ಐಎಎಸ್ ಟಾಪರ್ ಟೀನಾ ದಾಬಿ ಮಾಜಿ ಪತಿ, ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಇತ್ತೀಚೆಗೆ ಹಂಚಿಕೊಂಡಿದ್ದ ಪೋಸ್ಟ್ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಐಎಎಸ್ ಅಧಿಕಾರಿಗಳು ಸಹ ಲೈಕ್ಸ್ಗಳು ಮತ್ತು ಕಾಮೆಂಟ್ಗಳನ್ನು ಬಯಸುತ್ತಾರೆ. ಹಿಂದೆ ಟೈಮ್ ಪಾಸ್ಗೆ ಬಳಕೆಯಾಗುತ್ತಿದ್ದ ಸೋಷಿಯಲ್ ಮೀಡಿಯಾ ಇದೀಗ ಜನರ ಸಂವಹನದ ಪ್ರಮುಖ ಮಾಧ್ಯಮವಾಗಿದೆ. ಐಎಎಸ್ ಟಾಪರ್ ಟೀನಾ ದಾಬಿ ಮಾಜಿ ಪತಿ, ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಅವರು ಇತ್ತೀಚೆಗೆ ಹಂಚಿಕೊಂಡಿದ್ದ ಪೋಸ್ಟ್ ವೊಂದು ಸಖತ್ ವೈರಲ್ ಆಗಿದೆ. ಅಥರ್ ಖಾನ್ ಅವರ ಹ್ಯಾಂಡ್ಸಮ್ ಲುಕ್ಗೆ ಹುಡುಗಿಯರು ಫಿದಾ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಫೇಸ್ಬುಕ್ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಅವರನ್ನು ಅನುಸರಿಸಿದರೆ, ಇನ್ಸ್ಟಾಗ್ರಾಮ್ನಲ್ಲಿ ಸುಮಾರು 6 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಮಂಗಳವಾರ ತಮ್ಮ ಫೋಟೋವನ್ನು ಇನ್ಸ್ಟಾ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಅದು ಸಖತ್ ವೈರಲ್ ಆಗಿದೆ.
ಕಳೆದ 20 ಗಂಟೆಗಳಲ್ಲಿ ಇನ್ಸ್ಟಾ-ಫೇಸ್ಬುಕ್ನಲ್ಲಿ ಈ ಫೋಟೋಗೆ 4 ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ಗಳು ಬಂದಿವೆ. ಈ ಫೋಟೋಗೆ ನೂರಾರು ಹುಡುಗಿಯರು ಹೃದಯದ ಎಮೋಜಿ ಕಳುಹಿಸಿದ್ದು, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಹುಡುಗಿಯರು ಅಥರ್ ಖಾನ್ ಅವರ ಲುಕ್ಗೆ ಫಿದಾ ಆಗಿದ್ದಾರೆ. ‘ಯಾರಿದು ಇಷ್ಟು ಸುಂದರವಾಗಿರುವುದು’ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.
2015ರ UPSC ಪರೀಕ್ಷೆಯಲ್ಲಿ ಅಥರ್ ಖಾನ್ 2ನೇ ರ್ಯಾಂಕ್ ಗಳಿಸಿದ್ದರು. ಪ್ರಸ್ತುತ ಅವರ ಪೋಸ್ಟಿಂಗ್ ಶ್ರೀನಗರದಲ್ಲಿದೆ. ಬಿಳಿ ಶರ್ಟ್ ಮತ್ತು ಜೀನ್ಸ್ನಲ್ಲಿ ಕಾಣಿಸಿಕೊಂಡಿರುವ ಅಥರ್ ತಮ್ಮ ವಿಶಿಷ್ಟ ನೋಟದಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಈ ಫೋಟೋಗೆ ಫೇಸ್ಬುಕ್ನಲ್ಲಿ 23 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಒಂದೂವರೆ ಸಾವಿರಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿವೆ.
ಐಎಎಸ್ ಅಧಿಕಾರಿ ಅಥರ್ ಖಾನ್ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯವರು. ಕಾಲೇಜು ದಿನಗಳಲ್ಲಿಯೇ ಐಎಎಸ್ ಆಗಬೇಕೆಂದು ಅವರು ನಿರ್ಧರಿಸಿದ್ದರು. ಕಾಲೇಜು ಮುಗಿಯುವ ಮೊದಲೇ ಅಥರ್ ಯುಪಿಎಸ್ಸಿಗೆ ತಯಾರಿ ಆರಂಭಿಸಿದ್ದರು. ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹಿಮಾಚಲದಲ್ಲಿ ಓದುತ್ತಿದ್ದಾಗ ಯುಪಿಎಸ್ಸಿಗೆ ತಯಾರಿ ನಡೆಸಲು ಪ್ರತಿವಾರ ಮಂಡಿಯಿಂದ ದೆಹಲಿಗೆ ಬಸ್ನಲ್ಲಿ ಬರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಕಾಶ್ಮೀರದಲ್ಲಿನ ಪರಿಸ್ಥಿತಿ ಹದಗೆಟ್ಟಾಗ, ಕಷ್ಟದ ಸಂದರ್ಭಗಳಲ್ಲಿಯೂ ಅವರು ಐಎಎಸ್ ಅಧ್ಯಯನವನ್ನು ಬಿಟ್ಟಿರಲಿಲ್ಲವಂತೆ.
ಅಥರ್ ಖಾನ್ ಅವರು ತಮ್ಮ ಅತ್ಯುತ್ತಮ ಕೆಲಸಗಳ ಮೂಲಕ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಸ್ಮಾರ್ಟ್ ಸಿಟಿ ಅವಾರ್ಡ್ 2022 ಈವೆಂಟ್ನಲ್ಲಿ ಅವರ ನಾಯಕತ್ವದಲ್ಲಿ ಶ್ರೀನಗರ ಸ್ಮಾರ್ಟ್ ಸಿಟಿಗೆ ವರ್ಷದ ಅತ್ಯುತ್ತಮ ನಗರ ಪ್ರಶಸ್ತಿಯನ್ನು ದೊರಕಿತು. ಇದಕ್ಕೂ ಮೊದಲು ಅವರು 2020ರಲ್ಲಿ ಐಐಟಿ ಮಂಡಿಯಿಂದ ಯುವ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ಭಿಲ್ವಾರಾ ಜಿಲ್ಲಾಡಳಿತವು ಲೋಕಸಭೆ ಚುನಾವಣೆ 2019ರ ಯಶಸ್ವಿ ನಿರ್ವಹಣೆಗಾಗಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.