Shani Dev: ಶನಿ ದೇವನನ್ನು ಕರ್ಮಫಲದಾಯಕ, ಅತ್ಯಂತ ಕ್ರೂರ ದೇವರು ಎಂದು ಪರಿಗಣಿಸಲಾಗುತ್ತದೆ. ಅವನು ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಮತ್ತು ಆದ್ದರಿಂದ ಅವನನ್ನು ನ್ಯಾಯದ ದೇವರು ಎಂದೂ ಕರೆಯುತ್ತಾರೆ. ಶನಿದೇವನ ಅನುಗ್ರಹವು ವ್ಯಕ್ತಿಯನ್ನು ವಿಶೇಷವಾಗಿಸುತ್ತದೆ. ಹಾಗಾಗಿ ಶನಿದೇವರ ಭಕ್ತರಿಗೆ ಕೊರತೆಯಿಲ್ಲ, ಶನಿವಾರ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಶನಿದೇವಾಲಯಗಳಲ್ಲಿ ಭಕ್ತರ ದಂಡೇ ಇರುತ್ತದೆ. ಆದರೆ ಶನಿದೇವನ ವಿಗ್ರಹ ಅಥವಾ ಫೋಟೋವನ್ನು ಇತರ ದೇವರುಗಳಂತೆ ಮನೆಯಲ್ಲಿ ಏಕೆ ಇಡುವುದಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಮನೆಗಳಲ್ಲಿ ರಾಧಾ-ಕೃಷ್ಣ, ಶಿವ-ಪಾರ್ವತಿ, ಗಣೇಶ ಮತ್ತು ಭಗವಾನ್ ರಾಮ ಸೇರಿದಂತೆ ಎಲ್ಲಾ ದೇವತೆಗಳ ವಿಗ್ರಹಗಳು ಅಥವಾ ಫೋಟೋಗಳು ಇರುತ್ತವೆ. ಪ್ರತಿ ದಿನ ಮನೆಯಲ್ಲಿ ಪೂಜೆ ಕೂಡ ಮಾಡಲಾಗುತ್ತದೆ. ಆದರೆ ಶನಿದೇವನ (Shani Dev) ಫೋಟೋ ಅಥವಾ ವಿಗ್ರಹವನ್ನು ಮನೆಗೆ ತರುವುದಿಲ್ಲ. ಇದಕ್ಕೆ ಕಾರಣವೇನು ಗೊತ್ತೇ?
ಇದನ್ನೂ ಓದಿ- ನಾಳೆಯಿಂದ ಶನಿದೇವನ ಕೃಪೆಯಿಂದ ಈ ಆರು ರಾಶಿಯವರಿಗೆ ಭಾರೀ ಅದೃಷ್ಟ, ಉದ್ಯೋಗದಲ್ಲಿ ಸಿಗಲಿದೆ ಬಡ್ತಿ
ಪೌರಾಣಿಕ ನಂಬಿಕೆಯ ಪ್ರಕಾರ, ಶನಿದೇವನು ಯಾರ ಮೇಲೆ ದೃಷ್ಟಿ ಹಾಯಿಸಿದರೂ ಅದು ಅಶುಭ ಎಂದು ಶಾಪಗ್ರಸ್ತವಾಗಿದೆ, ಆದ್ದರಿಂದ ಶನಿಯ ವಿಗ್ರಹವನ್ನು (Shani Idol) ಅಥವಾ ಫೋಟೋವನ್ನು ಮನೆಯಲ್ಲಿ ಇಡುವುದಿಲ್ಲ. ಆದ್ದರಿಂದ ಜನರು ಅವನ ದೃಷ್ಟಿಯಿಂದ ದೂರ ಉಳಿಯುತ್ತಾರೆ. ಇಷ್ಟೇ ಅಲ್ಲ, ಶನಿದೇವನನ್ನು ಪೂಜಿಸುವಾಗಲೂ ಕೂಡ ಅವನ ಮೂರ್ತಿಯ ಮುಂದೆ ನೇರವಾಗಿ ನಿಂತು ಅವನನ್ನು ನೋಡಬಾರದು. ಬದಲಿಗೆ, ಯಾವಾಗಲು ವಿಗ್ರಹದ ಬಲ ಅಥವಾ ಎಡಭಾಗದಲ್ಲಿ ನಿಂತು ಶನಿದೇವನ ದರ್ಶನವನ್ನು ಪಡೆಯಬೇಕು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಶೀಘ್ರವೇ ಶನಿದೇವನ ಪ್ರಕೋಪಕ್ಕೆ ಒಳಗಾಗಲಿದೆ ಈ ಎರಡು ರಾಶಿಗಳು, ಆರಂಭವಾಗಲಿದೆ ಶನಿ ಧೈಯಾ
ಅಂತಹ ವಿಗ್ರಹವನ್ನು ಪೂಜಿಸುವುದು ಉತ್ತಮ :
ಶನಿದೇವನ ದರ್ಶನವಾಗದಿರಲು ಶನಿದೇವನ ವಿಗ್ರಹದ ಬದಲಾಗಿ ಆತನ ಶಿಲಾರೂಪದ ದರ್ಶನ ಪಡೆಯುವುದು ಉತ್ತಮ ಎಂದು ಹೇಳಲಾಗುತ್ತದೆ. ಇದಲ್ಲದೆ, ಅರಳಿ ಮರವನ್ನು ಪೂಜಿಸುವುದು, ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದು ಅಥವಾ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ಸಹ ಶನಿಯ ಅನುಗ್ರಹವನ್ನು ಪಡೆಯಲು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ಬಡವರು, ಅಸಹಾಯಕರಿಗೆ ಸಹಾಯ ಮಾಡುವುದರಿಂದ ಶನಿ ದೇವನನ್ನು ಸಂತೋಷಪಡಿಸಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ