ಸೋನಿಪತ್: ಕೆಂಪುಕೋಟೆ(Red Fort) ಮೇಲೆ ಧ್ವಜ ಹಾರಿಸಿದ್ದ ಪಂಜಾಬಿ ನಟ ದೀಪ್ ಸಿಧು(Deep Sidhu) ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. 37 ವರ್ಷದ ನಟ ಹರಿಯಾಣದ ಸೋನಿಪತ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸೋನಿಪತ್ ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದ ದೀಪ್ ಸಿಧು(Punjabi Actor Deep Sidhu) ರೈತ ಹೋರಾಟದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ರೈತರ ಪ್ರತಿಭಟನೆ ವೇಳೆ 2021ರ ಕೆಂಪುಕೋಟೆ ಹಿಂಸಾಚಾರ ಪ್ರಕರಣದಲ್ಲಿ ಸಿಧು ಅವರನ್ನು ಈ ಹಿಂದೆ ಆರೋಪಿ ಎಂದು ಹೆಸರಿಸಲಾಗಿತ್ತು.
Punjabi actor Deep Sidhu dies in a road accident near Sonipat in Haryana, confirms Sonipat Police. Details awaited.
He was also earlier named as an accused in the 2021 Red Fort violence case. pic.twitter.com/CoLh8ObkJJ
— ANI (@ANI) February 15, 2022
ಇದನ್ನೂ ಓದಿ: WATCH: ತನ್ನ ತೂಕಕ್ಕೆ ಸಮನಾದ ಜಿಂಕೆ ಹೊತ್ತು ಮರವನ್ನು ಹತ್ತಿದ ಚಿರತೆ
Visuals of the car from the accident site. Punjabi actor Deep Sidhu died in a road accident after he rammed his car into a standing truck near Pipli toll at Kundli-Manesar-Palwal (KMP) Expressway, as per Haryana Police pic.twitter.com/WL2MzT1hYd
— ANI (@ANI) February 15, 2022
ಕೇಂದ್ರ ಸರ್ಕಾರದ 3 ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಗಣರಾಜ್ಯೋತ್ಸವ ದಿನದಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ವೇಳೆಯಲ್ಲಿ ನಡೆದ ಹಿಂಸಾಚಾರ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಫೆಬ್ರವರಿ 9 ರಂದು ಸಿಧುವನ್ನು ಬಂಧಿಸಲಾಗಿತ್ತು. ದೀಪ್ ಸಿಧು ಅಪಘಾತ(Deep Sindhu Accident)ದಲ್ಲಿ ಸಾವನ್ನಪ್ಪಿದ್ದಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಸಂತಾಪ ವ್ಯಕ್ತಪಡಿಸಿದ್ದಾರೆ.
Deeply saddened to learn about the unfortunate demise of renowned actor and social activist, #DeepSidhu. My thoughts and prayers are with the bereaved family and fans.
— Charanjit S Channi (@CHARANJITCHANNI) February 15, 2022
ಇದನ್ನೂ ಓದಿ: IRCTC: ರೈಲು ಪ್ರಯಾಣಿಕರಿಗೆ ಬಿಗ್ ನ್ಯೂಸ್! ಹೊಸ ಪಾವತಿ ಸೇವೆ ಪ್ರಾರಂಭ, ಇಲ್ಲಿದೆ ಬಹುಮುಖ್ಯ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.