ನವದೆಹಲಿ: Shane Warne Post Mortem Report - ಆಸ್ಟ್ರೇಲಿಯಾದ ಶ್ರೇಷ್ಠ ಬೌಲರ್ ಶೇನ್ ವಾರ್ನ್ ಇತ್ತೀಚೆಗೆ ನಿಧನರಾಗಿದ್ದಾರೆ. ವಾರ್ನ್ಗೆ ಕೇವಲ 52 ವರ್ಷ ವಯಸ್ಸಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಇತ್ತೀಚಿನ ಥೈಲ್ಯಾಂಡ್ ಪೊಲೀಸ್ ವರದಿಯು ವಾರ್ನ್ ಅವರ ಕೋಣೆಯಲ್ಲಿ ಕೆಲವು ರಕ್ತದ ಕಲೆಗಳು ಕಂಡುಬಂದಿವೆ ಎಂದು ಹೇಳಿದ್ದರು. ನಂತರ ಅವರ ಸಾವಿಗೆ ಸಂಬಂಧಿಸಿದಂತೆ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಆದರೆ ಇದೀಗ ವಾರ್ನ್ ಅವರ ಮರಣೋತ್ತರ ಪರೀಕ್ಷೆಯ ವರದಿ (Post Mortem Report) ಪ್ರಕಟವಾಗಿದ್ದು, ಅದರಲ್ಲಿ ಮಹತ್ವದ ಸಂಗತಿ ಬಹಿರಂಗವಾಗಿದೆ.
ಭಾರಿ ಸಂಚಲನ ಮೂಡಿಸಿದ ಮರಣೋತ್ತರ ಪರೀಕ್ಷಾ ವರದಿ
ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ (Shane Warne Death) ಅವರ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಅವರು ಸ್ವಾಭಾವಿಕ ಕಾರಣಗಳಿಂದ (Natural Death) ಸಾವನ್ನಪ್ಪಿದ್ದಾರೆ ಎಂದು ಥಾಯ್ಲೆಂಡ್ ಪೊಲೀಸರು ಸೋಮವಾರ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವರದಿಯನ್ನು ವಾರ್ನ್ ಅವರ ಕುಟುಂಬ ಮತ್ತು ಆಸ್ಟ್ರೇಲಿಯಾದ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಪೊಲೀಸ್ ಉಪ ವಕ್ತಾರ ಕಿಸಾನಾ ಪಾಥನಾಚರೋನ್ ಹೇಳಿಕೆ ನೀಡಿದ್ದಾರೆ. ಅವರ ಸಾವು ಸ್ವಾಭಾವಿಕ ಕಾರಣಗಳಿಂದ ಸಂಭವಿಸಿದೆ ಎಂಬುದರಲ್ಲಿ ವಾರ್ನ್ ಅವರ ಕುಟುಂಬಕ್ಕೆ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತ (Heart Attack) ಕಾರಣ ಎನ್ನಲಾಗಿತ್ತು
ಆದರೆ ಹೇಳಿಕೆಯಲ್ಲಿ ಸಾವಿನ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಅವರಿಗೆ ಹೃದಯಾಘಾತವಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಥಾಯ್ಲೆಂಡ್ನ ಕೊಹ್ ಸಮುಯಿ ದ್ವೀಪದಲ್ಲಿರುವ ತನ್ನ ಹೋಟೆಲ್ ಕೋಣೆಯಲ್ಲಿ ವಾರ್ನ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ಕರೆದೊಯ್ದರೂ ಅವರ ಪ್ರಾಣ ಉಳಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯನ್ನು ಪ್ರಾಸಿಕ್ಯೂಟರ್ ಕಚೇರಿಗೆ ಕಳುಹಿಸಲಾಗುವುದು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಇದು ಅನಿರೀಕ್ಷಿತ ಸಾವಿನ ಸಂದರ್ಭದಲ್ಲಿ ಸಾಮಾನ್ಯ ಕಾರ್ಯವಿಧಾನವಾಗಿದೆ. ವಾರ್ನ್ ಅವರ ಸಾವು ಕುಟುಂಬಕ್ಕೆ ಎಂದಿಗೂ ಮುಗಿಯದ ದುಃಸ್ವಪ್ನಕ್ಕೆ ಆರಂಭ ಹೇಳಿದೆ ಎಂದು ವಾರ್ನ್ ಅವರ ಕುಟುಂಬ ಸೋಮವಾರ ಹೊರಡಿಸಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ-Team India : ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಈ ಸ್ಪೋಟಕ್ ಬ್ಯಾಟ್ಸಮನ್! ಶ್ರೀಲಂಕಾ ತಂಡದಲ್ಲಿ ಶುರುವಾಗಿದೆ ಭೀತಿ
ದುಃಖದಲ್ಲಿ ಕುಟುಂಬ
ವಾರ್ನ್ ಸಾವಿನ ಕುರಿತು ಬರೆದುಕೊಂಡಿರುವ ಅವರ ತಂದೆ ಕೀತ್ ಮತ್ತು ತಾಯಿ ಬ್ರಿಗಿಟ್ಟೆ, 'ಶೇನ್ ಇಲ್ಲದೆ ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ಅವರೊಂದಿಗಿನ ಅಸಂಖ್ಯಾತ ಸಂತೋಷದ ನೆನಪುಗಳು ಈ ದುಃಖವನ್ನು ಹೋಗಲಾಡಿಸಲು ನಮಗೆ ಸಹಾಯ ಮಾಡಲಿ. ಶೇನ್ ಅವರು ವಿಕ್ಟೋರಿಯನ್ ಮತ್ತು ಆಸ್ಟ್ರೇಲಿಯನ್ ಆಗಿದ್ದಕ್ಕೆ ಎಷ್ಟು ಹೆಮ್ಮೆಪಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಹೇಳಿದ್ದಾರೆ
ಇದನ್ನೂ ಓದಿ-IPL 2022: ಲುಕ್ ಬದಲಾಯಿಸಿದ ಕ್ಯಾಪ್ಟನ್ ಕೂಲ್, ಫೋಟೋ ನೋಡಿ ನಿಮಗೆ ಗೊತ್ತಾಗುತ್ತದೆ
ತಂದೆಯ ಸಾವಿನ ಕುರಿತು ಬರೆದುಕೊಂಡಿದ್ದ ಅವರ ಪುತ್ರ ಜಾಕ್ಸನ್, 'ನಿಮ್ಮ ನಿಧನದಿಂದ ನನ್ನ ಹೃದಯದಲ್ಲಿ ಉಳಿದಿರುವ ಶೂನ್ಯವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನೀವು ಉತ್ತಮ ತಂದೆ ಮತ್ತು ಸ್ನೇಹಿತರಾಗಿದ್ದಿರಿ' ಎಂದು ಹೇಳಿದ್ದರು. ವಾರ್ನ್ ಅವರ ದೇಹವನ್ನು ಆಸ್ಟ್ರೇಲಿಯಾಕ್ಕೆ ಯಾವಾಗ ಕಳುಹಿಸಲಾಗುತ್ತದೆ ಎಂಬುದು ಇನ್ನೂ ತಿಳಿದಿಲ್ಲ.
ಇದನ್ನೂ ಓದಿ-Team India: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ರೋಹಿತ್, 66 ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ನಾಯಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.