Air India ನೂತನ CEO ಆಗಿ Ilker Ayci ನೇಮಕ, ಇಲ್ಲಿದೆ ವಿವರ

Air India New CEO And MD - ಅವರ ನೇಮಕಾತಿಯ ನಂತರ ಮಾತನಾಡಿರುವ ಐಸಿ, ಟಾಟಾ ಗ್ರೂಪ್‌ಗೆ (Tata Group) ಸೇರಲು ಮತ್ತು ಪ್ರತಿಷ್ಠಿತ ವಿಮಾನಯಾನವನ್ನು ಮುನ್ನಡೆಸುವುದು ಸಂತಸದ ಸಂಗತಿ ಮತ್ತು ಗೌರವದ ವಿಷಯ ಎಂದಿದ್ದಾರೆ. 

Written by - Nitin Tabib | Last Updated : Feb 14, 2022, 10:33 PM IST
  • Air India ನೂತನ CEO-MD ನೇಮಕ
  • ಟರ್ಕಿಷ್ ಏರ್ಲೈನ್ಸ್ ಮಾಜಿ ಅಧ್ಯಕ್ಷ ಇಲ್ಕರ್ ಐಸಿ Air India ನೂತನ CEO ಮತ್ತು MD ಆಗಿ ನೇಮಕ
  • ಇಲ್ಲಿದೆ ಇಲ್ಕರ್ ಐಸಿ ವಿಸ್ತೃತ ಪ್ರೊಫೈಲ್
Air India ನೂತನ CEO ಆಗಿ Ilker Ayci ನೇಮಕ, ಇಲ್ಲಿದೆ ವಿವರ title=
Air India New CEO And MD (File Photo)

Air India New CEO And MD - ಟರ್ಕಿಶ್ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿ  (Ilker Ayci)ಅವರನ್ನು ಸೋಮವಾರ ಏರ್ ಇಂಡಿಯಾದ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಆಗಿ ನೇಮಿಸಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಟಾಟಾ ಸನ್ಸ್ (Tata Sons)  "ಹೆಚ್ಚಿನ ಚರ್ಚೆಯ ನಂತರ, ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಆಗಿ ಇಲ್ಕರ್ ಐಸಿ ಹೆಸರನ್ನು ಮಂಡಳಿಯು ಅನುಮೋದಿಸಿದೆ" ಎಂದು ಹೇಳಿದೆ. ಅವರು ಈ ವರ್ಷದ ಏಪ್ರಿಲ್ 1 ಅಥವಾ ಅದಕ್ಕೂ ಮೊದಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದಿದೆ.

ಗೌರವ ಭಾವನೆ
ಇನ್ನೊಂದೆಡೆ ಸಿಇಒ ಆಗಿ ನೇಮಕಗೊಂಡಿರುವುದಕ್ಕೆ ಇಲ್ಕರ್ ಐಸಿ ಸಂತಸ ವ್ಯಕ್ತಪಡಿಸಿದ್ದಾರೆ. ನೇಮಕಾತಿಯ ಬಳಿಕ ಮಾತನಾಡಿರುವ ಅವರು ಟಾಟಾ ಗ್ರೂಪ್‌ಗೆ ಸೇರಲು ಮತ್ತು ಪ್ರತಿಷ್ಠಿತ ವಿಮಾನಯಾನವನ್ನು ಮುನ್ನಡೆಸುವುದು ಸಂತಸದ ಸಂಗತಿ ಮತ್ತು ಗೌರವದ ವಿಷಯ ಎಂದು ಐಸಿ ಹೇಳಿದ್ದಾರೆ. "ಏರ್ ಇಂಡಿಯಾದ ಪ್ರಬಲ ಪರಂಪರೆಯನ್ನು ಅದನ್ನು ವಿಶ್ವದ ಅತ್ಯುನ್ನದ ವಿಮಾನಯಾನ ಸಂಸ್ಥೆಗಳಲ್ಲಿ ಒಂದನ್ನಾಗಿ ಮಾಡಲು ಬಳಸುವುದಾಗಿ ಅವರು ಹೇಳಿದ್ದಾರೆ. ಇದು ಭಾರತೀಯತೆ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸುವ ವಿಶಿಷ್ಟವಾದ ಉತ್ಕೃಷ್ಟ ಹಾರಾಟದ ಅನುಭವವನ್ನು ಹೊಂದಿದೆ." ಎಂದು ಐಸಿ ಹೇಳಿದ್ದಾರೆ. 

ಏರ್ ಇಂಡಿಯಾದ ನೂತನ CEO ಮತ್ತು MD ಇಲ್ಕರ್ ಐಸಿ (Air India New CEO And MD)  ಅವರಿಗೆ ಸಂಬಂಧಿಸಿದ 10 ಪ್ರಮುಖ ವಿಷಯಗಳು ಇಲ್ಲಿವೆ

1) ಇಲ್ಕರ್ ಐಸಿ 1971 ರಲ್ಲಿ ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಜನಿಸಿದ್ದಾರೆ. 

2) ಅವರು 1994 ರಲ್ಲಿ ಟರ್ಕಿಯ ಬಿಲ್ಕೆಂಟ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದಿಂದ ಪದವಿ ಪಡೆದಿದ್ದಾರೆ.

3) ಬಿಲ್ಕೆಂಟ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಐಸಿ ಯುಕೆ ಲೀಡ್ಸ್ ವಿಶ್ವವಿದ್ಯಾಲಯಕ್ಕೆ 1995 ರಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂಶೋಧಕರಾಗಿ ಸೇರಿದರು.

ಇದನ್ನೂ ಓದಿ-Air India: 18,000 ಕೋಟಿ ರೂ.ಗೆ ಏರ್ ಇಂಡಿಯಾ ಹರಾಜು ಗೆದ್ದ ಟಾಟಾ ಸನ್ಸ್

4) ಐಸಿ 1997 ರಲ್ಲಿ ಟರ್ಕಿಯ ಮರ್ಮರ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

5) ಅವರು 1994 ರಲ್ಲಿ ಕುರ್ಟ್ಸನ್ ಇಲಕ್ಲಾರ್ ಮತ್ತು ಇಸ್ತಾನ್ಬುಲ್ ಮೆಟ್ರೋಪಾಲಿಟನ್ ಪುರಸಭೆಯಂತಹ ಸಂಸ್ಥೆಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

6) 2005 ಮತ್ತು 2006 ರ ನಡುವೆ Ayci Basak Sigorta ಗೆ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಇದಲ್ಲದೆ, ಅವರು 2006 ಮತ್ತು 2011 ರ ನಡುವೆ ಗನ್ಸ್ ಸಿಗೋರ್ಟಾದಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ-AIR INDIA SALE: 68 ವರ್ಷಗಳ ನಂತರ ಮತ್ತೆ ಟಾಟಾಗೆ ಮರಳಿದ ಏರ್ ಇಂಡಿಯಾ..!

7) ಅವರು ಕೆನಡಾದ ಟರ್ಕಿಶ್ ಬಿಸಿನೆಸ್ ಕೌನ್ಸಿಲ್‌ನ ಸದಸ್ಯರಾಗಿದ್ದಾರೆ ಮತ್ತು ಯುಎಸ್-ಟರ್ಕಿ ಬಿಸಿನೆಸ್ ಕೌನ್ಸಿಲ್‌ನ ಸದಸ್ಯರಾಗಿದ್ದಾರೆ. ಇದಲ್ಲದೆ, ಅವರು ಟರ್ಕಿಶ್ ಫುಟ್‌ಬಾಲ್ ಫೆಡರೇಶನ್ ಮತ್ತು ಟರ್ಕಿಶ್ ಏರ್‌ಲೈನ್ಸ್ ಸ್ಪೋರ್ಟ್ಸ್ ಕ್ಲಬ್‌ನ ಮಂಡಳಿಯಲ್ಲಿದ್ದರು.

8) 2011 ರಲ್ಲಿ ಅವರು ರಿಪಬ್ಲಿಕ್ ಆಫ್ ಟರ್ಕಿಯ ಹೂಡಿಕೆ ಬೆಂಬಲ ಮತ್ತು ಪ್ರಚಾರ ಏಜೆನ್ಸಿಯ ಅಧ್ಯಕ್ಷರಾಗಿದ್ದರು. ಇದು ಅಂತರರಾಷ್ಟ್ರೀಯ ವ್ಯಾಪಾರ ಸಮುದಾಯಕ್ಕೆ ಟರ್ಕಿಯಲ್ಲಿ ಹೂಡಿಕೆ ಅವಕಾಶಗಳನ್ನು ಉತ್ತೇಜಿಸುವ ಅಧಿಕೃತ ಸಂಸ್ಥೆಯಾಗಿದೆ.

9) 2013 ರಲ್ಲಿ ಅವರು ವರ್ಲ್ಡ್ ಅಸೋಸಿಯೇಷನ್ ​​ಆಫ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಏಜೆನ್ಸಿಗಳ ಉಪಾಧ್ಯಕ್ಷರಾಗಿ ಮತ್ತು 2014 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು.

10) ಇತ್ತೀಚಿನವರೆಗೂ, ಐಸಿ ಟರ್ಕಿಶ್ ಏರ್ಲೈನ್ಸ್ನ ಅಧ್ಯಕ್ಷರಾಗಿದ್ದರು. ಅದಕ್ಕೂ ಮುನ್ನ ಅವರು ಕಂಪನಿಯ ಆಡಳಿತ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ-Air India: ಜನವರಿ 27 ರಂದು ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಹಸ್ತಾಂತರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News