ನವದೆಹಲಿ: Lock Upp Release Date May Be Postpone - ಏಕ್ತಾ ಕಪೂರ್ (Ekta Kapoor) ಮತ್ತು ಕಂಗನಾ ರನೌತ್ (Kangana Ranaut) ಅವರ ಪ್ರಸಿದ್ಧ ರಿಯಾಲಿಟಿ ಶೋ (Reality Show) ಲಾಕ್ ಅಪ್ ಬಿಡುಗಡೆಗೆ ಮುನ್ನವೇ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಈ ಶೋ ಫೆಬ್ರವರಿ 27 ರಿಂದ ಪ್ರಸಾರವಾಗಲಿದ್ದು, ಇದೀಗ ಬಂದಿರುವ ಮಾಹಿತಿಯ ಪ್ರಕಾರ ಈ ಕಾರ್ಯಕ್ರಮದ ಬಿಡುಗಡೆ ದಿನಾಂಕವನ್ನು ವಿಸ್ತರಣೆಯಾಗುವ ಸಾಧ್ಯತೆಯಿದೆ. ಅರ್ಜಿದಾರರೊಬ್ಬರು ಈ ಬಹು ನಿರೀಕ್ಷಿತ ಶೋ ಲಾಕ್ ಅಪ್ ಪರಿಕಲ್ಪನೆಯು ಕಳ್ಳತನ ಎಂದು ಆರೋಪಿಸಿದ್ದಾರೆ.
ಹೈದರಾಬಾದ್ ನ್ಯಾಯಾಲಯವು ಅರ್ಜಿಯ ವಿಚಾರಣೆ ನಡೆಸಿದೆ.
ಮಿಸ್ಟರ್ ಸರನೋಬೇಗ್ ಹೆಸರಿನ ವ್ಯಕ್ತಿ ಏಕ್ತಾ ಕಪೂರ್ ಅವರ ಷೋ ಮೇಲೆ ಕಾನ್ಸೆಪ್ಟ್ ಕಳ್ಳತನದ ಆರೋಪ ಹೊರಿಸಿದ್ದಾರೆ. ಜೈಲು ಪರಿಕಲ್ಪನೆಯನ್ನು ಕದಿಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಜೈಲು ಕಾನ್ಸೆಪ್ಟ್ ನ ಕಥೆ ಹಾಗೂ ಸ್ಕ್ರಿಪ್ಟ್ ಗಳ ಹಕ್ಕು ಕೇವಲ ತಮ್ಮ ಬಳಿ ಮಾತ್ರ ಇದೆ ಎಂದು ಅವರು ವಾದಿಸಿದ್ದಾರೆ. ಅವರ ಅರ್ಜಿಯನ್ನು ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್ ವಿಚಾರಣೆ ನಡೆಸಿದೆ. ಅದರ ನಂತರ ನ್ಯಾಯಾಲಯವು ಲಾಕ್‌ಅಪ್ ಶೋ ಬಿಡುಗಡೆಗೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಷೋ ಪ್ರದರ್ಶನದ ಮೇಲೆ ನಿಷೇಧ (Entertainment News In Kannada)
ಮಾಹಿತಿಯ ಪ್ರಕಾರ, ನ್ಯಾಯಾಲಯವು ಈ ಬಹು ನಿರೀಕ್ಷಿತ ಷೋ ಟ್ರೇಲರ್ ಅನ್ನು ನೋಡಿದೆ ಮತ್ತು ಅದನ್ನು ಕಾಪಿ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಿದೆ. ಅದರ ನಂತರ ನ್ಯಾಯಾಲಯವು ತಕ್ಷಣದ ಸೂಚನೆಯೊಂದಿಗೆ ಯಾವುದೇ ವಿಧಾನದಿಂದ ಪ್ರದರ್ಶನದ ಪ್ರದರ್ಶನವನ್ನು ನಿಷೇಧಿಸುವ ಆದೇಶವನ್ನು ಜಾರಿಗೊಳಿಸಿದೆ.
ಅರ್ಜಿದಾರ ಮಿಸ್ಟರ್ ಬೇಗ್ ವಾದ ಏನು?
ಈ ಕುರಿತು ತನ್ನ ವಾದ ಮಂಡಿಸಿರುವ ಅರ್ಜಿದಾರ ಮಿಸ್ಟರ್ ಬೇಗ್ "ಲಾಕ್ ಅಪ್ ಕಾರ್ಯಕ್ರಮದ ಪ್ರೋಮೋಗಳನ್ನು ನೋಡಿದಾಗ ನಾನು ಆಘಾತಕ್ಕೊಳಗಾಗಿದ್ದೆ. ನಾನು ಎಂಡೆಮೊಲ್ ಶೈನ್‌ನ ಅಭಿಷೇಕ್ ರೇಗೆ ಅವರೊಂದಿಗೆ ದೀರ್ಘಕಾಲ ಸಂಪರ್ಕದಲ್ಲಿದ್ದೇನೆ ಮತ್ತು ಈ ವಿಷಯದ ಕುರಿತು ನಾವು ಹೈದರಾಬಾದ್‌ನಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದೇವೆ. ಒಮ್ಮೆ ಮಾರುಕಟ್ಟೆ ಉತ್ತಮಗೊಂಡರೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಪ್ರದರ್ಶನವು ಕೇವಲ ನಮ್ಮ ಪರಿಕಲ್ಪನೆಯಂತೆಯೇ ಅಲ್ಲ ಆದರೆ ಅದರ ಸಂಪೂರ್ಣ ನಕಲಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ-ಕಮಾಲ್ ಮಾಡಿದ Akshay Kumar ಡೆವಿಲ್ ಲುಕ್, 5 ಕೋಟಿಗೂ ಅಧಿಕ ವೀಕ್ಷಣೆ ಪಡೆದ Maar Khayegaa ಹಾಡಿನ ವಿಡಿಯೋ
ನಂಬಲು ಸಾಧ್ಯವಾಗುತ್ತಿಲ್ಲ
'ಈ ರೀತಿಯಲ್ಲಿ ಯಾರಾದರೂ ಪರಿಕಲ್ಪನೆಯನ್ನು ಕದಿಯಬಹುದು ಎಂಬುದನ್ನು ನಾವು ಊಹಿಸಿರಲಿಲ್ಲ. ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ ಮತ್ತು ನಾವು ತಡೆಯಾಜ್ಞೆ ಪಡೆದಿದ್ದೇವೆ. ಈ ಕಾರ್ಯಕ್ರಮ ಇನ್ನೂ ಪ್ರಸಾರವಾದರೆ ಅದು ನ್ಯಾಯಾಲಯದ ನಿಂದನೆಯಾಗುತ್ತದೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುತ್ತದೆ' ಎಂದು ಮಿಸ್ಟರ್ ಬೇಗ್ ಹೇಳಿದ್ದಾರೆ.
ಇದನ್ನೂ ಓದಿ-ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ ಮೇಕಿಂಗ್ ಹೇಗಿತ್ತು ಗೊತ್ತಾ..?
ಕಂಗನಾ ರಣಾವತ್ ನಡೆಸಿಕೊಡುವ ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ 16 ಸ್ಪರ್ಧಿಗಳು ಮೂಲಭೂತ ಸೌಕರ್ಯಗಳಿಗಾಗಿ ಸ್ಪರ್ಧಿಸಲಿದ್ದಾರೆ. ಇದು ಫೆಬ್ರವರಿ 27 ರಿಂದ Alt Balaji ಮತ್ತು MX Player ನಲ್ಲಿ ಸ್ಟ್ರೀಮ್ ಆಗಲಿದೆ.
ಇದನ್ನೂ ಓದಿ-ಕನ್ನಡಿಗರ 'ಕಲಾತಪಸ್ವಿ' ಕೊನೆಯ ಸಿನಿಮಾ ಹೇಗಿತ್ತು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ