ಈ ವಸ್ತುಗಳನ್ನು ತಿಂದ ನಂತರ ಹಾಲು ಕುಡಿಯಲೇ ಬಾರದು ..!

ಆರೋಗ್ಯವಾಗಿರಲು ಮಗುವಾಗಲಿ, ವೃದ್ಧರಾಗಲಿ ಎಲ್ಲರಿಗೂ ಪೌಷ್ಟಿಕ ಆಹಾರ ಬಹಳ ಮುಖ್ಯ. ಈ ಆಹಾರಗಳಲ್ಲಿ ಹಾಲು ಕೂಡ ಒಂದು

ಬೆಂಗಳೂರು : ಆರೋಗ್ಯವಾಗಿರಲು ಮಗುವಾಗಲಿ, ವೃದ್ಧರಾಗಲಿ ಎಲ್ಲರಿಗೂ ಪೌಷ್ಟಿಕ ಆಹಾರ ಬಹಳ ಮುಖ್ಯ. ಈ ಆಹಾರಗಳಲ್ಲಿ ಹಾಲು ಕೂಡ ಒಂದು. ಹಾಲನ್ನು ಸಂಪೂರ್ಣ ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ಇತರ ಅನೇಕ ಜೀವಸತ್ವಗಳು ಸೇರಿಕೊಂಡಿವೆ. ಆದರೆ ಹಾಲು ಸೇವಿಸಿದ ನಂತರವೂ ಆರೋಗ್ಯವನ್ನು ಹದಗೆಡಬಹುದು.  ಕೆಲವೊಂದು ವಸ್ತುಗಳನ್ನು ತಿಂದು ಅದರ ಮೇಲೆ ಹಾಲು ಕುಡಿದರೆ  ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಉದ್ದಿನ ಬೇಳೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದರೆ ಇದು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಉದ್ದಿನಬೇಳೆ ತಿಂದ ತಕ್ಷಣ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಇದರಿಂದ ಅನಾರೋಗ್ಯಕ್ಕೆ ತುತ್ತಾಗಬಹುದು. ಆದ್ದರಿಂದ ನೀವು ಉದ್ದಿನಬೇಳೆ ತಿಂದಿದ್ದರೆ ಕನಿಷ್ಠ ಎರಡು ಗಂಟೆಗಳ ನಂತರವೇ ಹಾಲು ತೆಗೆದುಕೊಳ್ಳಿ.

2 /5

ಮೊಸರನ್ನು ಹಾಲಿನಿಂದಲೇ ಮಾಡಲಾಗುತ್ತದೆ. ಮೊಸರು ತುಂಬಾ ಹುಳಿಯಾದಾಗ, ಅದಕ್ಕೆ ಹಾಲು ಸೇರಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ, ಆದರೆ ಇದು ಸರಿಯಲ್ಲ. ಮೊಸರು ತಿಂದ ನಂತರ ಹಾಲು ಕುಡಿಯಲು ಕನಿಷ್ಠ ಒಂದು ಗಂಟೆಯಾದರೂ ಕಾಯಲೇಬೇಕು.  ಇಲ್ಲವಾದರೆ ಆಮ್ಲೀಯತೆ, ಗ್ಯಾಸ್ ಮುಂತಾದ ಸಮಸ್ಯೆಗಳು ಎದುರಾಗಬಹುದು. 

3 /5

ನೀವು ಸಿಟ್ರಸ್ ಹಣ್ಣುಗಳನ್ನು ಸೇವಿಸಿದ್ದರೆ, ಸ್ವಲ್ಪ ಸಮಯದವರೆಗೆ ಹಾಲು ಕುಡಿಯಬೇಡಿ. ಹುಳಿ ತಿಂದು ಹಾಲು ಕುಡಿದರೆ ರೋಗಗಳಿಗೆ ಆಹ್ವಾನ ನೀಡಿದಂತೆ. ಕಿತ್ತಳೆ, ದ್ರಾಕ್ಷಿಹಣ್ಣು, ನಿಂಬೆಹಣ್ಣು, ಲಿಚಿ ಅಥವಾ ಯಾವುದೇ ಹುಳಿ ಹಣ್ಣುಗಳನ್ನು ಸೇವಿಸಿದ್ದರೆ, ಹಾಲು ಕುಡಿಯುವ ಮೊದಲು  ಕನಿಷ್ಟ ಒಂದು ಗಂಟೆ ಕಾಯಬೇಕು. ಏಕೆಂದರೆ ಸಿಟ್ರಸ್ ಹಣ್ಣುಗಳನ್ನು ತಿಂದ ತಕ್ಷಣ ಹಾಲು ಕುಡಿಯುವುದರಿಂದ ದೇಹದ ಮೇಲೆ ವಿಷಕಾರಿ ಪರಿಣಾಮ ಬೀರುತ್ತದೆ. 

4 /5

ಮೀನುಗಳನ್ನು  ತಿಂದ  ಕನಿಷ್ಠ ಎರಡು ಗಂಟೆಗಳ ಕಾಲ ಹಾಲು ಕುಡಿಯಬಾರದು. ಮೀನು ತಿಂದ ತಕ್ಷಣ ಹಾಲು ಕುಡಿಯುವವರಿಗೆ ಹೊಟ್ಟೆನೋವು, ಎದೆಯುರಿ, ಹುಳಿ ತೇಗು, ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

5 /5

ಮೂಲಂಗಿಯೊಂದಿಗೆ ಹಾಲನ್ನು ಸೇವಿಸಿದರೆ, ಹೊಟ್ಟೆಯಲ್ಲಿ ವಿಷವು ರೂಪುಗೊಳ್ಳಲು ಪ್ರಾರಂಭಿಸುತ್ತದೆ, ಅದು ಗಂಭೀರವಾದ  ಅನಾರೋಗ್ಯಕ್ಕೆ ಕಾರಣವಾಗಬಹುದು.