ರಾತ್ರೋರಾತ್ರಿ ಬದಲಾಯಿತು ಬಲೂನ್ ಮಾರುವ ಹುಡುಗಿಯ ಭವಿಷ್ಯ, ಮಾಮೂಲಿ ಹುಡುಗಿ ಸೆಲೆಬ್ರಿಟಿಯಾದ ಕಥೆ

ಈ ಕತೆ ಶುರುವಾದದ್ದು ಒಂದು ಜಾತ್ರೆಯಿಂದ. ಕಣ್ಣೂರು ಅಂದಲ್ಲೂರ್ಕಾವು ಉತ್ಸವದಲ್ಲಿ ಈ ಹುಡಿಗಿ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ, ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್,  ಕಣ್ಣಿಗೆ ಬಿದ್ದಿದ್ದಾಳೆ.

Written by - Ranjitha R K | Last Updated : Mar 8, 2022, 10:10 AM IST
  • ಸೆಲೆಬ್ರಿಟಿಯಾದ ಬಲೂನ್ ಮಾರುವ ಹುಡುಗಿ
  • ಫೋಟೋ ವೈರಲ್ ಆದಾಗ ಬಂತು ಭಾರೀ ಪ್ರತಿಕ್ರಿಯೆ
  • ಹುಡುಗಿಯ ಜೀವನವನ್ನೇ ಬದಲಾಯಿಸಿದ ಛಾಯಾಗ್ರಾಹಕ
ರಾತ್ರೋರಾತ್ರಿ ಬದಲಾಯಿತು ಬಲೂನ್ ಮಾರುವ ಹುಡುಗಿಯ ಭವಿಷ್ಯ,   ಮಾಮೂಲಿ  ಹುಡುಗಿ ಸೆಲೆಬ್ರಿಟಿಯಾದ ಕಥೆ  title=
ಸೆಲೆಬ್ರಿಟಿಯಾದ ಬಲೂನ್ ಮಾರುವ ಹುಡುಗಿ (photo instagram)

ನವದೆಹಲಿ : ಸಾಮಾಜಿಕ ಮಾಧ್ಯಮಗಳ (Social media)ಈ ಯುಗದಲ್ಲಿ ಒಂದು ಫೋಟೋ ನಿಮ್ಮ ಜೀವನವನ್ನೇ ಬದಲಾಯಿಸಿಬಿದಬಹುದು. ಪ್ರಪಂಚದಾದ್ಯಂತ ಇಂತಹ ಅದೆಷ್ಟೋ ಕತೆಯನ್ನು ನಾವು ಕೇಳಿರುತ್ತೇವೆ. ಉದಾಹರಣೆಗೆ ಪಾಕಿಸ್ತಾನದ ಟೀ ಮಾರುವ ಅರ್ಷದ್ ಖಾನ್ ಜೀವನವನ್ನೇ ತೆಗೆದುಕೊಳ್ಳಿ. ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರು ರಾತ್ರೋರಾತ್ರಿ ಸುದ್ದಿಯಾಗಿ ಬಿಟ್ಟರು (Viral Photo). ಇದೀಗ ಜಾತ್ರೆಯಲ್ಲಿ ಬಾಲಕಿಯೊಬ್ಬಳು ಬಲೂನ್ ಮಾರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಮೂಡಿಸಿದೆ. ಹುಡುಗಿಯ ಮೇಕ್ ಓವರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಫೋಟೋಶೂಟ್ ಮಾಡಿಸಿಕೊಂಡ ಬಲೂನ್ ಮಾರುವ ಹುಡುಗಿ  : 
ಈ ಕತೆ ಶುರುವಾದದ್ದು ಒಂದು ಜಾತ್ರೆಯಿಂದ. ಕಣ್ಣೂರು ಅಂದಲ್ಲೂರ್ಕಾವು ಉತ್ಸವದಲ್ಲಿ ಈ ಹುಡುಗಿ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ, ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್,  ಕಣ್ಣಿಗೆ ಬಿದ್ದಿದ್ದಾಳೆ (Baloon selling girl).  ಆಕೆ  ಆಕಾಶಬುಟ್ಟಿಗಳು ಮತ್ತು ದೀಪಗಳ ನಡುವೆ ನಿಂತಿದ್ದಳು. ಇದನ್ನೇ ಗಮನಿಸಿದ ಛಾಯಾಗ್ರಾಹಕ ಹುಡುಗಿಯ ಫೋಟೋ ಕ್ಲಿಕ್ಕಿಸಿದ್ದಾರೆ.  ನಂತರ ಈ ಫೋಟೋವನ್ನು ಹುಡುಗಿಯಾ ತಾಯಿಗೂ ತೋರಿಸಲಾಗಿದೆ (Viral photo). ಅವರು ಕೂಡಾ ತಸ್ಮ್ಮ್ ಮಗಳ ಫೋಟೋ ನೋಡಿ ಸಂತೋಷ ಪಟ್ಟಿದ್ದಾರೆ.  ಅಂದ ಹಾಗೆ ಈ ಬಲೂನ್ ಮಾರುವ ಹುಡುಗಿಯ ಹೆಸರು ಕಿಸ್ಬು..

 
 
 
 

 
 
 
 
 
 
 
 
 
 
 

A post shared by PHOTO MAN (@photoman_official)

 

ಇದನ್ನೂ ಓದಿ : Interesting Fact:ಫ್ಲೈಟ್ ನ ಪೈಲೆಟ್ ಹಾಗೂ ಕೋ-ಪೈಲೆಟ್ ಬೇರೆ ಬೇರೆ ಊಟ ಏಕೆ ಕೊಡಲಾಗುತ್ತದೆ?

ಫೋಟೋ ಗೆ ಸಿಕ್ಕಿತು ಭಾರೀ ಪ್ರತಿಕ್ರಿಯೆ :
ಎರಡು ದಿನಗಳ ನಂತರ ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ (Social Media)  ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಆದ ತಕ್ಷಣವೇ ಫೋಟೋಗೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ.  ಇಷ್ಟಾದ ಮೇಲೆ ಅರ್ಜುನ್ ಸ್ನೇಹಿತ  ಶ್ರೇಯಸ್ ಕೂಡ ಕಿಸ್ಬು ಫೋಟೋ ತೆಗೆದಿದ್ದಾರೆ. ಈ ಫೋಟೋ ಕೂಡಾ ಭಾರೀ ವೈರಲ್ ಆಗಿದೆ. ನಂತರ ಅರ್ಜುನ್ ಕಿಸ್ಬು ಜೊತೆ ಮೇಕ್ ಓವರ್ ಫೋಟೋ ಶೂಟ್ ಮಾಡಿಸಿದ್ದಾರೆ (Kisbu Makeover photo). ಸ್ಟೈಲಿಸ್ಟ್ ರಮ್ಯಾ ಅವರ ಸಹಾಯದಿಂದ ಅರ್ಜುನ್ ಕಿಸ್ಬು ಅವರ ಕೆಲವು ಸುಂದರವಾದ ಚಿತ್ರಗಳನ್ನು ಚಿತ್ರೀಕರಿಸಿದ್ದಾರೆ.

 

 ಹುಡುಗಿಯ ಜೀವನವನ್ನೇ ಬದಲಾಯಿಸಿದ ಛಾಯಾಗ್ರಾಹಕ : 
ಕೇರಳದ ಸೆಟ್ ಮುಂಡು ಮತ್ತು ಸಾಂಪ್ರದಾಯಿಕ ಆಭರಣಗಳೊಂದಿಗೆ ಕಿಸ್ಬುಗೆ ಅದ್ಭುತವಾದ ಮಲಯಾಳಿ ಮೇಕ್ ಓವರ್ ಅನ್ನು ರಮ್ಯಾ ನೀಡಿದ್ದಾರೆ. ಈ ಮೇಕ್ ಓವರ್ ಹೆಚ್ಚು ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೆ ಕಿಸ್ಬುಗೆ ಸಾಕಷ್ಟು ಆಫರ್ ಕೂಡ ಸಿಕ್ಕಿದೆ. ಅರ್ಜುನ್ ಫ್ರೀಲಾನ್ಸ್ ವೆಡ್ಡಿಂಗ್ ಫೋಟೋಗ್ರಾಫರ್ ಆಗಿದ್ದು, 15 ವರ್ಷಗಳಿಂದ ಈ ಫೀಲ್ಡ್ ನಲ್ಲಿದ್ದಾರೆ. ತನ್ನ ಕೆಲಸದಿಂದ ಒಬ್ಬರ ಜೀವನದಲ್ಲಿ ಸಣ್ಣ ಬದಲಾವಣೆಗೆ ಕಾರಣರಾಗಿರುವ ಸಮಾಧಾನ ಅರ್ಜುನ್ ಅವರದ್ದು. 

ಇದನ್ನೂ ಓದಿ : BrahMos missile: ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತೀಯ ನೌಕಾಪಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News