ಬೆಂಗಳೂರು : ಹಿರಿಯ ನಟ ರಾಜೇಶ್ (Actor Rajesh)ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟ ರಾಜೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಕಳೆದ ರಾತ್ರಿ ನಟ ರಾಜೇಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು (Actor Rajesh health condition). ಬೆಳಗ್ಗೆ ವೇಳೆಗೆ ನಟ ರಾಜೇಶ್ ಆರೋಗ್ಯ ಸುಧಾರಿಸಿದ್ದರೂ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ.
ಆಸ್ಪತ್ರೆ ವೈದ್ಯರು ಈ ಕುರಿತು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದರು. ಆದರೆ ಇನ್ನೂ ಹಿರಿಯ ನಟನ ಆರೋಗ್ಯ ಸುಧಾರಿಸಿಲ್ಲ (Actor Rajesh health condition). ಹೀಗಾಗಿ ಚಿಕಿತ್ಸೆ ಮುಂದುವರಿದಿದೆ. 86ರ ಹರೆಯದ ಹಿರಿಯ ನಟ ರಾಜೇಶ್ ಜನಿಸಿದ್ದು, ಬೆಂಗಳೂರಿನಲ್ಲಿ. ನಟ ರಾಜೇಶ್ ಅವರ ಮೂಲ ಹೆಸರು ಮುನಿ ಚೌಡಪ್ಪ. ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ್ ಎಂಬ ಹೆಸರಿನಿಂದ ನಟ ರಾಜೇಶ್ ಗುರುತಿಸಿಕೊಂಡಿದ್ದರು. ಆದರೆ ಸಿನಿಮಾ ಕ್ಷೇತ್ರಕ್ಕೆ (film industry) ಕಾಲಿಟ್ಟ ಬಳಿಕ ‘ಕಲಾತಪಸ್ವಿ’ ರಾಜೇಶ್ ಎಂದೇ ಮನೆಮಾತಾಗಿದ್ದಾರೆ.
ಇದನ್ನೂ ಓದಿ : 'ಇಂದಿರಾ' ಎಂಟ್ರಿಗೆ ಕೌಂಟ್ಡೌನ್: ಪ್ರೇಕ್ಷಕರ ಗಮನ ಸೆಳೆಯುತ್ತಿದೆ 'ಸ್ಟೆಪ್ಸ್ ಟು ಡೆಸ್ಟಿನಿ'
ಸಾಲು ಸಾಲು ಹಿಟ್..!
ನಟ ರಾಜೇಶ್ 1960ರಲ್ಲಿ ಚಿತ್ರರಂಗಕ್ಕೆ (Kannada film) ಕಾಲಿಟ್ಟರು. ‘ನಮ್ಮ ಊರು’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಬಳಿಕ ‘ಗಂಗೆ ಗೌರಿ’, ‘ಸತಿ ಸುಕನ್ಯ’, 'ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, 'ಪ್ರತಿಧ್ವನಿ', ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, 'ಮುಗಿಯದ ಕಥೆ', 'ಬಿಡುಗಡೆ', 'ದೇವರದುಡ್ಡು', ‘ಕಲಿಯುಗ’, 'ಪಿತಾಮಹ' ಮುಂತಾದ ಚಿತ್ರಗಳಲ್ಲಿ ಹಿರಿಯ ನಟ ರಾಜೇಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಕೇವಲ ನಾಯಕನಾಗಿ ಮಾತ್ರ ರಾಜೇಶ್ ಕನ್ನಡ ಸಿನಿರಸಿಕರ ಮನಸ್ಸು ಗೆದ್ದಿಲ್ಲ. ಪೋಷಕ ನಟನಾಗಿಯೂ ರಾಜೇಶ್ ನಟನೆ ಫೇಮಸ್. 'ಪ್ರತಿಧ್ವನಿ', 'ದೇವರಗುಡಿ', 'ಬದುಕು ಬಂಗಾರವಾಯ್ತು' ಚಿತ್ರಗಳಲ್ಲಿ ಅವರು ನಾಯಕನಾಗಿ ಅಭಿನಯಿಸದಿದ್ದರೂ, ತಮ್ಮ ಅಮೋಘ ನಟನೆಯಿಂದ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ (Sandalwood).
ಇದನ್ನೂ ಓದಿ : 'Madagaja' Movie Success Celebration : 'ಮದಗಜ'ದ ಸಕ್ಸಸ್ ಸೆಲೆಬ್ರೇಷನ್: ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.