ನವದೆಹಲಿ: Weekly Rashifal - ವೃಷಭ ರಾಶಿಯ ಜನರ ಪಾಲಿಗೆ ಈ ವಾರ ಆಕಸ್ಮಿಕ ಧನಲಾಭ ತರಲಿದೆ. ಮಿಥುನ ರಾಶಿಯ ಜನರಿಗೆ ಕೌಟುಂಬಿಕ ಸುಖ ನೀಡಲಿದೆ. ಹಾಗಾದರೆ, ಬನ್ನಿ ಆಸ್ಟ್ರೋಗುರು ಬೇಜಾನ್ ದಾರುವಾಲಾ ಅವರ ಪುತ್ರ ಚಿರಾಗ್ ದಾರುವಾಲಾ ಪ್ರಕಾರ ಮುಂದಿನ ವಾರ ವಿವಿಧ ರಾಶಿಗಳ (Zodiac Signs) ಪಾಲಿಗೆ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ (Aries): ಈ ವಾರ ವ್ಯಾಪಾರ ಪ್ರವಾಸಗಳು ನಡೆಯಲಿದ್ದು, ಅದರಲ್ಲಿ ಧನಾತ್ಮಕ ಫಲಿತಾಂಶಗಳು ಕಂಡುಬರಲಿವೆ. ಕೆಲಸದ ಸ್ಥಳದಲ್ಲಿ ಪ್ರತಿಷ್ಠೆಯ ಜೊತೆಗೆ, ನೀವು ಆರ್ಥಿಕ ಅಭಿವೃದ್ದಿಯನ್ನು ಸಹ ಹೊಂದುವಿರಿ. ನೀವು ಯಾವುದೇ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ವೃಷಭ(Taurus): ಈ ವಾರ ಅತ್ತೆಯ ಮನೆಯಿಂದ ನಿಮಗೆ ಒಳ್ಳೆಯ ಸುದ್ದಿ ಬರಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಹಠಾತ್ ಹಣದ ಲಾಭವಾಗಬಹುದು. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಪೂರ್ಣ ವಿಶ್ವಾಸದಿಂದ ತನ್ನ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಈ ವಾರ ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.
ಮಿಥುನ (Gemini): ಈ ವಾರ ಕುಟುಂಬಕ್ಕೆ ಉತ್ತಮ ಸಂತೋಷ ಮತ್ತು ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ಉತ್ಸಾಹ ಮತ್ತು ಆನಂದದಲ್ಲಿ ಹೆಚ್ಚಳವನ್ನು ನೀವು ನೋಡುವಿರಿ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಬಹಳ ಸಮಯದ ನಂತರ ನೀವು ಪರಿಚಿತ ವ್ಯಕ್ತಿಯನ್ನು ಭೇಟಿ ಮಾಡಬಹುದು.
ಕರ್ಕ (Cancer): ಈ ವಾರ ಮನೆಯ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ.. ನೀವು ಯಾವುದೇ ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಇದರಿಂದ ಮನಸ್ಸು ಸಂತೋಷವಾಗುತ್ತದೆ. ದೂರದ ಪ್ರಯಾಣ ಅಥವಾ ನಿಮ್ಮ ಆಯ್ಕೆಯ ಪ್ರಯಾಣದ ಅವಕಾಶ ನಿಮಗೆ ಸಿಗಲಿದೆ.
ಸಿಂಹ (Lio): ಈ ವಾರ ಆಕಸ್ಮಿಕ ಧನಲಾಭದ ಸಂಕೇತಗಳಿವೆ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀವು ಪಡೆಯುವಿರಿ. ಸಂಬಂಧಿಕರ ಮನೆಗೆ ಹೋಗುವ ಯೋಜನೆ ರೂಪುಗೊಳ್ಳಲಿದೆ. ನಿಮ್ಮ ಎದುರಾಳಿಗಳನ್ನು ಸೋಲಿಸಲು ನಿಮಗೆ ಸಾಧ್ಯವಾಗಲಿದೆ. ಈ ವಾರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯ ಸಿಗಲಿದೆ.
ಕನ್ಯಾ(Virgo): ಈ ವಾರ ವ್ಯಾಪಾರ ಕ್ಷೇತ್ರದಲ್ಲಿ ಲಾಭದ ಪರಿಸ್ಥಿತಿ ಇದೆ . ಒಳ್ಳೆಯ ಸುದ್ದಿ ನಿಮಗೆ ಮೇಲುಗೈ ಸಾಧಿಸುತ್ತದೆ ಮತ್ತು ಅದೃಷ್ಟದ ಬೆಂಬಲ ನಿಮಗಿರಲಿದೆ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.
ತುಲಾ(Libra): ಈ ವಾರ ವೈವಾಹಿಕ ಜೀವನ ಸುಖಮಯವಾಗಿರಲಿದೆ. ಕೆಲಸ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಯಾಣದ ಯೋಗ ಇರಲಿದೆ. ಬುದ್ಧಿವಂತಿಕೆ ಮತ್ತು ಪ್ರಭಾವಶಾಲಿ ವ್ಯಕ್ತಿತ್ವದಿಂದಾಗಿ, ಎದುರಾಳಿಯ ಮೆಚ್ಚುಗೆಗೆ ಪಾತ್ರರಗುವಿರಿ.ನಿಮ್ಮ ತಾಯಿಯೊಂದಿಗೆ ಉತ್ತಮ ನಡವಳಿಕೆಯನ್ನು ಇಟ್ಟುಕೊಳ್ಳಿ, ಇಲ್ಲದಿದ್ದರೆ ನೀವು ತೊಂದರೆಗಳನ್ನು ಎದುರಿಸಬೇಕಾಗಬಹುದು.
ವೃಶ್ಚಿಕ (Scorpio): ಈ ವಾರ ನಿಮಗೆ ಆಹ್ಲಾದಕರ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಕೌಟುಂಬಿಕ ಸುಖ ಸಂತೋಷದಲ್ಲಿ ಸ್ವಲ್ಪ ಕೊರತೆ ಎದುರಾಗಬಹುದು. ಈ ವಾರ, ಇತರರ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಕೆಲಸದ ಕ್ಷೇತ್ರದಲ್ಲಿ ನೀವು ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುವಿರಿ.
ಧನು (Sagittarius): ಈ ವಾರ ಕುಟುಂಬದಲ್ಲಿ ಕೆಲವು ರೀತಿಯ ಧಾರ್ಮಿಕ ಕಾರ್ಯಗಳು ಅಥವಾ ಶುಭ ಕಾರ್ಯಗಳು ನೆರವೇರಲಿವೆ. ಹೊಸ ಜನರೊಂದಿಗೆ ಸ್ನೇಹ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಮಕರ (Capricorn): ಈ ವಾರ ಕಾನೂನು ವಿವಾದಗಳು ಮತ್ತು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗಲಿದೆ. ಕೆಲಸ ಪ್ರಗತಿಯಲ್ಲಿ ಮುಂದುವರಿಯುತ್ತದೆ. ಪ್ರತಿಕೂಲತೆಯನ್ನು ಎದುರಿಸಲು ನೀವು ಯಾವಾಗಲೂ ನಿಮ್ಮ ಧೈರ್ಯ ಮತ್ತು ತಾಳ್ಮೆಯನ್ನು ಸೂಕ್ತವಾಗಿ ಬಳಸುತ್ತೀರಿ. ಪಾರ್ಟ್ನರ್ ಶಿಪ್ ನಲ್ಲಿ ಮಾಡಿದ ಕೆಲಸವು ನಿಮಗೆ ಯಶಸ್ಸನ್ನು ನೀಡಲಿದೆ. ದೈವಿಕ ಶಕ್ತಿ ನಿಮ್ಮೊಂದಿಗೆ ಇರಲಿದೆ.
ಕುಂಭ(Aquarius): ಈ ವಾರ ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಪಡೆಯುವ ಸಂಕೇತಗಳು ಗೋಚರಿಸುತ್ತಿವೆ. ಆರೋಗ್ಯವು ಉತ್ತಮವಾಗಿ ಇರಲಿದೆ. ನಿಮ್ಮ ವೈವಾಹಿಕ ಸಂತೋಷ ಹೆಚ್ಚಾಗಲಿದೆ, ಸಂಗಾತಿ ಮತ್ತು ಮಕ್ಕಳ ದೆಸೆಯಿಂದ ಮನಸ್ಸು ಸಂತೋಷವಾಗಿರುತ್ತದೆ. ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ನೀವು ಅವಿವಾಹಿತರಾಗಿದ್ದರೆ, ಈ ವಾರ ಮದುವೆಯಾಗುವ ಅಥವಾ ನಿಶ್ಚಿತಾರ್ಥ ನೆರವೇರುವ ಸಾಧ್ಯತೆಗಳಿವೆ.
ಇದನ್ನೂ ಓದಿ-Chanakya Niti: ಮನುಷ್ಯನ ಇಂತಹ ವರ್ತನೆ ಮನೆ ಕುಟುಂಬವನ್ನೇ ಸರ್ವನಾಶ ಮಾಡುತ್ತದೆ, ಈಗಲೇ ಎಚ್ಚೆತ್ತುಕೊಳ್ಳಿ!
ಮೀನ(Pices): ಈ ವಾರ ವೈವಾಹಿಕ ಜೀವನದಲ್ಲಿ ಮಧುರತೆ ಇರಲಿದೆ. ಲಾಭದ ಅವಕಾಶಗಳು ಕೂಡಿ ಬರಲಿವೆ. ವ್ಯಾಪಾರ-ವ್ಯವಹಾರ ಲಾಭದಾಯಕವಾಗಲಿದೆ. ಉದ್ಯೋಗದಲ್ಲಿ ಹಕ್ಕುಗಳು ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಜಾಗೃತರಾಗಿರಿ. ಸಂಭಾಷಣೆಯಲ್ಲಿ ಉತ್ತಮವಾಗಿರುವುದರಿಂದ ನೀವು ಇತರರೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಸಾಧ್ಯವಾಗಲಿದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.