Chikkamagaluru: Struggle For Water - ನೀರಿಗಾಗಿ ಪರದಾಡುತ್ತಿರುವ ದಂಪತಿ ಜೋಡಿಯೊಂದು ಮಾಡಿದ ಕೆಲಸವನ್ನು ಕೇಳಿದರೆ, ನೀವೂ ಕೂಡ ಒಂದು ಕ್ಷಣ ತಬ್ಬಿಬ್ಬಾಗುವಿರಿ. ಕಾಫಿ ನಾಡು ಮೂಡಿಗೆರೆಯ (Moodigere) ಅಣಜೂರಿನ (Anajooru) ದಂಪತಿ ರಾಜು ಹಾಗೂ ಶಾರದಾ ಬಡತನದಿಂದಲೇ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಇರಲು ಸರಿಯಾದ ಜಾಗ ಇಲ್ಲದ ಕಾರಣ ಪ್ಲಾಸ್ಟಿಕ್ ಶೀಟ್ ನಲ್ಲಿಯೇ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದಾರೆ. ಇದಕ್ಕೂ ಮೊದಲು 20 ವರ್ಷಗಳ ಹಿಂದೆ ಮಂಗಳೂರಿಗೆ ಬಂದ ರಾಜು ಅಣಜೂರಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯವರಿಂದ ಇವರಿಗೆ ನಿವೇಶನ ಮಂಜೂರಾಗಿದ್ದು, ಪಂಚಾಯಿತಿಯವರು ಜಾಗ ನೀಡಿ ಕೈತೊಳೆದುಕೊಂಡಿದ್ದಾರೆ.
ದಿನಗೂಲಿಯೇ ಈ ದಂಪತಿಗಳ ಕಾಯಕ. ಗ್ರಾಮ ಪಂಚಾಯಿತಿಯ ನೀರು ಸಂಪರ್ಕ ಇವರಿಗೆ ಸಿಗುತ್ತಿಲ್ಲವಾದ್ದರಿಂದ ದಿನನಿತ್ಯ ನೀರಿಗಾಗಿ ಪರದಾಟ. ನೀರು ಬಂದರೂ ಕೂಡ ಎರಡು ದಿನಗಳಿಗೊಮ್ಮೆ ಬರುತ್ತದೆ ಮತ್ತು ನೆರೆಹೊರೆಯವರಿಂದಲೂ ನೀರು ಸಿಗುವುದಿಲ್ಲ. ನೀರಿಗಾಗಿ ಬೀದಿಗೆ ಇಳಿದರೆ, ಸಣ್ಣ ಪುಟ್ಟ ಗಲಾಟೆ. ಈ ಗಲಾಟೆಯೇ ಈ ದಂಪತಿಗಳಲ್ಲಿ ಸ್ವಾಭಿಮಾನದ ಕಿಚ್ಚು ಹುಟ್ಟಿಸಿದೆ.
ಹೀಗಾಗಿ ದಿನನಿತ್ಯ ನೀರಿಗಾಗಿ ಪರದಾಡುತ್ತಿದ್ದ ಈ ದಂಪತಿ ಜೋಡಿ, ತಮಗಾಗಿಯೇ ಇರುವ ಜಾಗದಲ್ಲಿಯೇ ಬಾವಿಯನ್ನು ತೊಡಲು ಶುರುಮಾಡಿದ್ದಾರೆ. ಜನವರಿ 14 ರಿಂದ ಈ ದಂಪತಿ ಜೋಡಿ ತಮ್ಮ ಜಾಗದಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಮತ್ತು ಸಂಜೆ ಸ್ವಲ್ಪ ಹೊತ್ತು ಬಾವಿಯನ್ನು ತೋಡುತ್ತಿದ್ದಾರೆ. ಇದರ ನಡುವೆಯೇ ಉದರ ನಿರ್ವಹಣೆಗಾಗಿ ಕೂಲಿ ಕೆಲಸ. ಕಳೆದ ಎರಡು ತಿಂಗಳಿಂದ ಬಾವಿ ತೋಡುತ್ತಿರುವ ಈ ದಂಪತಿ ಜೋಡಿ ಇದುವರೆಗೆ 60 ಅಡಿ ಬಾವಿಯನ್ನು ಅಗೆದಿದ್ದು, ಇವರಿಗೆ ನೀರಿನ ಸೆಲೆಯೂ ಕೂಡ ಸಿಕ್ಕಿದೆ. ಇನ್ನೂ ನಾಲ್ಕೈದು ಅಡಿ ಅಗೆದರೆ ನೀರು ಬರೋ ಭರವಸೆ ತಮಗಿದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ-ಎಚ್.ಡಿ ದೇವೇಗೌಡ-ಕುಮಾರಸ್ವಾಮಿ ಅವರ ಜೊತೆಗಿನ ಚರ್ಚೆ ಫಲಪ್ರದ ಎಂದ ಸಿ ಎಂ ಇಬ್ರಾಹಿಂ
ಈ ಕಾಯಕದಲ್ಲಿ ರಾಜು ಗುಂಡಿಯನ್ನು ಅಗೆಯುವ ಕೆಲಸ ಮಾಡಿದರೆ, ಮಣ್ಣನ್ನು ಗುಂಡಿಯಿಂದ ಹೊರಹಾಕುವ ಕೆಲಸ ಶಾರದಾ ಮಾಡುತ್ತಾರೆ. ಕರೆಂಟ್ ಇಲ್ಲದಿರೋ ಗುಡಿಸಲಿನಲ್ಲಿ ಇರೋದು ಕೂಡ ಕಷ್ಟ ಎಂದು ಭಾವಿಸಿರುವ ಈ ದಂಪತಿ, ತಮಗಿರೋ ಇಬ್ಬರು ಮಕ್ಕಳನ್ನು ಬೇರೆಡೆ ಕಳುಹಿಸಿ ಓದಿಸುತ್ತಿದ್ದಾರೆ.
ಇದನ್ನೂ ಓದಿ-'ಆತ್ಮಾರಾಧನೆ ಮಾಡಿಕೊಳ್ಳುವ ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರವಾಗಿರಲಿದೆ'
ಒಟ್ಟಾರೆ ಮಲೆನಾಡಿನಲ್ಲಿಯೇ ನೀರಿಗಾಗಿ ಪರದಾಡುತ್ತಿರುವ ಈ ದಂಪತಿಗಳು, ತಾವೇ ಜಲಕ್ಕಾಗಿ ಭೂತಾಯಿಯ ಮೊರೆ ಹೋಗಿದ್ದಾರೆ. ಬೇವರು ಸುರಿಸಿ ಕಳೆದೆರಡು ತಿಂಗಳನಿಂದ ಬಾವಿ ತೆಗೆಯೋ ಕೆಲಸದಲ್ಲಿ ನಿರತರಾಗಿದ್ದಾರೆ.ಇನ್ನೇನೂ ದಿನಗಳಲ್ಲಿ ಜಲಧಾರೆ ಕಾಣಿಸಿಕೊಳ್ತಾಳೇ ಅನ್ನೋ ಸಂತಸ ಇವರಲ್ಲಿರುವುದು ಮಾತ್ರ ನಿಜ.
ಇದನ್ನೂ ಓದಿ-ಜೆಡಿಎಸ್ ಬಿಜೆಪಿ ಮಧ್ಯೆ ಮ್ಯಾಚ್ ಪಿಕ್ಸಿಂಗ್ ಆಗಿದೆ : ಸಲೀಂ ಅಹ್ಮದ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.