ ತಂಡವು ಇದುವರೆಗೆ 7 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದೆ ಮತ್ತು 3 ರಲ್ಲಿ ಸೋತಿದೆ.

ಇದನ್ನೂ ಓದಿ : RCB vs LSG: ಡುಫ್ಲೆಸಿಸ್ ಅಬ್ಬರ, ಹೇಜಲ್ ವುಡ್ ಬೌಲಿಂಗ್ ದಾಳಿಗೆ ಲಕ್ನೋ ಸೂಪರ್ ಜೈಂಟ್ಸ್ ತತ್ತರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News