Coronavirus: ಚೀನಾದಲ್ಲಿ ಮತ್ತೆ ಕರೋನಾ ಸ್ಫೋಟ!

Coronavirus Cases Rapidly Increased In China: ಚೀನಾದಲ್ಲಿ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ, ಕನಿಷ್ಠ 10 ನಗರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಕೊರೊನಾ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಮನವಿ ಮಾಡಲಾಗುತ್ತಿದೆ.

Written by - Yashaswini V | Last Updated : Mar 15, 2022, 02:42 PM IST
  • ಚೀನಾದಲ್ಲಿ ಒಂದು ದಿನದಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ
  • ಲಾಕ್‌ಡೌನ್‌ನಿಂದ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ
  • ಕೊರೊನಾ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಮನವಿ ಮಾಡಲಾಗುತ್ತಿದೆ.
Coronavirus: ಚೀನಾದಲ್ಲಿ ಮತ್ತೆ ಕರೋನಾ ಸ್ಫೋಟ! title=
Corona In China

Coronavirus Cases Rapidly Increased In China: ಬೀಜಿಂಗ್: ಚೀನಾದಲ್ಲಿ ಕೊರೊನಾವೈರಸ್‌ನ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚುತ್ತಿದೆ. ಚೀನಾದಲ್ಲಿ, ಹಿಂದಿನ ದಿನಕ್ಕೆ ಹೋಲಿಸಿದರೆ ಇಂದು (ಮಂಗಳವಾರ) ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವರದಿಯಾಗಿವೆ. 

ಚೀನಾದಲ್ಲಿ ಮತ್ತೆ ಕರೋನಾ ಸ್ಫೋಟ!
ಕಳೆದ 24 ಗಂಟೆಗಳಲ್ಲಿ 5,280 ಹೊಸ ಕರೋನಾವೈರಸ್‌ (Coronavirus) ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಮತ್ತೊಂದೆಡೆ, ಭಾನುವಾರ 3,507 ಹೊಸ ಕರೋನಾ ಪ್ರಕರಣಗಳು ದಾಖಲಾಗಿದ್ದು, ಅದಕ್ಕೂ ಮುನ್ನ ಒಂದು ದಿನದಲ್ಲಿ 1,337 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಕರೋನಾದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶವೆಂದರೆ ಜಿಲಿನ್ ಪ್ರಾಂತ್ಯ. ಕರೋನಾ ಪ್ರಕರಣಗಳ ಹೆಚ್ಚಳದಿಂದಾಗಿ ಶೆನ್‌ಜೆನ್ ಸೇರಿದಂತೆ ಕನಿಷ್ಠ 10 ನಗರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಅಲ್ಲಿ 1.7 ಕೋಟಿಗೂ ಹೆಚ್ಚು ಜನರು ವಾಸಿಸುತ್ತಿದ್ದಾರೆ.

ಇದನ್ನೂ ಓದಿ- ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳಿಂದ ಯುಎಸ್ ಪತ್ರಕರ್ತ ಬ್ರೆಂಟ್ ರೆನಾಡ್ ಹತ್ಯೆ

ಸ್ಟೆಲ್ತ್ ಓಮಿಕ್ರಾನ್ ರೂಪಾಂತರ:
ಸ್ಟೆಲ್ತ್ ಓಮಿಕ್ರಾನ್ ರೂಪಾಂತರದಿಂದಾಗಿ ಚೀನಾದಲ್ಲಿ (China) ಕರೋನವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಅತಿ ಹೆಚ್ಚು 2,601 ಹೊಸ ಕರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ- ಇನ್ಶೂರೆನ್ಸ್ ಇಲ್ಲದೇ ಕೋಟ್ಯಂತರ ರೂ. ಮೌಲ್ಯದ ಕಾರ್ ಡ್ರೈವ್: ಟ್ರಾಫಿಕ್ ಪೊಲೀಸರು ತಡೆದಾಗ ಏನಾಯ್ತು..?

ಚೀನಾದ ಹಲವು ಪ್ರಾಂತ್ಯಗಳಲ್ಲಿ ಲಾಕ್‌ಡೌನ್ :
ಗಮನಾರ್ಹವಾಗಿ, ಕೋವಿಡ್ -19 ಪ್ರಕರಣಗಳಲ್ಲಿ ತ್ವರಿತ ಹೆಚ್ಚಳದ ದೃಷ್ಟಿಯಿಂದ, ಚೀನಾದ ಹಲವು ಪ್ರಾಂತ್ಯಗಳಲ್ಲಿ ಲಾಕ್‌ಡೌನ್ ಅನ್ನು ಜಾರಿಗೊಳಿಸಲಾಗಿದೆ. ಚೀನಾದ ಜಿಲಿನ್, ಶೆನ್‌ಜೆನ್ ಮತ್ತು ಡೊಂಗ್‌ಗುವಾನ್‌ನಲ್ಲಿ ಲಾಕ್‌ಡೌನ್ ಹೇರಲಾಗಿದೆ. ಚೀನಾದ ಸುಮಾರು 50 ಮಿಲಿಯನ್ ಜನರು ಈ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News