Cheapest Recharge Plan: ಕೇವಲ ರೂ. 259ಕ್ಕೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಪ್ಲಾನ್ ಬಿಡುಗಡೆ ಮಾಡಿದ Jio

Reliance Jio News - ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಮತ್ತೊಂದು ಉತ್ತಮ ಯೋಜನೆಯನ್ನು ಪ್ರಾರಂಭಿಸಿದೆ. ಕಂಪನಿಯ ಈ ಯೋಜನೆ 259 ರೂ. ಯೋಜನೆಯಾಗಿದೆ. ಇದು ಕಂಪನಿಯ ಕ್ಯಾಲೆಂಡರ್ ತಿಂಗಳ ಮಾನ್ಯತೆ ಹೊಂದಿರುವ ಯೋಜನೆಯಾಗಿದೆ. 

Written by - Nitin Tabib | Last Updated : Mar 28, 2022, 04:07 PM IST
  • Jio ನಿಂದ ಧೂಳೆಬ್ಬಿಸುವ ಪ್ಲಾನ್ ಬಿಡುಗಡೆ
  • ಈ ಪ್ಲಾನ್ ಬೆಲೆ ಕೇವಲ ರೂ.259 ಆಗಿದೆ.
  • ಈ ಪ್ಲಾನ್ ವಿಶೇಷತೆ ತಿಳಿದುಕೊಳ್ಳಲು ಸುದ್ದಿ ಓದಿ
Cheapest Recharge Plan: ಕೇವಲ ರೂ. 259ಕ್ಕೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಪ್ಲಾನ್ ಬಿಡುಗಡೆ ಮಾಡಿದ Jio title=
Jio Prepaid Recharge Plan

Reliance Jio News - ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಮತ್ತೊಂದು ಉತ್ತಮ ಯೋಜನೆಯನ್ನು ಪ್ರಾರಂಭಿಸಿದೆ. ಕಂಪನಿಯ ಈ ಯೋಜನೆ 259 ರೂ. ಯೋಜನೆಯಾಗಿದೆ. ಇದು ಕಂಪನಿಯ ಕ್ಯಾಲೆಂಡರ್ ತಿಂಗಳ ಮಾನ್ಯತೆ ಹೊಂದಿರುವ ಯೋಜನೆಯಾಗಿದೆ (Prepaid Recharge Plan). ಈ ಯೋಜನೆಯ ವಿಶೇಷತೆ ಎಂದರೆ, ಇದು ಒಂದು ಪೂರ್ಣ ತಿಂಗಳು ಅಂದರೆ 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಯೋಜನೆಯಲ್ಲಿ, ಬಳಕೆದಾರರು ಈ ಯೋಜನೆಯಲ್ಲಿ ಸಾಕಷ್ಟು ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಪಡೆಯಲಿದ್ದಾರೆ.

ಇದನ್ನೂ ಓದಿ-ಫ್ರೀ ಆಗಿ ಸಿಗುತ್ತೆ Netflix, Disney+Hotstar, Amazon Prime Video ಸದಸ್ಯತ್ವ! ಹೇಗೆಂದು ತಿಳಿಯಿರಿ...

ಜಿಯೋ 259 ರೂ. ಪ್ರಿಪೇಯ್ಡ್ ಯೋಜನೆ (Jio Prepaid Plans)
ರಿಲಯನ್ಸ್ ಜಿಯೋದ ಈ ಯೋಜನೆಯು (Prepaid Recharge Plan) ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾವನ್ನು ನೀಡುತ್ತದೆ. ಯೋಜನೆಯಲ್ಲಿ (Jio Pan) ನಿಮಗೆ 30 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. ಈ ರೀತಿಯಾಗಿ ಒಂದು ತಿಂಗಳಿಗೆ ನೀವು ಒಟ್ಟು 45 GB ಹೈ ಸ್ಪೀಡ್ ಡೇಟಾ ಸಿಗಲಿದೆ. ಇದರಲ್ಲಿ ನಿಮಗೆ ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಸೌಲಭ್ಯವನ್ನು ಸಹ ನೀಡಲಾಗುತ್ತಿದೆ. ಇದಲ್ಲದೆ, ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ಒದಗಿಸಲಾಗುತ್ತಿದೆ.

ಇದನ್ನೂ ಓದಿ-Flipkart Electronics Sale: ಸ್ಯಾಮ್‌ಸಂಗ್‌ನ 24,000 ರೂ.ಗಳ 5G ಸ್ಮಾರ್ಟ್‌ಫೋನ್ ಅನ್ನು 3 ಸಾವಿರ ರೂ.ಗೆ ಮನೆಗೆ ತನ್ನಿ

ಬಳಕೆದಾರರು ಮಾರ್ಚ್ 5 ರಂದು ಹೊಸ ₹259 ಮಾಸಿಕ ಯೋಜನೆ ಬಳಸಿ ರೀಚಾರ್ಜ್ ಮಾಡಿದರೆ, ಮುಂದಿನ ರೀಚಾರ್ಜ್ ದಿನಾಂಕವು ಏಪ್ರಿಲ್ 5, ನಂತರ ಮೇ 5 ಮತ್ತು ನಂತರ ಜೂನ್ 5 ಆಗಿರಲಿದೆ. ಇತರ ಜಿಯೋ ಪ್ರಿಪೇಯ್ಡ್ ಯೋಜನೆಗಳಂತೆ, ನೀವು ₹ 259 ರ ಯೋಜನೆಯನ್ನು ಒಂದೇ ಬಾರಿಗೆ ಹಲವಾರು ಬಾರಿ ರೀಚಾರ್ಜ್ ಮಾಡಬಹುದು. ಇದರೊಂದಿಗೆ, ಪ್ರಸ್ತುತ ಸಕ್ರಿಯ ಯೋಜನೆಯ ನಂತರ ಹೊಸ ತಿಂಗಳಲ್ಲಿ ಇದು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಇದು ಮತ್ತೆ ಮತ್ತೆ ರೀಚಾರ್ಜ್ ಮಾಡುವ ನಿಮ್ಮ ತೊಂದರೆಯನ್ನು ತಪ್ಪಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News