WATCH: ಫೋಟೋ ತೆಗೆಯುತ್ತಿದ್ದವರ ಮೇಲೆ ಅಟ್ಯಾಕ್ ಮಾಡಿದ ಘೇಂಡಾಮೃಗ

Rhino Attack Video: ಕುಟುಂಬದ ಸದಸ್ಯರು ಜಂಗಲ್ ಸಫಾರಿಗೆ ತೆರಳಿದ್ದಾರೆ. ಈ ವೇಳೆ ಘೇಂಡಾಮೃಗವು ಅವರಿದ್ದ ಜೀಪನ್ನು ಎರಡು ಕಿಲೋಮೀಟರ್‌ಗಳಷ್ಟು ದೂರ ಹಿಂಬಾಲಿಸಿದೆ. 

Edited by - Zee Kannada News Desk | Last Updated : Feb 2, 2022, 01:39 PM IST
  • ಕುಟುಂಬದ ಸದಸ್ಯರು ಜಂಗಲ್ ಸಫಾರಿಗೆ ತೆರಳಿದ್ದಾರೆ
  • ಫೋಟೋ ತೆಗೆಯುತ್ತಿದ್ದವರ ಮೇಲೆ ಅಟ್ಯಾಕ್ ಮಾಡಿದ ಘೇಂಡಾಮೃಗ
  • ಎರಡು ಕಿಲೋಮೀಟರ್‌ಗಳಷ್ಟು ದೂರ ಹಿಂಬಾಲಿಸಿದೆ
WATCH: ಫೋಟೋ ತೆಗೆಯುತ್ತಿದ್ದವರ ಮೇಲೆ ಅಟ್ಯಾಕ್ ಮಾಡಿದ ಘೇಂಡಾಮೃಗ  title=
ಘೇಂಡಾಮೃಗ

ಸಾಮಾಜಿಕ ಜಾಲತಾಣಗಳಲ್ಲಿ ಜಂಗಲ್ ಸಫಾರಿಯ ಹಲವು ವಿಡಿಯೋಗಳನ್ನು ನೀವು ನೋಡಿರಬೇಕು. ಈ ವಿಡಿಯೋಗಳಲ್ಲಿ ನೀವು ಅನೇಕ ಬಾರಿ ಕಾಡಿಗೆ ಭೇಟಿ ನೀಡಲು ಬಂದವರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುವುದನ್ನು ನೋಡಿರಬೇಕು. ಇಂದು ನಾವು ನಿಮಗೆ ಅಂತಹ ಒಂದು ವಿಡಿಯೋವನ್ನು (Rhino Attack Video) ತೋರಿಸಲಿದ್ದೇವೆ. ಈ ದೃಶ್ಯ ಮೈ ನವಿರೇಳಿಸುವಂತಿದೆ.

ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ pre-installed ಅಪ್ಲಿಕೇಶನ್‌ಗಳಿಂದ ಬೇಸತ್ತಿದ್ದೀರಾ? delete ಮಾಡುವ ಸುಲಭ ಮಾರ್ಗ ಇಲ್ಲಿದೆ

ಕುಟುಂಬದ ಸದಸ್ಯರು ಜಂಗಲ್ ಸಫಾರಿಗೆ ತೆರಳಿದ್ದಾರೆ. ಈ ಸಮಯದಲ್ಲಿ, ಅವರು ಘೇಂಡಾಮೃಗವನ್ನು ನೋಡಿ ಸಂತೋಷಗೊಂಡಿದ್ದಾರೆ. ಅದರ ಫೋಟೋ ತೆಗೆಯಲು ಮತ್ತು ವಿಡಿಯೋ (Viral Video) ಮಾಡಲು ಪ್ರಾರಂಭಿಸುತ್ತಾರೆ. ಈ ವೇಳೆ ಕುಟುಂಬಸ್ಥರು ಸಖತ್ ಎಂಜಾಯ್ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.  

ಕುಟುಂಬಸ್ಥರು ಮಾಡುತ್ತಿರುವ ವಿಡಿಯೋದಿಂದ ಘೇಂಡಾಮೃಗ (Rhino) ಸಿಟ್ಟಿಗೆದ್ದಿರುವುದನ್ನು ಕಾಣಬಹುದು. ಬಳಿಕ ಕುಟುಂಬಸ್ಥರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಇದರಿಂದ ಪ್ರವಾಸಿಗರು ಭಯಗೊಂಡಿದ್ದು, ಕಾರನ್ನು ಚಾಲಕ ವೇಗವಾಗಿ ಓಡಿಸಿ ರಕ್ಷಿಸಿದ್ದಾರೆ. 

 

 

ಘೇಂಡಾಮೃಗವು ಜೀಪನ್ನು ಎರಡು ಕಿಲೋಮೀಟರ್‌ಗಳಷ್ಟು ಹಿಂಬಾಲಿಸಿದೆ. ಈ ವೇಳೆ ಕುಟುಂಬಸ್ಥರು ಭಯಭೀತರಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕುಟುಂಬ ಸದಸ್ಯರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ವಿಡಿಯೋವನ್ನು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ (National Park) ಕುರಿತು ಹೇಳಲಾಗುತ್ತಿದೆ. @PotholeWarriors ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಸಂವಿಧಾನದ ಬಗ್ಗೆ ತೆಲಂಗಾಣ ಮುಖ್ಯಮತ್ರಿಯ ವಿವಾದಾತ್ಮಕ ಹೇಳಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News