PM Modi Alert! ಕೊರೊನಾ ಕುರಿತು ಪ್ರಧಾನಿ ಮೋದಿಯಿಂದ ಎಚ್ಚರಿಕೆ, ಸತತ ರೂಪ ಬದಲಾಯಿಸುತ್ತಿದೆ ಬಹುರೂಪಿ

PM Warned - 'ಬಹ್ರೂಪಿಯಾ' ಕೋವಿಡ್ -19 (Covid 19) ಮತ್ತೆ ಯಾವಾಗ ಮುಂಚೂಣಿಗೆ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ ಎಂದು ಪ್ರಧಾನಿ ಮೋದಿ (PM Modi) ಹೇಳಿದರು. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸುಮಾರು 185 ಕೋಟಿ ಡೋಸ್ ಲಸಿಕೆಗಳನ್ನು ನೀಡುವ ಕೆಲಸ ಜನರ ಬೆಂಬಲದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.  

Written by - Nitin Tabib | Last Updated : Apr 10, 2022, 09:20 PM IST
  • ಗುಜರಾತ್‌ನ ಜುನಾಗಢ್‌ನ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು
  • ಕರೋನಾ ಇನ್ನೂ ಮುಗಿದಿಲ್ಲ ಎಂದ ಪ್ರಧಾನಿ ಮೋದಿ
  • ಲಸಿಕೆಯಿಂದಾಗಿ ಕರೋನಾ ನಿಂತುಹೋಗಿದೆ ಎಂದ ಪ್ರಧಾನಿ
PM Modi Alert! ಕೊರೊನಾ ಕುರಿತು ಪ್ರಧಾನಿ ಮೋದಿಯಿಂದ ಎಚ್ಚರಿಕೆ, ಸತತ ರೂಪ ಬದಲಾಯಿಸುತ್ತಿದೆ ಬಹುರೂಪಿ title=
PM Modi Alert On Corona

ಅಹಮದಾಬಾದ್: ಕೊರೊನಾ ವೈರಸ್ (Coronavirus) ಮಾಯವಾಗಿಲ್ಲ (Coronavirus Not End), ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಇದರೊಂದಿಗೆ, ಕರೋನಾ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಜಾಗರೂಕರಾಗಿರಲು ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಲಸಿಕೆಯಿಂದಾಗಿ ಕರೋನಾ ನಿಂತಿದೆ
'ಬಹುರೂಪಿ' ಕೋವಿಡ್ -19 ಮತ್ತೆ ಯಾವಾಗ ಮುಂಚೂಣಿಗೆ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೋವಿಡ್ -19 ಹರಡುವುದನ್ನು ತಡೆಯಲು ಸುಮಾರು 185 ಕೋಟಿ ಡೋಸ್ ಲಸಿಕೆಗಳನ್ನು ನೀಡುವ ಕೆಲಸ ಜನರ ಬೆಂಬಲದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮಾತು
ಗುಜರಾತ್‌ನ ಜುನಾಗಢ (PM Says In Junagarh Gujarat) ಜಿಲ್ಲೆಯ ವಂತಲಿಯಲ್ಲಿ ಮಾ ಉಮಿಯಾ ಧಾಮ್‌ನ ಮಹಾಪಾತೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ಕಡ್ವಾ ಪಾಟಿದಾರ್ ಸಮುದಾಯದ ದೇವತೆ ಎಂದೇ ಪರಿಗಣಿಸಲಾಗುವ ಉಮಿಯಾ ದೇವಿ ದೇವಸ್ಥಾನದ 14 ನೇ ಸಂಸ್ಥಾಪನಾ ದಿನದಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಸಾಯನಿಕ ಗೊಬ್ಬರಗಳ ಭೀತಿಯಿಂದ ಭೂಮಿ ತಾಯಿಯನ್ನು ರಕ್ಷಿಸಲು ನೈಸರ್ಗಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಉಮಿಯಾ ಭಕ್ತರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ-BJP MLA : ನಾನು ಮುಖ್ಯಮಂತ್ರಿ ಕೆಳಗಿಳಿಸೋ ತಾಕತ್ತು ಇಟ್ಕೊಂಡಿನಿ : ಶಾಸಕ ಯತ್ನಾಳ್

ಭಾರತಕ್ಕೆ ಸ್ವಾತಂತ್ರ್ಯ ದೊರೆತ 75ನೇ ವರ್ಷದಲ್ಲಿ ಆಯೋಜಿಸಲಾಗುತ್ತಿರುವ ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರ ತಯಾರಿಸಲು ನಿರ್ಧರಿಸಲಾಗಿದ್ದು, ಸಹಕರಿಸುವಂತೆ ಅವರು ಮನವಿ ಮಾಡಿದರು.

ಇದನ್ನೂ ಓದಿ-Amit Shah : ಪಾಕ್ ಗಡಿಯಲ್ಲಿ ಘರ್ಜಿಸಿದ ಗೃಹ ಸಚಿವ ಅಮಿತ್ ಶಾ

ಕರೋನಾಗೆ 'ಬಹುರೂಪಿ' ಎಂದು ಕರೆದ ಪ್ರಧಾನಿ ಮೋದಿ
ಕರೋನಾ ವೈರಸ್ (ಜಾಗತಿಕ ಸಾಂಕ್ರಾಮಿಕ) ಒಂದು ದೊಡ್ಡ ಬಿಕ್ಕಟ್ಟು ಮತ್ತು ಬಿಕ್ಕಟ್ಟು ಮುಗಿದಿದೆ ಎಂದು ನಾವು ಹೇಳುತ್ತಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಸ್ವಲ್ಪ ಹೊತ್ತು ಅದು ನಿಂತಿರಬಹುದು. ಆದರೆ, ಮತ್ತೆ ಅದು ಯಾವಾಗ ಬರುತ್ತೋ ಗೊತ್ತಿಲ್ಲ. ಅದೊಂದು ‘ವೇಷಧಾರಿ’ ರೋಗ ಎಂದು ಪ್ರಧಾನಿ ಹೇಳಿದ್ದಾರೆ. ಅದನ್ನು ತಡೆಯಲು ಸುಮಾರು 185 ಕೋಟಿ ಡೋಸ್ ನೀಡಲಾಗಿದ್ದು, ಜಗತ್ತನ್ನೇ ಅಚ್ಚರಿಗೊಳಿಸಿದೆ. ಕೇವಲ ನಿಮ್ಮೆಲ್ಲರ ಬೆಂಬಲದಿಂದ ಮಾತ್ರ ಅದು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News