Jaya Ekadashi 2022: ಏಕಾದಶಿ ಉಪವಾಸದ ವೇಳೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ..!

ಜಯ ಏಕಾದಶಿ ಉಪವಾಸದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಮಾಘ ಶುಕ್ಲದ ಏಕಾದಶಿಯಂದು ಜಯ ಏಕಾದಶಿ(Jaya Ekadashi 2022)ಯ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿಯ ಜಯ ಏಕಾದಶಿ ಶನಿವಾರ ಅಂದರೆ (ಫೆ.12) ಇಂದು ನಡೆಯಲಿದೆ. ಈ ದಿನದಂದು ಭಗವಾನ್ ವಿಷ್ಣುವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಜಯ ಏಕಾದಶಿಯ ಉಪವಾಸವನ್ನು ಯಾರು ಪೂರ್ಣ ಶ್ರದ್ಧೆಯಿಂದ ಆಚರಿಸುತ್ತಾರೋ ಅವರು ಈ ಉಪವಾಸದ ಪುಣ್ಯದಿಂದ ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಜಯ ಏಕಾದಶಿ ಉಪವಾಸದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಜಯ ಏಕಾದಶಿ ಉಪವಾಸದ ವಿಶೇಷ ನಿಯಮಗಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜಯ ಏಕಾದಶಿ ಉಪವಾಸದ ಸಮಯದಲ್ಲಿ ಭಗವಾನ್ ವಿಷ್ಣುವಿನ ಆರಾಧನೆಯ ವೇಳೆ ತುಳಸಿ ಮತ್ತು ಪಂಚಾಮೃತವನ್ನು ಬಳಸಬೇಕು. ಇದಲ್ಲದೇ ಈ ದಿನ ದಾನವನ್ನು ಸಹ ಮಾಡಬೇಕು. (ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

2 /5

ಜಯ ಏಕಾದಶಿ ಉಪವಾಸದ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಆದ್ದರಿಂದ ಈ ದಿನ ಹಳದಿ ಬಟ್ಟೆಗಳನ್ನು ಧರಿಸಬೇಕು. ಪೂಜೆಯ ಸಮಯದಲ್ಲಿ ಜಯ ಏಕಾದಶಿ ಉಪವಾಸದ ಕಥೆಯನ್ನು ಕೇಳಬೇಕು.

3 /5

ಜಯ ಏಕಾದಶಿಯಂದು ಉಪವಾಸ ಮಾಡುವವರು, ಅವರ ಕುಟುಂಬದವರು ಕೂಡ ಉಪವಾಸದ ವೇಳೆ ತಮ್ಮ ಕೂದಲು, ಉಗುರು ಇತ್ಯಾದಿಗಳನ್ನು ಕತ್ತರಿಸಬಾರದು.

4 /5

ಜಯ ಏಕಾದಶಿಯ ದಿನ ದಾನ ಮಾಡಿದ ಆಹಾರವನ್ನು ಸೇವಿಸಬಾರದು. ಇದರೊಂದಿಗೆ ಅಕ್ಕಿ, ಪಾಲಕ್, ಬಾರ್ಲಿ, ಕ್ಯಾರೆಟ್, ವೀಳ್ಯದೆಲೆ ಇತ್ಯಾದಿಗಳನ್ನು ಸಹ ಈ ದಿನ ಸೇವಿಸಬಾರದು.

5 /5

ಜಯ ಏಕಾದಶಿ ಉಪವಾಸವನ್ನು ಆಚರಿಸುವವರು ಉಪವಾಸದ ಮೊದಲು ಯಾವುದೇ ರೀತಿಯ ತಾಮಸಿಕ ಆಹಾರ ಸೇವಿಸಬಾರದು. ಇದಲ್ಲದೆ ಈ ದಿನ ಕೋಪಗೊಳ್ಳುವುದನ್ನು ತಪ್ಪಿಸಬೇಕು. ಅದೇ ರೀತಿ ಯಾರೂ ನಿಂದನಾತ್ಮಕ ಪದಗಳನ್ನು ಬಳಸಬಾರದು