ಬೆಂಗಳೂರು-: ಪಾಲಿಕೆ ಕಸದ ಲಾರಿಯಿಂದಾಗಿ ಸರಿಣಿ ಮೂರು ಅಪಘಾತಗಳಾಗಿದ್ದು, ಇನ್ನು ಮುಂದೆ ಕಾಂಪ್ಯಾಕ್ಟರ್ ಗಳು ರಸ್ತೆಗಿಳಿಯುವ ಮುನ್ನ ಕೆಲ ಕಡ್ಡಾಯ ನಿಯಮ ಪಾಲಿಸಲು ಬಿಬಿಎಂಪಿ ಆದೇಶಿಸಿದೆ. ನಿನ್ನೆ ನಾಯಂಡಹಳ್ಳಿ ರೈಲ್ವೇ ಅಂಡರ್ ಪಾಸ್ ಬಳಿ ನಡೆದ ಅಪಘಾತಕ್ಕೆ ದ್ವಿಚಕ್ರದಲ್ಲಿದ್ದ ಮಹಿಳೆ ಮೃತಪಟ್ಟ ಹಿನ್ನಲೆ ನಿಯಮಗಳನ್ನು ಹೊರಡಿಸಲಾಗಿದೆ.
ಎಲ್ಲಾ ಕಾಂಪ್ಯಾಕ್ಟರ್ ಗಳಿಗೂ ಫಿಟ್ನೆಸ್ ಸರ್ಟಿಫಿಕೇಟ್ ತಪಾಸಣೆ ಆಗಿರಬೇಕು,ಇದನ್ನು ಮಾರ್ಷಲ್ಸ್ ಪರಿಶೀಲಿಸಬೇಕು, ಅನುಭವಿ ಚಾಲಕರಿರಬೇಕು ಸೇರಿಂದತೆ ಎಲ್ಲಾ ಕಾಂಪ್ಯಾಕ್ಟರ್ - ಟಿಪ್ಪರ್ ಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು ಎಂದು ಪಾಲಿಕೆ ನಿಯಮ ಹೊರಡಿಸಿದೆ.ಈ ಬಗ್ಗೆ ಕಾರ್ಯಪಾಲಕ ಅಭಿಯಂತರರು ರ್ಯಾಂಡಮ್ ಚೆಕಿಂಗ್ ಕೈಗೊಂಡು ವಾಹನ ಸಂಚಾರ ಯೋಗ್ಯವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: "ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ"
ಈ ವಿಚಾರವಾಗಿ ಮಾತನಾಡಿದ ವಿಶೇಷ ಆಯುಕ್ತ ಗೌರವ್ ಗುಪ್ತಾ, ಕಸದ ಲಾರಿಯ ಘಟನೆ ಆಗಿರೋದು ದುರ್ಘಟನೆ ಮುಂದೆ ಆಗದಂತೆ ಗಂಭೀರವಾಗಿ ಕ್ರಮಕೈಗೊಳ್ಳಲಾಗುವುದು.ಎಲ್ಲಾ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ತಪಾಸಣೆ ಇರಬೇಕಾಗುತ್ತದೆ. ನಿನ್ನೆಯ ವಾಹನಕ್ಕೆ FC ಆಗಿತ್ತು, ಚಾಲಕರಿಗೂ ಅನುಭವ ಆಗಿರಬೇಕು.ಮಸ್ಟರಿಂಗ್ ಪಾಯಿಂಟ್ ಗಳಲ್ಲಿ ಮಾರ್ಷಲ್ಸ್ ಇದನ್ನು ಪರಿಶೀಲಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: "ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಧರ್ಮ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ"
ಮೇಲ್ಸೇತುವೆಗಳ ಅಕ್ಕಪಕ್ಕದಲ್ಲಿ ಬಹಳ ವೇಗವಾಗಿ ವಾಹನಗಳು ಓಡಾಡುತ್ತವೆ. ಇಂತಹ ಜಾಗದಲ್ಲಿ ಮಾರ್ಗಮಧ್ಯೆಯ ರಸ್ತೆವಿಭಜಕದ ಎತ್ತರ ಏರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪಾದಾಚಾರಿಗಳಿಗೆ ರಸ್ತೆದಾಟಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಗುತ್ತಿಗೆದಾರರು ಪ್ರತೀ ತಿಂಗಳು ವಾಹನಗಳ ನಿರ್ವಹಣೆಗೆ ಪಾಲಿಕೆ ಹಣ ನೀಡುತ್ತಿದೆ.ಸುಸ್ಥಿತಿಯಲ್ಲಿರುವ ವಾಹನಗಳನ್ನು ಬಳಸುವುದು ಗುತ್ತಿಗೆದಾರರ ಜವಾಬ್ದಾರಿ. ಈ ಬಗ್ಗೆ ಈಗಾಗಲೇ ಗುತ್ತಿಗೆದಾರರ ಸಭೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಈ ವೇಳೆ ಹೊಸ ವಾಹನಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದರು.
ಮೃತಪಟ್ಟ ಪದ್ಮಿನಿ ಕುಟುಂಬಕ್ಕೆ ಪರಿಹಾರ
ನಿನ್ನೆ ಅಪಘಾತದಲ್ಲಿ ಮೃತಪಟ್ಟ ಆರ್ ಆರ್ ನಗರದ ನಿವಾಸಿ ಪದ್ಮಿನಿ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು.ರಸ್ತೆ ಅಪಘಾತಗಳಾದ ಇನ್ಶೂರೆನ್ಸ್ ಇರುತ್ತವೆ.ಮಾನವೀಯತೆ ದೃಷ್ಟಿಯಿಂದ ಪಾಲಿಕೆ ವತಿಯಿಂದ ಪರಿಹಾರ ಕೊಡಲಾಗುವುದು.ಘಟನೆಯ ಸಂಪೂರ್ಣ ವರದಿ ಬಂದ ಮೇಲೆ ಪರಿಹಾರ ತೀರ್ಮಾನಿಸಲಾಗುವುದು ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.