/kannada/photo-gallery/money-will-rain-into-these-zodiac-sign-as-shukra-dese-232387  ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ 232387

ನವದೆಹಲಿ : ಭಾರತ ಸರ್ಕಾರವು ಈ ಹಿಂದೆ BH ಅಥವಾ ಭಾರತ್ ಸರಣಿಯ ನೋಂದಣಿ ಸಂಖ್ಯೆಗಾಗಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿತ್ತು (Bharat Series). ಇದೀಗ ಈ ಯೋಜನೆಯನ್ನು ಹೊಸ ವಾಹನಗಳಿಗಾಗಿ ದೇಶಾದ್ಯಂತ ಪ್ರಾರಂಭಿಸಲಾಗಿದೆ. ಸಂಸತ್ತಿನಲ್ಲಿ ಹೇಳಿಕೆಯ ಮೂಲಕ ಸರ್ಕಾರ ಈ ಮಾಹಿತಿಯನ್ನು ನೀಡಿದೆ. ಈ ನಂಬರ್ ಪ್ಲೇಟ್ ನಲ್ಲಿ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ನೋಂದಣಿ ಸಂಖ್ಯೆ ಇರುವುದಿಲ್ಲ. ಇದು BH ನೊಂದಿಗೆ ಪ್ರಾರಂಭವಾಗುತ್ತದೆ. ಇದರೊಂದಿಗೆ ನಿಮ್ಮ ವಾಹನವನ್ನು ಒಂದು ರಾಜ್ಯದಿಂದ ಇನ್ನೊಂದು  ರಾಜ್ಯಕ್ಕೆ ಕೊಂಡೊಯ್ದರೆ ನೋಂದಣಿ ಸಂಖ್ಯೆಯನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ. ಹೊಸ ವಾಹನಗಳಿಗಾಗಿ ಭಾರತ್ ಸರಣಿಯನ್ನು ಪರಿಚಯಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari)ಸಂಸತ್ತಿನಲ್ಲಿ ಲಿಖಿತ ಹೇಳಿಕೆ ನೀಡಿದ್ದಾರೆ.

ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ? :
BH ಸರಣಿಯ ನಂಬರ್ ಪ್ಲೇಟ್‌ನಲ್ಲಿ VIP ಸಂಖ್ಯೆ ಸೌಲಭ್ಯ ಇರುವುದಿಲ್ಲ.  ಈ ಸಂಖ್ಯೆಯು ಸಾಮಾನ್ಯ ಸಂಖ್ಯೆಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ನಂಬರ್ ಪ್ಲೇಟ್‌ನಲ್ಲಿ ಮೊದಲು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಗಳನ್ನು ಬರೆಯಲಾಗುತ್ತದೆ. ನಂತರ BH ಎಂದು ಬರೆಯಲಾಗುತ್ತದೆ ಮತ್ತು ಅಂತಿಮವಾಗಿ ನಾಲ್ಕು ಅಂಕಿಗಳ ಸಂಖ್ಯೆ ಇರುತ್ತದೆ. ಇದು ಬಿಳಿ ಫಲಕವಾಗಿದ್ದು, ಅದರ ಮೇಲೆ ಸಂಖ್ಯೆಗಳನ್ನು ಕಪ್ಪು ಬಣ್ಣದಲ್ಲಿ ಬರೆಯಲಾಗುತ್ತದೆ (Bharat Series Number palte). ಬಿಎಚ್ ಸಿರೀಸ್ ಗೆ ಸಂಬಂಧಿಸಿದಂತೆ 10 ಲಕ್ಷ ರೂ.ವರೆಗಿನ ವಾಹನಗಳಿಗೆ ಶೇ.8ರಷ್ಟು ರಸ್ತೆ ತೆರಿಗೆ, 10-20 ಲಕ್ಷ ರೂ.ಗಳ ವಾಹನಗಳಿಗೆ ಶೇ.10 ಹಾಗೂ 20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಶೇ.12ರಷ್ಟು ರಸ್ತೆ ತೆರಿಗೆ ವಿಧಿಸಲಾಗುತ್ತದೆ. ಈ ಅಂಕಿ ಅಂಶದಲ್ಲಿ, ಡೀಸೆಲ್ ವಾಹನಗಳ ಮೇಲೆ ಎರಡು ಪ್ರತಿಶತ ಹೆಚ್ಚು ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ (Vehicle tax). ಆದರೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಈ ತೆರಿಗೆಯು ಶೇಕಡಾ 2 ರಷ್ಟು ಕಡಿಮೆಯಾಗುತ್ತದೆ.

ಇದನ್ನೂ ಓದಿ : Hero Electric: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲೈಸೆನ್ಸ್ ಇಲ್ಲದೆ ಓಡಿಸಬಹುದು

ವರ್ಗಾವಣೆ ಸಂದರ್ಭದಲ್ಲಿ ಈ ಯೋಜನೆ ಸಹಾಯಕ್ಕೆ ಬರಲಿದೆ :
 ಆಗಸ್ಟ್ 2020 ರಲ್ಲಿ ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯಡಿಯಲ್ಲಿ, ಈ ಬದಲಾವಣೆಯ ಕುರಿತು ಸರ್ಕಾರವು (Central government) ಅಧಿಸೂಚನೆಯನ್ನು ಕಳುಹಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ತಿಳಿಸಿದ್ದಾರೆ. BH ಸರಣಿ ನೋಂದಣಿ ಫಲಕದೊಂದಿಗೆ,  ದೇಶದಾದ್ಯಂತ ಯಾವುದೇ ರಾಜ್ಯಕ್ಕೆ ವರ್ಗಾವಣೆಯಾದಾಗ ನೋಂದಣಿ  ಸಂಖ್ಯೆಯನ್ನು ಬದಲಾಯಿಸಬೇಕಾಗಿಲ್ಲ. ವರ್ಗಾವಣೆ ನಿರಂತರವಾಗಿ ನಡೆಯುತ್ತಿರುವ ಜನರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಯಾವುದೇ ತೊಂದರೆಯಿಲ್ಲದೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತಮ್ಮ ವಾಹನವನ್ನು ಕೊಂಡೊಯ್ಯುವುದು ಸಾಧ್ಯವಾಗುತ್ತದೆ.  ರಕ್ಷಣಾ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ಬಿಎಚ್ ಸಿರೀಸ್ ಆಯ್ಕೆ ಮಾಡಿಕೊಳ್ಳಬಹುದು( BH Series number plate).  

ಖಾಸಗಿ ವಲಯಕ್ಕೂ BH ಸರಣಿಯ ನೋಂದಣಿ :
ಸರ್ಕಾರಿ ನೌಕರರನ್ನು ಹೊರತುಪಡಿಸಿ, ಕೇಂದ್ರ ಮತ್ತು ರಾಜ್ಯಗಳ PUCs ಹೊರತುಪಡಿಸಿ, 4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ವಲಯದ  ಕಂಪನಿಗಳ ಉದ್ಯೋಗಿಗಳ ಖಾಸಗಿ ವಾಹನಗಳಿಗೆ ಬಿಎಚ್ ಸರಣಿ ನೋಂದಣಿಯನ್ನು ನೀಡಲಾಗುತ್ತದೆ. BH ಸರಣಿಯ ಸಂಖ್ಯೆಯನ್ನು ಆರಿಸುವಾಗ, ಎರಡು ವರ್ಷಗಳವರೆಗೆ  ವಾಹನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 14 ವರ್ಷಗಳು ಪೂರ್ಣಗೊಂಡ ನಂತರ, ಮೋಟಾರು ವಾಹನದ ಮೇಲಿನ ತೆರಿಗೆಯನ್ನು ವಾರ್ಷಿಕವಾಗಿ ವಿಧಿಸಲಾಗುತ್ತದೆ ಮತ್ತು ಅದರ ಮೊತ್ತವನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಆಯ್ದ ಗುಂಪುಗಳ ವಾಹನ ಮಾಲೀಕರಿಗೆ BH ಸರಣಿಯ ನೋಂದಣಿ ಸಂಖ್ಯೆಗಳನ್ನು ನೀಡುತ್ತಿವೆ. ಆದರೆ, ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ರಾಜ್ಯ ಸರ್ಕಾರಗಳು ಬಿಎಚ್ ಸರಣಿ ಸಂಖ್ಯೆಗಳನ್ನು ನೀಡುತ್ತಿವೆ.

ಇದನ್ನೂ ಓದಿ : NPS, PPF ಮತ್ತು ಸುಕನ್ಯಾ ಸಮೃದ್ಧಿ ಖಾತೆದಾರರಿಗೆ ಪ್ರಮುಖ ಸುದ್ದಿ! ಇಲ್ಲದಿದ್ದರೆ ತಪ್ಪಿದಲ್ಲ ಸಮಸ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Bharat Series number plate is very beneficiary
News Source: 
Home Title: 

ವಾಹನದಲ್ಲಿ ಈ ನಂಬರ್ ಪ್ಲೇಟ್ ಇದ್ದರೆ, ಪೊಲೀಸರು ನಿಮ್ಮ ಕಾರನ್ನು ತಡೆಯುವಂತಿಲ್ಲ

ವಾಹನದಲ್ಲಿ ಈ ನಂಬರ್ ಪ್ಲೇಟ್ ಇದ್ದರೆ, ಪೊಲೀಸರು ನಿಮ್ಮ ಕಾರನ್ನು ತಡೆಯುವಂತಿಲ್ಲ
Caption: 
ಸಿಗುತ್ತಿದೆ ಭಾರತ್ ಸರಣಿಯ ನೋಂದಣಿ ಸಂಖ್ಯೆ (file photo)
Yes
Is Blog?: 
No
Tags: 
Facebook Instant Article: 
Yes
Highlights: 

ಸಿಗುತ್ತಿದೆ ಭಾರತ್ ಸರಣಿಯ ನೋಂದಣಿ ಸಂಖ್ಯೆ

ಪೊಲೀಸರು ನಿಮ್ಮ ಕಾರನ್ನು ತಡೆಯುವಂತಿಲ್ಲ 

ರಾಜ್ಯ ಬದಲಾಯಿಸಿದರು ಬದಲಾಗುವುದಿಲ್ಲ ನಂಬರ್ 

Mobile Title: 
ವಾಹನದಲ್ಲಿ ಈ ನಂಬರ್ ಪ್ಲೇಟ್ ಇದ್ದರೆ, ಪೊಲೀಸರು ನಿಮ್ಮ ಕಾರನ್ನು ತಡೆಯುವಂತಿಲ್ಲ
Ranjitha R K
Publish Later: 
No
Publish At: 
Thursday, March 3, 2022 - 11:02
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No