Ayushman Gharat Golden Card Benefits - ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆಯನ್ನು (Ayushman Bharat Yojna) ದೇಶದ ಸಾರ್ವಜನಿಕರಿಗೆ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಪ್ರಾರಂಭಿಸಲಾಗಿದೆ. ಇದೇ ವೇಳೆ, ಈ ಕಾರ್ಡ್ (Ayushman Bharat Golden Card) ಮಾಡಿಸಲು ಈ ಹಿಂದೆ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು, ಆದರೆ ಇದೀಗ ಈ ಪ್ರಕ್ರಿಯೆಯನ್ನು ಸಹ ಅತ್ಯಂತ ಸುಲಭಗೊಳಿಸಲಾಗಿದೆ. ಈಗ ಮನೆಯಲ್ಲಿ ಕುಳಿತು ನೀವು ಆನ್ಲೈನ್ ಕಾರ್ಡ್ ತಯಾರಾಗಲಿದೆ. ಇದಕ್ಕಾಗಿ ಸರ್ಕಾರದಿಂದ (Modi Government) ಪೋರ್ಟಲ್ (Ayushman Bharat Portal) ಆರಂಭಿಸಿದೆ.
ಸರ್ಕಾರದಿಂದ ಈ ಸವಲತ್ತುಗಳು ಸಿಗಲಿವೆ
ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ 5 ಲಕ್ಷ ರೂಪಾಯಿ ಚಿಕಿತ್ಸೆ ನೀಡಲಾಗುತ್ತದೆ. ಈ ಅಭಿಯಾನದ ಅಡಿಯಲ್ಲಿ, ವಿವರಗಳನ್ನು ನಿಮ್ಮ ಮನೆಯಲ್ಲಿ ಬಂದು ಸಂಗ್ರಹಿಸಲಾಗುತ್ತದೆ ಮತ್ತು ನಂತರ ಕಾರ್ಡ್ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಕಾರ್ಡ್ PVC ರೂಪದಲ್ಲಿ ಲಭ್ಯವಿರುತ್ತದೆ.
ಇಲ್ಲಿ ವಿಶೇಷ ಎಂದರೆ ಇದಕ್ಕಾಗಿ ನಿಮ್ಮಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆಯಲಾಗುವುದಿಲ್ಲ. ಈ ಯೋಜನೆಯ ಅಡಿ ಬರುವ ಜನರನ್ನು ಗುರುತಿಸಿ ಅವರಿಗೆ ಶಾಶ್ವತ ಕಾರ್ಡ್ ಒದಗಿಸುವುದು ಮತ್ತು ಸರಿಯಾದ ಸಮಯದಲ್ಲಿ ಅವರಿಗೆ ಚಿಕಿತ್ಸೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆಗೆ ಚಿಕಿತ್ಸೆಯ ಅಡಿ ಬರುವವರಿಗೆ ವಿಮಾ ಮೊತ್ತ ತಲುಪಿಸುವುದು ಕೂಡ ಇದರ ಉದ್ದೇಶ.
ಈ ಕಾರ್ಡ್ ಹೇಗೆ ಮಾಡಿಸಬೇಕು?
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಇಡೀ ಕುಟುಂಬದ ಹೆಸರನ್ನು ಸೇರಿಸಲು, ನೀವು ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ CMO ಅನ್ನು ಸಂಪರ್ಕಿಸಬೇಕು. ಈ ಯೋಜನೆಗೆ ಅರ್ಹರಾಗಿರುವ ಯಾವುದೇ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ. ಒಂದು ವೇಳೆ ಅರ್ಹ ವ್ಯಕ್ತಿಯು ಈ ಕಾರ್ಡ್ ಹೊಂದಿಲ್ಲದಿದ್ದರೆ, ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರುವ ಪ್ರಧಾನ ಮಂತ್ರಿ ಆರೋಗ್ಯ ಮಿತ್ರರನ್ನು ಭೇಟಿಯಾಗಿ ಅವರಿಂದ ತಮ್ಮ ಕಾರ್ಡ್ ಅನ್ನು ಪಡೆಯಬಹುದು.
ಇದನ್ನೂ ಓದಿ-ಹಿಜಾಬ್ ನಿಷೇಧದಿಂದ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಕಷ್ಟ ಪಡಬೇಕಾಗುತ್ತದೆ: ಮಾಜಿ ಸಿಎಂ ಹೆಚ್ ಡಿಕೆ
ಮೊದಲು pmjay.csccloud.in ನಲ್ಲಿ ಆಯುಷ್ಮಾನ್ ಭಾರತ್ನ ಕ್ಲೌಡ್ ವೆಬ್ಸೈಟ್ಗೆ ಭೇಟಿ ನೀಡಿ. ವೆಬ್ಸೈಟ್ಗೆ ಭೇಟಿ ನೀಡಿದ ನಂತರ, ನೀವು ಮುಖಪುಟದಲ್ಲಿ ಲಾಗಿನ್ ಆಯ್ಕೆಯನ್ನು ನೋಡುತ್ತೀರಿ. ಆ ಆಯ್ಕೆಯಲ್ಲಿ ಇಮೇಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ ಮತ್ತು ಸೈನ್ ಇನ್ ಬಟನ್ ಕ್ಲಿಕ್ ಮಾಡುವ ಮೂಲಕ ಸೈನ್ ಇನ್ ಮಾಡಿ. ಸೈನ್ ಇನ್ ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
ಇದನ್ನೂ ಓದಿ-ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಬಟ್ಟೆಗಳನ್ನು ನಿಷೇಧಿಸಿ ಆದೇಶ
ಇದಲ್ಲದೆ, ಫಲಾನುಭವಿಗಳು ಇ-ಕಾರ್ಡ್ ಮಾಡಲು ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ವಿವರಗಳನ್ನು ಕಾಗದದ ಮೇಲೆ ಬರೆಯಿರಿ, ನಂತರ ಮಾಹಿತಿಯನ್ನು ನಿಮ್ಮ ಮನೆಯಲ್ಲಿ ಅಧಿಕಾರಿಗಳು ಪರಿಶೀಲಿಸುತ್ತಾರೆ ಮತ್ತು ನಂತರ ಪಿವಿಸಿ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ನಿಮ್ಮ ಮನೆಗೆ ಕಳುಹಿಸಲಾಗುತ್ತದೆ.
ಇದನ್ನೂ ಓದಿ-ಬೆಳ್ಳನೆ ಬೆಳಗಾಯಿತು' ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲತಾ ಮಂಗೇಶ್ಕರ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.