ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್ನಲ್ಲಿ ನಿರ್ಮಿಸಲಾದ ಸಂತ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಲೋಕಾರ್ಪಣೆ ಮಾಡಿದ್ದಾರೆ.
ಸಮಾನತೆಯ ಹರಿಕಾರ, ಸಂತ, ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಸಮಾನತೆಯ ಪ್ರತಿಮೆ(Statue of Equality)ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ(ಫೆ.5) ಹೈದರಾಬಾದ್ ನಲ್ಲಿ ಅನಾವರಣಗೊಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ(ಫೆ.5) ಹೈದರಾಬಾದ್ ನಲ್ಲಿ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಸಮಾನತೆಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು.
ಈ ಪ್ರತಿಮೆಯು ಯುವಕರಿಗೆ ಪ್ರೇರಣೆಯಾಗಲಿದ್ದು, ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಪ್ರತೀಕವಾಗಿರಲಿದೆ. ಅಭಿವೃದ್ಧಿಗಾಗಿ ನಮ್ಮ ಪರಂಪರೆ, ಬೇರುಗಳನ್ನು ಮರೆಯಬಾರದು ಎಂಬುದು ಮುಖ್ಯ. ರಾಮಾನುಜಾಚಾರ್ಯರು ದಲಿತ ಸಮುದಾಯದ ಉದ್ಧಾರಕ್ಕಾಗಿ ಶ್ರಮಿಸಿದ್ದರು ಎಂದು ಪ್ರಧಾನಿ ಮೋದಿ 11ನೇ ಶತಮಾನದ ಸಂತರನ್ನು ಸ್ಮರಿಸಿದ್ದಾರೆ.
ರಾಮಾನುಜಾಚಾರ್ಯರ ಸಮಾನತೆಯ ಪರಿಕಲ್ಪನೆಯು ಅವರ ಕಾಲಘಟ್ಟದಲ್ಲಿ ಅತ್ಯಂತ ಪ್ರಗತಿಪರವಾಗಿತ್ತು. ಅವರು ಸಮಾಜದಲ್ಲಿದ್ದ ಅಸಮಾನತೆಯನ್ನು ತೊಡೆದುಹಾಕುವುದಕ್ಕಾಗಿ ಶ್ರಮಿಸಿದ್ದರು. ಸಮಾನತೆಯ ಬೃಹತ್ ಪ್ರತಿಮೆಯ ಮೂಲಕ ರಾಮಾನುಜಾಚಾರ್ಯರು ನಮಗೆ ಸಮಾನತೆಯ ಸಂದೇಶ ಸಾರುತ್ತಿದ್ದಾರೆ ಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ.
ಶ್ರೀ ರಾಮಾನುಜಾಚಾರ್ಯರು ಸಂಸ್ಕೃತದಲ್ಲಿ ಗ್ರಂಥರಚನೆಯ ಜೊತೆಗೆ ಭಕ್ತಿ ಮಾರ್ಗದಲ್ಲಿ ತಮಿಳು ಭಾಷೆಗೂ ಸಮಾನ ಪ್ರಾಮುಖ್ಯತೆ ನೀಡಿದ್ದರು. ನಮ್ಮ ಸಂಸ್ಕೃತಿ, ಪರಂಪರೆಗೆ ಅವರು ಅಮೂಲ್ಯ ಆಸ್ತಿಯಾಗಿದ್ದಾರೆ ಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ.
ಶ್ರೀ ರಾಮಾನುಜಾಚಾರ್ಯರ ಬೋಧನೆಗಳಲ್ಲಿ ದ್ವೈತ ಹಾಗೂ ಅದ್ವೈತ ಸಮ್ಮಿಳಿತಗೊಂಡಿದ್ದವು. ವಿಶಿಷ್ಟಾದ್ವೈತ ಬೋಧನೆ ಸಮಕಾಲೀನದಲ್ಲಿ ನೈಜವಾಗಿದ್ದು, ವ್ಯಕ್ತಿಗತವಾಗಿ ಹಾಗೂ ದೇಶದ ಪ್ರಜೆಗಳಾಗಿ ನಮ್ಮ ಜೀವನವನ್ನು ಸರಳಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ರಾಮಾನುಜಾಚಾರ್ಯರ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಶ್ರೇಷ್ಠ ನಾಯಕ ಹಾಗೂ ಸಮಾನತೆಯ ಪ್ರತಿಪಾದಕರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೀ ರಾಮಾನುಜಾಚಾರ್ಯರ ಅನುಯಾಯಿಯಾಗಿದ್ದರು. ಅಷ್ಟೇ ಅಲ್ಲದೇ ಎಲ್ಲರಿಗೂ ಸಮಾನವಾದ ಸಮಾಜದ ಪರಿಕಲ್ಪನೆಗೆ ಬದ್ಧರಾಗಿದ್ದರು ಎಂದು ಮೋದಿ ಹೇಳಿದ್ದಾರೆ.