ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಬೆಂಗಳೂರು : ಹಿಂದೂ ಧರ್ಮದ 18 ಪುರಾಣಗಳಲ್ಲಿ ಒಂದಾದ ಗರುಡ ಪುರಾಣವು ವಿಶೇಷ ಮಹತ್ವವನ್ನು ಹೊಂದಿದೆ. ಗರುಡ ಪುರಾಣವು ಸಾವಿನ ನಂತರ ಮೋಕ್ಷವನ್ನು ಒದಗಿಸುವ ಪುಸ್ತಕ ಎಂದೇು ಹೇಳಲಾಗುತ್ತದೆ. ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಗುರುಪುರಾಣದ ಪ್ರಕಾರ, ಮಾಡಿದ ಅಡುಗೆಯನ್ನು ನಾವು ಸೇವಿಸುವ ಮುನ್ನಆರಾಧ್ಯ ದೇವತೆಗೆ ಅರ್ಪಿಸುವ ಮನೆಯಲ್ಲಿ, ದೇವರು ನೆಲೆಸುತ್ತಾನೆ. ಹಾಗೆಯೇ ಅನ್ನಪೂರ್ಣ ದೇವಿಯ ಕೃಪೆಯಿಂದ ಆ ಮನೆಯಲ್ಲಿ ಹಣ, ಅನ್ನದ ಕೊರತೆ ಎದುರಾಗುವುದಿಲ್ಲ.
ಗರುಡ ಪುರಾಣದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಧಾರ್ಮಿಕ ಗ್ರಂಥಗಳ ಜ್ಞಾನವನ್ನು ಹೊಂದಿರಬೇಕು. ಧಾರ್ಮಿಕ ಗ್ರಂಥಗಳ ಜ್ಞಾನವನ್ನು ಪಡೆಯಲು, ಅದನ್ನು ಪಠಿಸುವುದು ಅವಶ್ಯಕ.
ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಹಸಿದವರಿಗೆ ಅನ್ನದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಸಿದವನ ಪ್ರಾರ್ಥನೆಯು ಸಾರ್ವಕಾಲಿಕ ಉಪಯೋಗಕ್ಕೆ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ, ಆಹಾರವನ್ನು ದಾನ ಮಾಡಬೇಕು.
ಧಾರ್ಮಿಕ ನಂಬಿಕೆಯ ಪ್ರಕಾರ, ಪ್ರತಿಯೊಂದು ಕುಲಕ್ಕೂ ಆರಾಧ್ಯ ದೇವತೆ ಇರುತ್ತದೆ. ವಿಶೇಷ ದಿನಾಂಕಗಳಂದು ಯಾವರಿಗೆ ಪೂಜೆಯನ್ನು ನೆರವೇರಿಸಬೇಕು. ಗರುಡ ಪುರಾಣದ ಪ್ರಕಾರ, ಈ ಪೂಜೆಯ ಫಲ ಏಳು ತಲೆಮಾರುಗಳವರೆಗೆ ಲಭಿಸುತ್ತದೆ.
ಗರುಡ ಪುರಾಣದ ಪ್ರಕಾರ, ಧ್ಯಾನದಿಂದ ದೋಷಗಳು ದೂರವಾಗುತ್ತವೆ. ಅದೇ ಸಮಯದಲ್ಲಿ, ಮನಸ್ಸು ಶಾಂತವಾಗಿರುತ್ತದೆ . ಮನೆಯಲ್ಲಿ ಸಂತೋಷ ಮತ್ತು ಶಾಂತಿ ಕೂಡ ಇರುತ್ತದೆ.