ಕೀವ್ (ಉಕ್ರೇನ್): ಉಕ್ರೇನ್ ವಿರುದ್ಧದ ತನ್ನ ದಾಳಿಯನ್ನು ರಷ್ಯಾ (Russia) ಮುಂದುವರೆಸಿದೆ. ಹೆಚ್ಚಿನ ನಗರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕ್ಷಿಪಣಿ ಮತ್ತು ಮಿಲಿಟರಿ ದಾಳಿಗಳನ್ನು ಪ್ರಾರಂಭಿಸಿದೆ.
ಸಾವಿರಾರು ಜನರು ಉಕ್ರೇನ್‌ನಿಂದ (Ukraine) ಪಲಾಯನ ಮಾಡಿದ್ದಾರೆ ಮತ್ತು ಸಂಘರ್ಷದಲ್ಲಿ ಸಿಲುಕಿರುವವರು ಬಂಕರ್‌ಗಳು, ಮೆಟ್ರೋ ನಿಲ್ದಾಣಗಳು ಮತ್ತು ಅವರು ಕಂಡುಕೊಳ್ಳಬಹುದಾದ ಯಾವುದೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಪರಮಾಣು ನಿರೋಧಕ ಪಡೆಗಳಿಗೆ ಹೈಅಲರ್ಟ್ ನಲ್ಲಿರಲು ಸೂಚಿಸಿದ ಪುಟಿನ್..!
ಆದಾಗ್ಯೂ, ತಮ್ಮ ನಗರಗಳು ರಷ್ಯಾದ ಪಡೆಗಳಿಂದ ಪೂರ್ಣ ಪ್ರಮಾಣದ ಆಕ್ರಮಣಕ್ಕೆ (Russia-Ukraine war) ಸಾಕ್ಷಿಯಾಗುವುದರಿಂದ ಅನೇಕರು ತಮ್ಮ ಮನೆಗಳಿಗೆ ಸೀಮಿತರಾಗಿದ್ದಾರೆ ಮತ್ತು ಬಾಂಬ್ ಸ್ಫೋಟಗಳು ನಡೆಯುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ.
ಅಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಉಕ್ರೇನ್‌ನ ನಾಗರಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂಕಟವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಹ ಮತ್ತೊಂದು ಹೃದಯವಿದ್ರಾವಕ ವಿಡಿಯೋ (Viral Video) ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
A woman in Kiev sings Ukraine's national anthem from her bombed apartment as she cleans the leftover shards of glass. pic.twitter.com/HMWCB43nfg
— NEWS ONE (@NEWSONE46467498) February 26, 2022
ಈ ದ್ರಶ್ಯದಲ್ಲಿ ಉಕ್ರೇನಿಯನ್ ಮಹಿಳೆಯೊಬ್ಬರು ಬಾಂಬ್ ದಾಳಿಯಿಂದ (Bomb Attack) ಹಾನಿಗೊಳಗಾದ ತನ್ನ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ವೇಳೆ ಅಳುತ್ತ, ರಾಷ್ಟ್ರಗೀತೆ ಹಾಡುವುದನ್ನು ಕಾಣಬಹುದು.
ಇದನ್ನೂ ಓದಿ: Russia Ukraine War: ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆ ಹೋದ ಉಕ್ರೇನ್..!
ಒಕ್ಸಾನಾ ಗುಲೆಂಕೊ ಎಂಬ ಮಹಿಳೆ ಬಾಂಬ್ ದಾಳಿಯಿಂದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಬಿದ್ದ ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸುವಾಗ ಉಕ್ರೇನ್‌ನ ರಾಷ್ಟ್ರಗೀತೆಯನ್ನು (Ukraine National Anthem) ಹಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.