ಸ್ವೀಡನ್ ಗೆ ವರವಾದ ಪೆನಾಲ್ಟಿ ಗೋಲು,ದ.ಕೊರಿಯಾ ವಿರುದ್ಧ 1-0 ಗೆಲುವು

    

Last Updated : Jun 18, 2018, 11:48 PM IST
ಸ್ವೀಡನ್ ಗೆ ವರವಾದ ಪೆನಾಲ್ಟಿ ಗೋಲು,ದ.ಕೊರಿಯಾ ವಿರುದ್ಧ 1-0 ಗೆಲುವು  title=

ಮಾಸ್ಕೋ: ಫೀಫಾ ವಿಶ್ವಕಪ್ 21 ನೇ ಆವೃತ್ತಿಯಲ್ಲಿ ಸ್ವೀಡನ್ ತಂಡವು ದಕ್ಷಿಣ ಕೊರಿಯಾದ ವಿರುದ್ಧ 1-0 ಅಂತರದ ಜಯಗಳಿಸಿದೆ.

ಪಂಧ್ಯದ ದ್ವೀತಿಯಾರ್ಧದಲ್ಲಿ  ಆಂಡ್ರಿಯಾಸ್ ಗ್ರ್ಯಾನ್ಕ್ವಿಸ್ಟ್ ಪೆನಾಲ್ಟಿ ಲಾಭ ಪಡೆದು ತಂಡದ ಗೆಲುವಿಗೆ ಕಾರಣರಾದರು. ಆ ಮೂಲಕ ಗೆಲುವಿನ ಅಭಿಯಾನ ಮುಂದುವರೆಸಿದೆ. ಪಂದ್ಯದ 64 ನೇ ನಿಮಿಷದಲ್ಲಿ ಗ್ರ್ಯಾನ್ಕ್ವಿಸ್ಟ್ನ ಪೆನಾಲ್ಟಿ ಕಿಕ್ ಪಂದ್ಯದ ಸಂಪೂರ್ಣ ಚಿತ್ರಣವನ್ನೇ ಬದಲಿಸಿತು. ಆ ಮೂಲಕ ಸ್ವೀಡನ್ ಪೂರ್ಣ ಮೂರು ಅಂಕಗಳನ್ನು ಗಳಿಸಿತು. 

ಪಂದ್ಯದ ಪ್ರಾರಂಭದಲ್ಲಿ ಸುಮಾರು ಮೊದಲ 10 ನಿಮಿಷಗಳ ಕಾಲ  ದಕ್ಷಿಣ ಕೊರಿಯಾ ಎರಡು ಬದಿಯಲ್ಲಿ ಸ್ವೀಡನ್ ಮೇಲೆ ಉತ್ತಮ ಹಿಡಿತ ಸಾಧಿಸಿತ್ತು ಆದರೆ ಕಾಲಾಂತರದಲ್ಲಿ ಎಲ್ಲವೂ ಬದಲಾಯಿತು. ಪಂದ್ಯದ 20 ನೇ ನಿಮಿಷದಲ್ಲಿ ಸ್ವೀಡಿನ್ ಮಾರ್ಕಸ್ ಬರ್ಗ್ ಅವರಿಗೆ ಗೋಲು ಗಳಿಸುವ ಉತ್ತಮ ಅವಕಾಶ ದೊರೆತಿತ್ತು ಆದರೆ ದಕ್ಷಿಣ ಕೊರಿಯಾದ ಗೋಲ್ಕೀಪರ್ ತಡೆಯುವಲ್ಲಿ ಯಶಸ್ವಿಯಾದರು.

ಇದಾದ ನಂತರ ಮೊದಲ ಅರ್ಧ ಪಂಧ್ಯ ಯಾವುದೇ ಗೋಲ್ ಇಲ್ಲಿದೆ ನಡೆಯಿತು.ಆದರೆ ದ್ವೀತಿಯಾರ್ದದಲ್ಲಿ ಸ್ವೀಡನ್ ಗೋಲುಗಳಿಸುವ ಮೂಲಕ ಮುನ್ನಡೆ ಸಾದಿಸಿತು.

Trending News