ನವದೆಹಲಿ: ಇಂದು ನಾವು ನಿಮಗೆ ಇಂಟರ್ನೆಟ್ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದ 7 ವರ್ಷದ ಹುಡುಗಿ(Internet Star Girl)ಯ ಬಗ್ಗೆ ಹೇಳಲಿದ್ದೇವೆ. ಈ ಹುಡುಗಿ ಕೇವಲ 7 ವರ್ಷದಲ್ಲೇ 200 ಕೋಟಿ ರೂ. ಒಡತಿಯಾಗಿದ್ದಾಳೆ. ಇದು ಅಚ್ಚರಿಯಾದರೂ ನಿಜ. ಈ ಯುವತಿ ರಷ್ಯಾದ ಸಾಮಾಜಿಕ ಮಾಧ್ಯಮ ತಾರೆ(Russian Social Media Star) ಅನಸ್ತಾಸಿಯಾ ರಾಡ್ಜಿನ್ಸ್ಕಯಾ.
ವದರಿಗಳ ಪ್ರಕಾರ, ಅನಸ್ತಾಸಿಯಾ(Anastasia Radzinskaya) ಪ್ರಸ್ತುತ ಪ್ರತಿತಿಂಗಳು 1 ಕೋಟಿ ರೂ.ಗಿಂತ ಹೆಚ್ಚು ಗಳಿಸುತ್ತಿದ್ದಾಳೆ. ಕೇವಲ 7 ವರ್ಷ ವಯಸ್ಸಿನಲ್ಲಿಯೇ ಅನಸ್ತಾಸಿಯಾ YouTubeನ ಅತಿದೊಡ್ಡ ಸ್ಟಾರ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾಳೆ. ಅನಸ್ತಾಸಿಯಾ ತನ್ನ ವಿಡಿಯೋಗಳ ಮೂಲಕವೇ ಕಳೆದ ವರ್ಷ 200 ಕೋಟಿ ರೂ. ಗಳಿಸಿದ್ದಾಳೆ. ಈಕೆ ತನ್ನ ಐಷಾರಾಮಿ ಕುಟುಂಬದ ರಜಾ-ಮಜಾದ ವಿಡಿಯೋಗಳನ್ನು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಅಪ್‌ಲೋಡ್ ಮಾಡುತ್ತಾಳೆ.
ಇದನ್ನೂ ಓದಿ: 6Gಯತ್ತ ಹೆಜ್ಜೆ ಹಾಕುತ್ತಿರುವ ರಿಲಯನ್ಸ್ ಜಿಯೋ ,ಹೊಂದಿರಲಿದೆ 5G ಗಿಂತ 100 ಪಟ್ಟು ವೇಗ
ಮಗಳಿಗಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ಪೋಷಕರು
ಅನಸ್ತಾಸಿಯಾ 2014ರಲ್ಲಿ ಜನಿಸಿದಳು. ಇದರ ನಂತರ ವೈದ್ಯರು ಆಕೆಗೆ ಸೆರೆಬ್ರಲ್ ಪಾಲ್ಸಿ ಎಂಬ ನರವೈಜ್ಞಾನಿಕ ಕಾಯಿಲೆ ಇದೆ ಎಂದು ಹೇಳಿದರು. ಇದಾದ ನಂತರ ಆಕೆಯ ಪೋಷಕರು ತಮ್ಮ ಕೆಲಸ ಬಿಟ್ಟು ಮಗಳಿಗಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಅವರು ಈ ಚಾನೆಲ್ ಗೆ ‘ಲೈಕ್ ನಾಸ್ತ್ಯ’(Like Nastya) ಎಂದು ಹೆಸರಿಸಿದ್ದಾರೆ.
ಪೋಷಕರು ಮೂಲತಃ ತಮ್ಮ ಮಗುವಿಗೆ ಶೈಕ್ಷಣಿಕ ಯೋಜನೆಯಾಗಿ ಈ ಚಾನಲ್(YouTube Channel) ಅನ್ನು ಪ್ರಾರಂಭಿಸಿದ್ದರು. ಆದರೆ ಕೆಲವು ದಿನಗಳ ನಂತರ ಅವರು ಈ ಚಾನಲ್‌ನಿಂದ ಸಾಕಷ್ಟು ಹಣ ಸಂಪಾದಿಸಲು ಪ್ರಾರಂಭಿಸಿದರು. ಇದರ ನಂತರ ಅನಸ್ತಾಸಿಯಾ ಪೋಷಕರು ಈ ಚಾನಲ್‌ನಲ್ಲಿ ವಿವಿಧ ರೀತಿಯ ವಿಷಯಗಳ ವಿಡಿಯೋ ಹಾಕಲು ಪ್ರಾರಂಭಿಸಿದರು. ಕಳೆದ ವರ್ಷ YouTubeನಿಂದ ಅತಿಹೆಚ್ಚು ಸಂಭಾವನೆ ಪಡೆಯುವ ಕಂಟೆಂಟ್ ಕ್ರಿಯೇಟರ್ಸ್ ಪಟ್ಟಿಯಲ್ಲಿ ಅನಸ್ತಾಸಿಯಾ 6ನೇ ಸ್ಥಾನದಲ್ಲಿದ್ದಾಳೆಂದರೆ ನಿಮಗೆ ಆಶ್ಚರ್ಯವಾಗುತ್ತದೆ.
ಇದನ್ನೂ ಓದಿ: Malala Yousafzai : ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಮಲಾಲಾ ಯೂಸುಫ್‌ಜಾಯ್!
ಒಂದೇ ವಿಡಿಯೋಗೆ 90 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ
ಅನಸ್ತಾಸಿಯಾ 1 ವರ್ಷದ ಹಿಂದೆ ಯೂಟ್ಯೂಬ್‌ನಲ್ಲಿ ವಿಡಿಯೋ(YouTube Video)ವೊಂದನ್ನು ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ಇದುವರೆಗೆ 90 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ‘ಲೈಕ್ ನಾಸ್ತ್ಯ’ ಯೂಟ್ಯೂಬ್ ಚಾನೆಲ್‌ನಲ್ಲಿ 86 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರಿದ್ದಾರೆ. ಅದೇ ರೀತಿ ಈ ಚಾನಲ್ ಇಲ್ಲಿವರೆಗೆ ಒಟ್ಟು 6,900 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಲಕ್ಷಾಂತರ ಜನರು ಅನಸ್ತಾಸಿಯಾ ಹಾಕುವ ವಿಡಿಯೋಗಳನ್ನು ಮನಸಾರೆ ಇಷ್ಟಪಡುತ್ತಾರೆ. ಇದರಿಂದಾಗಿ ಆಕೆ ಕೋಟಿ ಕೋಟಿ ಲೆಕ್ಕದಲ್ಲಿ ದುಡ್ಡು ಗಳಿಸುತ್ತಿದ್ದಾಳೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.