instagram ಮೂಲಕ ಭಾರತದ ನೆರವು ಕೋರಿದ ಉಕ್ರೇನ್ ನಲ್ಲಿರುವ ಕೇರಳದ ನಾಯಿ ಚಪಾತಿ

2017 ರಲ್ಲಿ, ಉಕ್ರೇನಿಯನ್ ದಂಪತಿಗಳಾದ ಯುಜೀನ್ ಪೆಟ್ರಸ್ ಮತ್ತು ಕ್ರಿಸ್ಟಿನಾ ಮಸಲೋವಾ ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದರು. ಅಲ್ಲಿ  ಹಸಿದ ನಾಯಿಯೊಂದು ಅವರ ಕಣ್ಣಿಗೆ ಬಿದ್ದಿತ್ತು. 

Written by - Ranjitha R K | Last Updated : Feb 26, 2022, 02:19 PM IST
  • ಭಾರತದ ಸಹಾಯವನ್ನು ಕೋರಿದೆ ಉಕ್ರೇನ್‌ನಲ್ಲಿ ವಾಸಿಸುವ ನಾಯಿ
  • ಕೇರಳದಿಂದ ಉಕ್ರೇನ್ ತಲುಪಿತ್ತು ಭಾರತೀಯ ನಾಯಿ
  • ನಾಯಿ ಚಪಾತಿ ಉಕ್ರೇನ್ ತಲುಪಿದ ಕಥೆ ತುಂಬಾ ರೋಚಕವಾಗಿತ್ತು
instagram ಮೂಲಕ ಭಾರತದ ನೆರವು ಕೋರಿದ ಉಕ್ರೇನ್ ನಲ್ಲಿರುವ ಕೇರಳದ ನಾಯಿ ಚಪಾತಿ  title=
ಭಾರತದ ಸಹಾಯವನ್ನು ಕೋರಿದೆ ಉಕ್ರೇನ್‌ನಲ್ಲಿ ವಾಸಿಸುವ ನಾಯಿ (photo instagram)

ನವದೆಹಲಿ :  Kerala Dog Reached Ukraine: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬಳಿಕ ಅಲ್ಲಿ ಬಿಕ್ಕಟ್ಟು ಎದುರಾಗಿದೆ (Russia Ukraine War). ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಬಾಂಬ್ ದಾಳಿ ನಡೆಯುತ್ತಿದೆ.  ಈ ಮಧ್ಯೆ, ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ವಾಸಿಸುವ ನಾಯಿಯೊಂದು ಸಹಾಯಕ್ಕಾಗಿ ಭಾರತದ  ಮೊರೆ ಹೋಗಿದೆ.  ಕೇರಳದ ಕೊಚ್ಚಿ ಮೂಲದ ಈ ನಾಯಿ, ತನ್ನನ್ನು ರಕ್ಷಿಸುವಂತೆ ಭಾರತಕ್ಕೆ ಮನವಿ ಮಾಡಿದೆ.  

ಭಾರತದ ಸಹಾಯ ಕೇಳಿದ ನಾಯಿ!
ಚಪಾತಿ ಎಂಬ ಹೆಸರಿನ ಈ ನಾಯಿ, ಇತ್ತೀಚೆಗೆ Instagram ನಲ್ಲಿ ಪೋಸ್ಟ್ ಹಾಕಿದೆ.  ಹೌದು ಈ  ನಾಯಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, 'ಭಾರತ ಮಾತೆ, ಲಕ್ಷಾಂತರ ಶಾಂತಿಯುತ ಉಕ್ರೇನಿಯನ್‌ಗಳು ಮತ್ತು ಮುಗ್ಧ ಪ್ರಾಣಿಗಳಂತೆ, ನನ್ನ ಕುಟುಂಬದ ಜೀವವೂ ಅಪಾಯದಲ್ಲಿದೆ. ಭಾರತಮಾತೆ, ನೀನು ಮೌನವಾಗಿರಬೇಡ!  ಉಕ್ರೇನಿಯನ್ನರ ಪರವಾಗಿ ಮಾತನಾಡು ಎಂದು ಬರೆಯಲಾಗಿದೆ. ಈ ನಾಯಿ ಕೇರಳದಿಂದ ಉಕ್ರೇನ್ ತಲುಪಿದ ಕಥೆ  ರೋಚಕವಾಗಿದೆ (Kerala Dog in Ukraine). 

 
 
 
 

 
 
 
 
 
 
 
 
 
 
 

A post shared by traveling dog Chapati (@travelingchapati)

 

ಇದನ್ನೂ ಓದಿ : ಉಕ್ರೇನ್-ರಷ್ಯಾ ಯುದ್ಧದ 2ನೇ ದಿನ ಏನಾಯಿತು? ಉಕ್ರೇನ್ ನಾಗರಿಕರಿಂದ ಭಾರತ ಏನು ಕಲಿಯಬಹುದು?

2017 ರಲ್ಲಿ, ಉಕ್ರೇನಿಯನ್ ದಂಪತಿಗಳಾದ ಯುಜೀನ್ ಪೆಟ್ರಸ್ ಮತ್ತು ಕ್ರಿಸ್ಟಿನಾ ಮಸಲೋವಾ ಕೇರಳದ (Kerala)ಕೊಚ್ಚಿಗೆ ಭೇಟಿ ನೀಡಿದ್ದರು. ಅಲ್ಲಿ  ಹಸಿದ ನಾಯಿಯೊಂದು ಅವರ ಕಣ್ಣಿಗೆ ಬಿದ್ದಿತ್ತು. ನಂತರ ದಂಪತಿ ಆ ನಾಯಿಯನ್ನು ರಕ್ಶೊಇಸಿದ್ದು ಮಾತ್ರವಲ್ ಅದನ್ನು ತಮ್ಮೊಂದಿಗೆ  ಉಕ್ರೇನ್ ಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಈ ನಾಯಿಗೆ ಚಪಾತಿ ಎಂದು ನಾಮಕರಣ ಮಾಡಿದ್ದಾರೆ. ಈಗ ಬಿಕ್ಕಟ್ಟಿನ ಸಮಯದಲ್ಲಿ, ನಾಯಿಯ ಸಹಾಯ ಮಾಡುವಂತೆ ದಂಪತಿ ಭಾರತಕ್ಕೆ ಮನವಿ ಮಾಡಿದ್ದಾರೆ.

ಚಪಾತಿ ಎಂಬ ನಾಯಿ ಸಾಮಾಜಿಕ ಜಾಲತಾಣಗಳಲ್ಲಿ (Social media) ತುಂಬಾ ಸಕ್ರಿಯವಾಗಿದೆ.  ಈ ನಾಯಿ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ(Facebook) ಟ್ರಾವೆಲಿಂಗ್ ಚಪಾತಿ ಎಂಬ ಖಾತೆಯನ್ನು ಹೊಂದಿದೆ. ಈ ಖಾತೆಯನ್ನು ಉಕ್ರೇನಿಯನ್ ದಂಪತಿ ನಡೆಸುತ್ತಿದ್ದಾರೆ. ಈ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ (Social media account)ಚಪಾತಿಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ, ದಂಪತಿ ಉಕ್ರೇನ್ ನೆಲದಲ್ಲಿ ಯುದ್ಧವನ್ನು ನಿಲ್ಲಿಸಲು ಸಹಾಯಕ್ಕಾಗಿ ಭಾರತವನ್ನು ಕೇಳಿದ್ದಾರೆ. 

ಇದನ್ನೂ ಓದಿ : ರಷ್ಯಾದಿಂದ ರಾಜಧಾನಿ ಕೀವ್ ಉಳಿಸಲು ಹೆಣಗಾಡುತ್ತಿರುವ ಉಕ್ರೇನ್ ರಸ್ತೆಗಳ ಸ್ಥಿತಿ ಹೇಗಿದೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News