ಪೋಲೆಂಡಿನ ನಿರಾಶ್ರಿತರ ಶಿಬಿರದಲ್ಲಿರುವ ಮಹಿಳೆಯೊಬ್ಬರು ತನ್ನನ್ನು ಪತಿಯ ಬಳಿ ತಲುಪಿಸುವಂತೆ ಮನವಿ ಮಾಡಿದ್ದಾರೆ.
ನವದೆಹಲಿ : Russia-Ukraine War Update: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಉಕ್ರೇನ್ ತೊರೆದು ಬೇರೆಡೆ ಆಶ್ರಯ ಪಡೆಯುತ್ತಿದ್ದಾರೆ. ಉಕ್ರೇನ್‌ನ ಪಕ್ಕದ ದೇಶಗಳಲ್ಲಿನ ನಿರಾಶ್ರಿತರ ಶಿಬಿರಗಳಿಗೆ ಉಕ್ರೇನಿಯನ್ ನಾಗರಿಕರು ನಿರಂತರವಾಗಿ ಬರುತ್ತಿದ್ದಾರೆ. ಪೋಲೆಂಡಿನ ನಿರಾಶ್ರಿತರ ಶಿಬಿರದಲ್ಲಿರುವ ಮಹಿಳೆಯೊಬ್ಬರು ತನ್ನನ್ನು ಪತಿಯ ಬಳಿ ತಲುಪಿಸುವಂತೆ ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಪೋಲೆಂಡ್‌ನ ವಾರ್ಸಾದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಅನೇಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಇಲ್ಲಿರುವ ನಿರಾಶ್ರಿತ್ಯರಿಗೆ ಅನೇಕ ಮಂದಿ ಸಹಾಯ್ ಹಸ್ತ ಚಾಚುತ್ತಿದ್ದಾರೆ. ಆಹಾರ, ಔಷಧ ಪೂರೈಕೆ ಹೀಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ನಿರಾಶ್ರಿತರ ಶಿಬಿರದಲ್ಲಿ, ಉಕ್ರೇನಿಯನ್ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ. ಅವರ ಪತಿ ಭಾರತೀಯ ಮತ್ತು ದೆಹಲಿ ಮೂಲದವರು. ಈ ಮಹಿಳೆ ಗರ್ಭಿಣಿಯಾಗಿದ್ದು, ಜೀ ಮಾಧ್ಯಮದ ಮೂಲಕ, ದೆಹಲಿಯಲ್ಲಿರುವ ತನ್ನ ಪತಿಯ ಬಳಿ ತನ್ನನ್ನು ಸೇರಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತೀಯ ಪ್ರಜೆಯೊಂದಿಗೆ ಉಕ್ರೇನಿಯನ್ ಮಹಿಳೆಯ ವಿವಾಹದ ಫೋಟೋಗಳು ಕೂಡ ಮುನ್ನೆಲೆಗೆ ಬಂದಿವೆ. ಇದರಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮಹಿಳೆಗೆ ಮಾಂಗಲ್ಯ ಧಾರಣೆ ಮಾಡಿಸುತ್ತಿರುವುದನ್ನು ಕಾಣಬಹುದು.
ಉಕ್ರೇನಿಯನ್ ಮಹಿಳೆ ಹಿಂದೂ ಸಂಪ್ರದಾಯದ ಪ್ರಕಾರ ಭಾರತೀಯ ಪ್ರಜೆಯನ್ನು ವಿವಾಹವಾಗಿದ್ದಾರೆ.
ಮತ್ತೊಂದು ಫೋಟೋದಲ್ಲಿ, ಭಾರತೀಯ ಮೂಲದ ವ್ಯಕ್ತಿಯು ಈ ಮಹಿಲೆಯೊಂದಿಗೆ ಹಾರ ಬದಲಾಯಿಸಿಕೊಂದಿರುವುದನ್ನು ಕಾಣಬಹುದು.
ಉಕ್ರೇನಿಯನ್ ಮಹಿಳೆ ಮತ್ತು ಭಾರತೀಯ ಪ್ರಜೆಯೊಂದಿಗೆ ಅಗ್ನಿ ಸಾಕ್ಷಿಯಾಗಿ ಸಪ್ತ ಪದಿ ತುಳಿದಿದ್ದಾರೆ.