ನವದೆಹಲಿ : New telecom reforms: ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಮಾಡಿದೆ. ಹೊಸ ನಿಯಮದ ಪ್ರಕಾರ, ಕೆಲವು ಗ್ರಾಹಕರು ಹೊಸ ಮೊಬೈಲ್ ಸಂಪರ್ಕವನ್ನು ಪಡೆಯುವುದು ಇನ್ನು ಸುಲಭವಾಗಲಿದೆ. ಈಗ ಗ್ರಾಹಕರು ಹೊಸ ಮೊಬೈಲ್ ಸಂಪರ್ಕಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಿಮ್ ಕಾರ್ಡ್ ಅವರ ಮನೆಗೆ ತಲುಪುತ್ತದೆ. ಆದರೆ ಇನ್ನು ಕೆಲವು ಗ್ರಾಹಕರು ಹೊಸ ಸಿಮ್ ಪಡೆಯುವುದು ಸಾಧ್ಯವಾಗುವುದಿಲ್ಲ.
18 ವರ್ಷದೊಳಗಿನ ಗ್ರಾಹಕರಿಗೆ ಸಿಗುವುದಿಲ್ಲ ಸಿಮ್ :
ಸರ್ಕಾರದ ನಿಯಮಗಳ ಪ್ರಕಾರ, ಈಗ 18 ವರ್ಷದೊಳಗಿನ ಗ್ರಾಹಕರಿಗೆ ಹೊಸ ಸಿಮ್ ಅನ್ನು ಮಾರಾಟ ಮಾಡುವಂತಿಲ್ಲ (New Sim Card Rules). ಮತ್ತೊಂದೆಡೆ, 18 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಹಕರು ತಮ್ಮ ಹೊಸ ಸಿಮ್ಗಾಗಿ ಆಧಾರ್ (Aadhaar) ಅಥವಾ ಡಿಜಿಲಾಕರ್ನಲ್ಲಿ ಸಂಗ್ರಹಿಸಲಾದ ಯಾವುದೇ ದಾಖಲೆಯೊಂದಿಗೆ ಪರಿಶೀಲಿಸಬಹುದು. ಟೆಲಿಕಾಂ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಇದನ್ನೂ ಓದಿ : ವಾಹನದಲ್ಲಿ ಈ ನಂಬರ್ ಪ್ಲೇಟ್ ಇದ್ದರೆ, ಪೊಲೀಸರು ನಿಮ್ಮ ಕಾರನ್ನು ತಡೆಯುವಂತಿಲ್ಲ
1 ರೂಪಾಯಿ ಮೂಲಕ ಸಾಧ್ಯವಾಗುತ್ತದೆ KYC :
ಹೊಸ ಆದೇಶದ ನಿಯಮಗಳ ಪ್ರಕಾರ, ಹೊಸ ಮೊಬೈಲ್ (Mobile) ಸಂಪರ್ಕಕ್ಕಾಗಿ UIDAIಯ ಆಧಾರ್ ಆಧಾರಿತ e-KYC ಸೇವೆಯ ಮೂಲಕ ಪ್ರಮಾಣೀಕರಣಕ್ಕಾಗಿ ಬಳಕೆದಾರರು ಕೇವಲ 1 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
ಟೆಲಿಕಾಂ ಇಲಾಖೆಯ ಹೊಸ ನಿಯಮಗಳ ಪ್ರಕಾರ, ಈಗ ಕಂಪನಿಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವಂತಿಲ್ಲ (Sim card Sale). ಇದಲ್ಲದೆ, ಒಬ್ಬ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದರೆ, ಅಂತಹ ವ್ಯಕ್ತಿಗೂ ಹೊಸ ಸಿಮ್ ಕಾರ್ಡ್ ನೀಡಲಾಗುವುದಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿ, ಸಿಮ್ ಮಾರಾಟ ಮಾಡಿದರೆ, ಸಿಮ್ ಮಾರಾಟ ಮಾಡಿದ ಟೆಲಿಕಾಂ ಕಂಪನಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : Hero Electric: ಈ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಲೈಸೆನ್ಸ್ ಇಲ್ಲದೆ ಓಡಿಸಬಹುದು
ಕಾನೂನಿಗೆ ತಿದ್ದುಪಡಿ ತಂದ ಸರ್ಕಾರ :
ಪ್ರಿಪೇಯ್ಡ್ ಅನ್ನು ಪೋಸ್ಟ್ಪೇಯ್ಡ್ಗೆ ಪರಿವರ್ತಿಸಲು ಹೊಸ ಒನ್ ಟೈಮ್ ಪಾಸ್ವರ್ಡ್ (OTP) ಆಧಾರಿತ ಪ್ರಕ್ರಿಯೆ ಜಾರಿಗೆ ಬಂದಿದೆ. ಈಗ ಹೊಸ ನಿಯಮದ ಪ್ರಕಾರ, UIDAI ಆಧಾರಿತ ಪರಿಶೀಲನೆಯ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿ ಸಿಮ್ ಪಡೆಯಬಹುದು. ಆ್ಯಪ್/ಪೋರ್ಟಲ್ ಆಧಾರಿತ ಪ್ರಕ್ರಿಯೆಯ ಮೂಲಕ ಗ್ರಾಹಕರಿಗೆ ಮೊಬೈಲ್ ಸಂಪರ್ಕವನ್ನು ನೀಡಲಾಗುವುದು. ಇದರಲ್ಲಿ ಗ್ರಾಹಕರು ಮನೆಯಲ್ಲಿ ಕುಳಿತು ಮೊಬೈಲ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು DoT ತನ್ನ ಆದೇಶದಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.