ಬೆಂಗಳೂರು: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲವೆಂದು ಕರ್ನಾಟಕ ಹೈಕೋರ್ಟ್(Karnataka Hijab Judgement) ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಶಾಲಾ-ಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ಹಿಜಾಬ್ ವಿವಾದ(Hijab Row)ಕ್ಕೆ ಸಂಬಂಧಿಸಿದಂತೆ ನನ್ನ ಕಾಳಜಿಯು ಶಿಕ್ಷಣ ಹಾಗೂ ಕಾನೂನು ಸುವ್ಯವಸ್ಥೆಯ ಕುರಿತದ್ದಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ; ಆದರೆ ಶಿಕ್ಷಣ, ಕಾನೂನು ಸುವ್ಯವಸ್ಥೆ ಹಾಗೂ ಕೋಮುಸೌಹಾರ್ದತೆಯ ಜವಾಬ್ದಾರಿ ಕರ್ನಾಟಕ ಸರ್ಕಾರದ ಮೇಲಿದೆ’ ಅಂತಾ ಡಿಕೆಶಿ ಹೇಳಿದ್ದಾರೆ.
ನಾಯಕತ್ವದಲ್ಲಿ ಪ್ರಬುದ್ಧತೆಯನ್ನು ತೋರುವಂತೆ ನಾನು ಕರ್ನಾಟಕ ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಜೊತೆಗೆ,
1. ಶಾಲಾಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ,
2. ಶಿಕ್ಷಣದಲ್ಲಿ ಧರ್ಮ ಹಾಗೂ ಲಿಂಗ ತಾರತಮ್ಯವಾಗದಂತೆ
3. ಕೋಮುಸೌಹಾರ್ದತೆಯನ್ನು ಕಾಪಾಡುವಂತೆ ವಿನಂತಿಸಿಕೊಳ್ಳುತ್ತೇನೆ.2/2
— DK Shivakumar (@DKShivakumar) March 15, 2022
ಇದನ್ನೂ ಓದಿ: ಹಿಜಾಬ್ ತೀರ್ಪು : ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು, ವಿದ್ಯೆಗಿಂತ ಯಾವುದು ಹೆಚ್ಚಲ್ಲ : ಸಿಎಂ
‘ನಾಯಕತ್ವದಲ್ಲಿ ಪ್ರಬುದ್ಧತೆಯನ್ನು ತೋರುವಂತೆ ನಾನು ಕರ್ನಾಟಕ ಸರ್ಕಾರ(BJP Karnataka)ವನ್ನು ಕೇಳಿಕೊಳ್ಳುತ್ತೇನೆ. ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ, ಶಿಕ್ಷಣದಲ್ಲಿ ಧರ್ಮ ಹಾಗೂ ಲಿಂಗ ತಾರತಮ್ಯವಾಗದಂತೆ ಮತ್ತು ಕೋಮುಸೌಹಾರ್ದತೆಯನ್ನು ಕಾಪಾಡುವಂತೆ ವಿನಂತಿಸಿಕೊಳ್ಳುತ್ತೇನೆ’ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.
ತುಷ್ಟೀಕರಣ ರಾಜಕೀಯ ಮಾಡದಂತೆ ಡಿಕೆಶಿಗೆ ತಿರುಗೇಟು
ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ-ಕಾಲೇಜುಗಳಲ್ಲಿ ಕಾನೂನು ಸುವವ್ಯಸ್ಥೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿರುವ ಡಿಕೆಶಿಗೆ ಬಿಜೆಪಿ ತಿರುಗೇಟು ನೀಡಿದೆ.
Dear @DKShivakumar Avare,
The Government of Karnataka under CM Shri @BSBommai has proved to be mature in every way by maintaining law & order in the State.
Will you please ensure that you and your party will not destroy peace in the State as part of your appeasement politics? https://t.co/mOkQLpVUTD
— BJP Karnataka (@BJP4Karnataka) March 15, 2022
ಇದನ್ನೂ ಓದಿ: Hijab Verdict:ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಚರ್ಚೆ ಮಾಡುತ್ತೇವೆ- ಎಂಎಲ್ ಸಿ ಸಿ.ಎಂ.ಇಬ್ರಾಹಿಂ
‘ಡಿಕೆಶಿಯವರೇ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಎಲ್ಲ ರೀತಿಯಲ್ಲೂ ಪ್ರಬುದ್ಧತೆಯನ್ನು ಮೆರೆದಿದೆ. ತುಷ್ಟೀಕರಣ ರಾಜಕೀಯ ಮಾಡದೆ ನೀವು ಮತ್ತು ನಿಮ್ಮ ಪಕ್ಷವು ರಾಜ್ಯದಲ್ಲಿ ಶಾಂತಿಯನ್ನು ಹಾಳು ಮಾಡದಂತೆ ದಯವಿಟ್ಟು ನೋಡಿಕೊಳ್ಳಿ’ ಅಂತಾ ಬಿಜೆಪಿ ಸಲಹೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.