ಬೆಂಗಳೂರು : ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನಂತರ ರಾಜ್ಯ ಬಿಜೆಪಿಯಲ್ಲಿ ಉನ್ನತ ಮಟ್ಟದ ನಾಯಕರ ಬದಲಾವಣೆ ಆಗುವ ನಿರೀಕ್ಷೆಯಲ್ಲಿ ರಾಜ್ಯ ಬಿಜೆಪಿ ಎದುರಸಿಲಿದೆ ಎಂದು ಮಾತುಗಳು ಕೇಳಿಬಂದಿವೆ.
ರಾಜ್ಯ ವಿಧಾನಸಭಾ ಚುನಾವಣೆ 2023(Karnataka Assembly Election 2023)ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಹೊಸಬರಿಗೆ ಮಣೆ ಹಾಕುವ ಮೂಲಕ ಮುಂಬರುವ ಚುನಾವಣೆಯನ್ನ ಎದುರಿಸಲು ಸಿದ್ಧವಾಗಬೇಕು ಎಂದು ಹೈ ಕಮಾಂಡ್ ಖಡಕ್ ಸೂಚನೆಯನ್ನ ರಾಜ್ಯ ಬಿಜೆಪಿ ವರಿಷ್ಠರಿಗೆ ನೀಡಿದೆ.
ಇದನ್ನೂ ಓದಿ : ಮಾದಕ ವ್ಯಸನಿಗಳೇ ಎಚ್ಚರ! ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ನಿಗ್ರಹಕ್ಕೆ ರೆಡಿಯಾಗಿದೆ ವಿನೂತನ ಪ್ಲಾನ್
ಅಗ್ರೆಸಿವ್ ನಾಯಕನಿಗೆ ಅವಕಾಶ ನೀಡುವ ಮೂಲಕ, ಅಧಿಕಾರ ವಿರೋಧಿ ಅಲೆಯ ವಿರುದ್ಧ ಹೋರಾಡವ ಮೂಲಕ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಓಡಾಡುವ "ಯಂಗ್" ಲೀಡರ್ ಗೆ ಅವಕಾಶ ನೀಡುವುದಕ್ಕೆ ಬಿಜೆಪಿ ಲೆಕ್ಕಾಚಾರವನ್ನ ಹಾಕಿದೆ.
ರಾಜ್ಯಾಧ್ಯಕ್ಷ ಸ್ಥಾನ ಬದಲು ; ಸಿಟಿ ರವಿಗೆ ಸಿಗಲಿದ್ಯ ರಾಜ್ಯ ಜವಾಬ್ದಾರಿ?
ಸದ್ಯ ನಳಿನ್ ಕುಮಾರ್ ಕಟೀಲ್(Nalin Kumar Kateel) ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನ ಮುನ್ನಡೆಸುತ್ತಿದ್ದಾರೆ, ಸಂಘಟನೆ ಮಾಡುವುದರಲ್ಲಿ ಹಿಂದುಳಿದಿದ್ದಾರೆ ಎಂದು ಪಕ್ಷದವರು ಮಾತನ್ನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ ಸೇರಿದಂತೆ ಅನೇಕರು ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi), ಸದ್ಯ ರಾಜ್ಯ ರಾಜಕಾರಣ ಜೊತೆಗೆ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪ್ರತಿ ಹೇಳಿಕೆಯಲ್ಲೂ ತನ್ನದೇ ವೈಕರಿಯಲ್ಲಿ ಕಾಂಗ್ರೆಸ್ ಗೆ ತರಾಟೆಗೆ ತೆಗೆಡಿಕೊಳ್ಳುವ ಇವರ ಶೈಲಿ ಬಿಜೆಪಿ ಹೈಕಮಾಂಡ್ ನ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಸಿಟಿ ರವಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಮುಂಬರುವ ಚುನಾವಣೆಗೆ ಉತ್ತಮ ಕೆಲಸ ಮಾಡಲಿದ್ದಾರೆ ಎಂದು ಆರ್ ಎಸ್ ಎಸ್ ವರಿಷ್ಠರು ಹೈ ಕಮಾಂಡ್ ಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : Career:ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗಾಗಿ ಅರ್ಜಿ ಆಹ್ವಾನ
ಇನ್ನು ಉಳಿದಂತೆ, ಬಿವೈ ವಿಜೇಂದ್ರ ಕೂಡ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದು, ಐದು ದಶಕಗಳಿಗೂ ಹೆಚ್ವಿನ ವರ್ಷ ಯಡಿಯೂರಪ್ಪ(BS Yediyurappa) ಪಕ್ಷಕ್ಕೆ ದುಡಿದ್ದಾರೆ, ವಯೋಮಿತಿ ಆಧಾರದ ಮೇಲೆ ಮುಖ್ಯಮಂತ್ರಿ ಹುದ್ದೆಯಿಂದ ಕೆಲಗಿಳಿಸಿದ್ದೀರಿ, ಹೀಗಾಗಿ ಪರಿಹಾರವಾಗಿ ಸ್ಥಾನ ನೀಡಿ ಎಂದು ಲಾಭಿ ನಡೆಸುತ್ತಿದ್ದಾರೆ.ಇನ್ನು ಉಳಿದಂತೆ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಕೂಡ ನಿರಂತರ ಸೇವೆಯನ್ನ ಪಕ್ಷಕ್ಕೆ ನೀಡಿದ್ದೇವೆ ಎಂದು ಅವರೂ ಲಾಭಿಯನ್ನ ನಡೆಸುತ್ತಿದ್ದಾರೆ.
ಇದಲ್ಲದೆ, ಮಹಿಳಾ ಘಟಕ, ಕಾನೂನು ಪ್ರಕೋಷ್ಠ, ರಾಜ್ಯ ಯುವ ಮೋರ್ಚಾ ಸೇರಿದಂತೆ ಅನೇಕ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನ ಬದಲಾವಣೆ ಮಾಡುವ ಲೆಕ್ಕಾಚಾರವನ್ನ ಕಮಲ ವರಿಷ್ಠರು ಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.